ವಾಷಿಂಗ್ಟನ್: 'ಕೊರೊನಾ ವೈರಸ್ ಸೋಂಕಿತರು ಮತ್ತು ಸಾವಿನ ಬಗ್ಗೆ ಚೀನಾ ವರದಿ ಮಾಡಿರುವ ಅಂಕಿಅಂಶಗಳ ಬಗ್ಗೆ ಸಂದೇಹವಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ಚೀನಾ ಸರಿಯಾದ ಅಂಕಿಅಂಶ ನೀಡಿದೆ ಎಂದು ಖಾತರಿಪಡಿಸಿಕೊಳ್ಳಲುಅಮೆರಿಕಕ್ಕೆ ಸಾಧ್ಯವೇ ಆಗಿಲ್ಲ' ಎಂದು ಅಮೆರಿಕದರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳಿದ್ದಾರೆ.

ಕೊರೊನಾ ವೈರಸ್ ಪಿಡುಗಿನ ಬಗ್ಗೆ ಚೀನಾ ನೀಡಿದ್ದ ಅಂಕಿಅಂಶಗಳ ಬಗ್ಗೆ ಈವರೆಗೆ ಹಲವರು ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಈ ಬಾರಿ ಸ್ವತಃ ಅಮೆರಿಕದ ಅಧ್ಯಕ್ಷರು ಸಂದೇಹ ವ್ಯಕ್ತಪಡಿಸಿದ್ದಾರೆ. ಇದುಚೀನಾ ಮತ್ತು ಅಮೆರಿಕ ನಡುವೆ ಮತ್ತೊಂದು ಸುತ್ತಿನ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಬಹುದುಎಂದು ಹಲವರು ವಿಶ್ಲೇಷಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಸದಸ್ಯರೊಬ್ಬರು ಚೀನಾ ವರದಿ ಮಾಡಿರುವ ಅಂಕಿಅಂಶಗಳು ನಂಬಲು ಅರ್ಹವಿಲ್ಲ ಎಂದು ಹೇಳಿದ್ದರು. ಅಮೆರಿಕದ ಗುಪ್ತಚರ ಇಲಾಖೆಯ ವರದಿಯೊಂದನ್ನು ಉಲ್ಲೇಖಿಸಿ ವರದಿ ಮಾಡಿದ್ದ ಬ್ಲೂಂಬರ್ಗ್ ನ್ಯೂಸ್, 'ಕೊರೊನಾ ವೈರಸ್ನಿಂದ ಉಂಟಾಗಿರುವ ಸಾವುಗಳ ಸಂಖ್ಯೆಯನ್ನು ಚೀನಾ ಪೂರ್ಣ ಪ್ರಮಾಣದಲ್ಲಿ ಬಹಿರಂಗಪಡಿಸಿಲ್ಲ' ಎಂದು ಹೇಳಿತ್ತು.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಡಿಸೆಂಬರ್ 2019ರಲ್ಲಿ ಕೊರೊನಾ ವೈರಸ್ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಆದರೆ ಈವರೆಗೆ ಅಮೆರಿಕಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಚೀನಾ ಕೊರೊನಾ ಸೋಂಕಿತರು ಮತ್ತು ಸಾವಿನ ಸಂಖ್ಯೆಯನ್ನು ಬಹಿರಂಪಡಿಸಿದೆ. ಅಮೆರಿದಲ್ಲಿ ಈವರೆಗೆ ವಿಶ್ವದಲ್ಲಿಯೇ ಅತಿಹೆಚ್ಚು ಸಂಖ್ಯೆಯಲ್ಲಿ (2.14 ಲಕ್ಷ ಜನರಲ್ಲಿ)ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈವರೆಗೆ 4,800 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಕಾರ್ಯಪಡೆಯೊಂದಿಗಿನ ತಮ್ಮ ಪ್ರತಿದಿನ ಸಂವಾದದ ಸಂದರ್ಭ ಈ ವಿಚಾರ ಪ್ರಸ್ತಾಪಿಸಿದ ಟ್ರಂಪ್, 'ನನಗೆ ಈವರೆಗೂ ಬ್ಲೂಂಬರ್ಗ್ ವರದಿ ಮಾಡಿರುವ ಗುಪ್ತಚರ ಇಲಾಖೆಯ ವರದಿ ಸಿಕ್ಕಿಲ್ಲ. ಆದರೆ 'ಚೀನಾ ವರದಿ ಮಾಡಿರುವ ಸಂಖ್ಯೆಗಳನ್ನು ನಂಬಲು ಆಗುತ್ತಿಲ್ಲ. ನಾವು ಏನು ಗಮನಿಸಿದೆವೋ ಆ ಪ್ರಮಾಣದ ಅಂಕಿಸಂಖ್ಯೆಗಳು ಚೀನಾ ನೀಡುತ್ತಿರುವ ವರದಿಗಳಲ್ಲಿ ಕಂಡು ಬರುತ್ತಿಲ್ಲ' ಎಂದು ಹೇಳಿದರು.

ಕೊರೊನಾ ವೈರಸ್ ಸೋಂಕನ್ನು ಚೀನಾ ಹೇಗೆ ನಿರ್ವಹಿಸಿತು ಎಂಬ ಬಗ್ಗೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ ಟ್ರಂಪ್ ಈಚಗೆದೂರವಾಣಿ ಮೂಲಕ ಮಾಹಿತಿ ಪಡೆದುಕೊಂಡಿದ್ದರು. ಈ ಸಂದರ್ಭ ಸಾವು ಮತ್ತು ಸೋಂಕಿತರ ಅಂಕಿಅಂಶಗಳ ವಿಚಾರ ಚರ್ಚೆಗೆ ಬರಲಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದರು.

ಕಳೆದ ಶುಕ್ರವಾರ ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ ನಂತರ ಚೀನಾ ಮೇಲೆ ಹರಿಹಾಯುವುದನ್ನು ಟ್ರಂಪ್ ಕಡಿಮೆ ಮಾಡಿದ್ದಾರೆ. 'ಎರಡೂ ದೇಶಗಳ ನಡುವೆ ಸೌಹಾರ್ದ ಸಂಬಂಧವಿದೆ. ನಮ್ಮ ಎಲ್ಲ ವ್ಯಾಪಾರ ಒಪ್ಪಂದಗಳನ್ನು ಮುಂದುವರಿಸಲು ಬದ್ಧರಾಗಿದ್ದೇವೆ' ಎಂದು ಟ್ರಂಪ್ ಹೇಳಿದ್ದರು.

'ಚೀನಾದವರು ಹೇಳುತ್ತಿರುವ ಅಂಕಿಗಳು ಸರಿಯೋ ತಪ್ಪೋ ನನಗೆ ತಿಳಿಯದು. ನಾನೇನು ಆ ದೇಶದ ಅಕೌಂಟೆಂಟ್ ಅಲ್ಲ' ಎಂದು ಟ್ರಂಪ್ ತಮ್ಮದೇ ಶೈಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

ಅಮೆರಿಕದ ಆಕ್ಷೇಪಗಳ ಬಗ್ಗೆ ಚೀನಾ ರಾಜಧಾನಿ ಬೀಚಿಂಗ್ನಲ್ಲಿ ಪ್ರತಿಕ್ರಿಯಿಸಿದ್ದ ವಿದೇಶಾಂಗ ವ್ಯವಹಾರಗಳ ವಕ್ತಾರೆ ಹ್ವೂ ಚುನ್ಯಂಗ್, 'ಕೊರೊನಾ ವೈರಸ್ ಸೋಂಕು ಹರಡುವುದು ಆರಂಭವಾದ ದಿನದಿಂದಲೂಚೀನಾ ಮುಕ್ತ ಮತ್ತು ಪಾರದರ್ಶಕವಾಗಿ ಸಂಖ್ಯೆಗಳನ್ನು ನೀಡುತ್ತಿದೆ' ಎಂದು ಹೇಳಿದರು. ಅಮೆರಿಕದ ಅಧಿಕಾರಿಗಳನ್ನು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.