ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ವಿರುದ್ಧ ತಾಲಿಬಾನ್‌ ಗುಡುಗು 

Last Updated 6 ಏಪ್ರಿಲ್ 2020, 2:54 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಅಮೆರಿಕದೊಂದಿಗೆ ಇತ್ತೀಚೆಗಷ್ಟೇ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದ್ದ ಆಫ್ಗಾನಿಸ್ತಾನದ ತಾಲಿಬಾನಿ ಪಡೆಗಳು, ಸದ್ಯ ಒಪ್ಪಂದವನ್ನೇ ಮುರಿದುಕೊಳ್ಳುವ ಹಂತಕ್ಕೆ ಬಂದಿವೆ.

ಅಮೆರಿಕದ ವಿರುದ್ಧ ಗುಡುಗಿರುವ ತಾಲಿಬಾನ್‌, ಶಾಂತಿ ಒಪ್ಪಂದವು ಮುರಿದು ಬೀಳುವುವ ಹಂತವನ್ನು ಸಮೀಪಿಸುತ್ತಿದೆ ಎಂದಿದೆ.
ಈ ಕುರಿತು ಭಾನುವಾರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ತಾಲಿಬಾನ್‌ ‘ಶಾಂತಿ ಒಪ್ಪಂದವನ್ನು ಅಮೆರಿಕ ಉಲ್ಲಂಘಿಸುತ್ತಿದೆ. ನಾಗರಿಕರ ಮೇಲಿನ ಡ್ರೋಣ್‌ ದಾಳಿಗಳು ನಿಂತಿಲ್ಲ. ಇನ್ನೊಂದೆಡೆ, ಒಪ್ಪಂದದಲ್ಲಿರುವಂತೆ ಆಫ್ಗಾನಿಸ್ತಾನ ಸರ್ಕಾರ 5000 ಕೈದಿಗಳನ್ನು ಬಿಡುಗಡೆ ಮಾಡಿಲ್ಲ,’ ಎಂದು ಆರೋಪಿಸಿದೆ.

ಒಪ್ಪಂದದ ನಂತರ ನಾವು ಈ ವರೆಗೆ ಆಫ್ಗಾನಿಸ್ತಾನ ಮತ್ತು ಅಂತಾರಾಷ್ಟ್ರೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿಲ್ಲ ಎಂದೂ ತಾಲಿಬಾನ್‌ ತಿಳಿಸಿದೆ.

ಅಮೆರಿಕ ಮತ್ತು ಆಫ್ಗಾನಿಸ್ತಾನ ಸರ್ಕಾರಗಳು ಒಪ್ಪಂದವನ್ನು ಹೀಗೇ ಉಲ್ಲಂಘನೆ ಮಾಡುತ್ತಾ ಹೋದರೆ ಸಂಘರ್ಷ ಹೆಚ್ಚಾಗಲಿದೆ ಎಂದು ಎಚ್ಚರಿಸಿದೆ. ‘ನಮ್ಮ ನಡುವೆ ಉಂಟಾಗುವ ಅಪನಂಬಿಕೆಗಳು ಕೇವಲ ನಮ್ಮ ಒಪ್ಪಂದಕ್ಕೆ ಧಕ್ಕೆ ಮಾತ್ರ ತರುವುದಿಲ್ಲ. ಬದಲಿಗೆ, ಮುಜಾಹಿದ್ದೀನ್‌ ಪಡೆಗಳು ತಕ್ಕ ಉತ್ತರ ನೀಡಲಿವೆ. ಹೋರಾಟ ತೀವ್ರಗೊಳಿಸಲಿವೆ,’ ಎಂದು ಹೇಳಿದೆ.

‘ಒಪ್ಪಂದಕ್ಕೆ ಬದ್ಧವಾಗಿರುವಂತೆ ನಾವು ಅಮೆರಿಕಕ್ಕೆ ಸೂಚನೆ ನೀಡುತ್ತಲೇ ಇದ್ದೇವೆ. ಅದರ ಮಿತ್ರಕೂಟವೂ ನಮ್ಮ ನಡುವಿನ ಒಪ್ಪಂದಕ್ಕೆ ಬದ್ಧವಾಗಿರಬೇಕು ಎಂದು ಬುದ್ಧಿಹೇಳುವಂತೆಯೂ ನಾವು ತಿಳಿಸುತ್ತಿದ್ದೇವೆ,’ ಎಂದೂ ತಾಲಿಬಾನ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT