ಭಾನುವಾರ, ಜುಲೈ 25, 2021
21 °C

ಚೀನಾ, ರಷ್ಯಾ, ಟರ್ಕಿ ಸರ್ಕಾರಗಳ ಸಂಬಂಧಿತ ಖಾತೆಗಳನ್ನು ತೆಗೆದುಹಾಕಿದ ಟ್ವಿಟರ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸ್ಯಾನ್ ಫ್ರಾನ್ಸಿಸ್ಕೊ(ಯುಎಸ್‌ಎ): ಚೀನಾ, ರಷ್ಯಾ ಮತ್ತು ಟರ್ಕಿ ದೇಶಗಳ ಸರ್ಕಾರಗಳಿಗೆ ಸಂಬಂಧಿಸಿದ 1,70,000ಕ್ಕೂ ಹೆಚ್ಚು ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ಟ್ವಿಟರ್‌ ಗುರುವಾರ ತಿಳಿಸಿದೆ.

ತಪ್ಪು ಮಾಹಿತಿ ಹರಡವುದು, ಸಿದ್ದಾಂತಗಳನ್ನು ಪ್ರಚಾರ ಮಾಡುವುದು ಅಥವಾ ಆಡಳಿತದ ಟೀಕಾಕಾರರನ್ನು ನಿಂದಿಸಲು ಈ ಖಾತೆಗಳು ಬಳಕೆಯಾಗುತ್ತಿದ್ದವೆಂದು ಅಮೆರಿಕ ಮೂಲದ ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ ಸ್ಪಷ್ಟಪಡಿಸಿದೆ. 

ತೆಗೆದುಹಾಕಿರುವ ಹೆಚ್ಚಿನ ಖಾತೆಗಳು ಚೀನಾ ಸರ್ಕಾರದ ಸಂಪರ್ಕಗಳನ್ನು ಹೊಂದಿದ್ದು, 23,750 ಖಾತೆಗಳನ್ನು ಹೆಚ್ಚು ಪ್ರಚಲಿತದಲ್ಲಿಡಲು 1,50,000 ವರ್ಧಕ (ಎಂಪ್ಲಿಫಯರ್) ಖಾತೆಗಳನ್ನು ತೆರೆಯಲಾಗಿತ್ತು ಎಂದು ಟ್ವಿಟರ್‌ ತಿಳಿಸಿದೆ.

ಚೀನಾಕ್ಕೆ ಹೋಲಿಸಿದರೆ ಟರ್ಕಿ ಮತ್ತು ರಷ್ಯಾದ ನೆಟ್‌ವರ್ಕ್‌ಗಳು ಚಿಕ್ಕದಾಗಿದ್ದು, ಕ್ರಮವಾಗಿ 7,340 ಮತ್ತು 1,152 ಖಾತೆಗಳನ್ನು ಹೊಂದಿದ್ದವು.

ಈ ಮೂರು ದೇಶಗಳಿಗೆ ಸಂಬಂಧಿಸಿದ ಖಾತೆಗಳನ್ನು ತೆಗೆದುಹಾಕಲಾಗಿದ್ದರೂ, ಅವುಗಳಲ್ಲಿನ ಕಂಟೆಂಟ್‌ಗಳನ್ನು ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಟ್ವಿಟರ್‌ ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು