ಇಸ್ಲಾಮಾಬಾದ್: ಕಾಶ್ಮೀರದ ಕುರಿತು ಪೋಸ್ಟ್ ಮಾಡಿದ್ದಕ್ಕಾಗಿ 200 ಪಾಕಿಸ್ತಾನ ಪ್ರಜೆಗಳ ಖಾತೆಗಳನ್ನು ಟ್ವಿಟರ್ ಅಮಾನತು ಮಾಡಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಸರ್ಕಾರ, ಟ್ವಿಟರ್, ಪಕ್ಷಪಾತ ನಿಲುವು ಹೊಂದಿದೆ ಎಂದು ಆರೋಪಿಸಿ ಇಲ್ಲಿನ ಪ್ರಾದೇಶಿಕಟ್ವಿಟರ್ ಕಚೇರಿಗೆ ದೂರು ನೀಡಿದೆ.

ಅಮಾನತಿನ ಕುರಿತು ಸ್ಪಷ್ಟನೆ ನೀಡುವಂತೆಯೂ ದೂರಿನಲ್ಲಿ ಕೇಳಲಾಗಿದೆ ಎಂದು ಸರ್ಕಾರ ಹೇಳಿದೆ.

‘ತನ್ನ ಮಾರ್ಗಸೂಚಿ ಅಡಿಯಲ್ಲೇ ನಡೆಸುವ ರಾಜಕೀಯ ಚರ್ಚೆಗಳನ್ನು ನಿಯಂತ್ರಿಸುವ ಹಕ್ಕು ಟ್ವಿಟರ್ಗೆ ಇಲ್ಲ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಡಿಜಿಟಲ್ ಮಾಧ್ಯಮ ಸಲಹೆಗಾರ ಅರ್ಸ್ಲಾನ್ ಖಾಲಿದ್ ಅಭಿಪ್ರಾಯಪಟ್ಟಿದ್ದಾರೆ.

‘ಮತ್ತೊಮ್ಮೆ ಈ ರೀತಿಯ ಪರಿಸ್ಥಿತಿ ಉದ್ಭವಿಸದಂತೆ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ ಸಹಾಯದೊಂದಿಗೆ ದೀರ್ಘಕಾಲೀನ ತಂತ್ರದ ಕುರಿತು ಚರ್ಚೆ ನಡೆಸಲಾಗುತ್ತಿದೆ’ ಎಂದು ಅರ್ಸ್ಲಾನ್ ಖಾಲಿದ್ ಹೇಳಿದರು.

ಆರೋಪ ನಿರಾಕರಣೆ: ಪಾಕಿಸ್ತಾನ ಸರ್ಕಾರ ಆರೋಪವನ್ನು ನಿರಾಕರಿಸಿರುವ ಟ್ವಿಟರ್, ನಿಯಮಾವಳಿಗಳನ್ನು ನ್ಯಾಯಸಮ್ಮತವಾಗಿ ಹಾಗೂ ಪಕ್ಷಾತೀತವಾಗಿ ಜಾರಿ ಮಾಡಲಾಗಿದೆ ಎಂದಿದೆ.

‘ನಮ್ಮ ನಿಯಮಾವಳಿಗಳ ಅಡಿಯಲ್ಲಿ ನಡೆಯುವ ಯಾವುದೇ ವಿಷಯದ ಕುರಿತ ಪರ ಹಾಗೂ ವಿರೋಧ ಚರ್ಚೆಯನ್ನು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದೇ ನಾವು ನಂಬಿದ್ದೇವೆ. ಭಯೋತ್ಪಾದನೆ, ದ್ವೇಷದ ನಡವಳಿಕೆ, ನಿಂದನೆ ಕುರಿತ ಪೋಸ್ಟ್ಗಳನ್ನು ಟ್ವಿಟರ್ ನಿಷೇಧಿಸುತ್ತದೆ. ಯಾರೂ ಈ ನಿಯಮಗಳಿಗಿಂತ ದೊಡ್ಡವರಲ್ಲ’ ಎಂದು ಟ್ವಿಟರ್ ವಕ್ತಾರ ತಿಳಿಸಿದರು.

ಯಾವ ಕಾರಣಕ್ಕಾಗಿ ಖಾತೆಗಳನ್ನು ಅಮಾನತು ಮಾಡಲಾಗಿದೆ ಎಂದು ಅವರು ವಿವರಿಸಲಿಲ್ಲ. ಕಾಶ್ಮೀರದ ಕುರಿತು ಪೋಸ್ಟ್ ಮಾಡಿದ ಬಳಿಕ ತಮ್ಮ ಖಾತೆಗಳು ಅಮಾನತುಗೊಳ್ಳುತ್ತಿವೆ ಎಂದು ಹಲವು ಪಾಕಿಸ್ತಾನಿ ಪ್ರಜೆಗಳು ಕಳೆದ ಒಂದು ವಾರದಿಂದ ಟ್ವಿಟರ್ಗೆ ಮಾಹಿತಿ ನೀಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.