ಗುರುವಾರ , ಏಪ್ರಿಲ್ 9, 2020
19 °C

ವುಹಾನ್‌ಗೆ ಕೊರೋನಾ ವೈರಸ್‌ ತಂದ ಅಮೆರಿಕ ಸೇನೆ: ಚೀನಾದ ಅಧಿಕಾರಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌(ಪಿಟಿಐ): ಮಾರಕ ಕೊರೊನಾ ವೈರಸ್‌ ಅನ್ನು ಅಮೆರಿಕದ ಸೇನೆಯು ವುಹಾನ್‌ಗೆ ತಂದಿರುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದಲ್ಲಿ ಚೀನಾದ ಉಪ ರಾಯಭಾರಿಯಾಗಿದ್ದ ಜಾವೊ ಲಿಜಿಯಾನ್‌ ಮಾಡಿರುವ ಟ್ವೀಟ್‌ನಿಂದ ಚೀನಾ ಅಂತರ ಕಾಯ್ದುಕೊಂಡಿದೆ.

ವೈರಸ್‌ನ ಮೂಲವನ್ನು ಪತ್ತೆ ಹಚ್ಚಲು ವೈಜ್ಞಾನಿಕ ಮೌಲ್ಯಮಾಪನ ಅಗತ್ಯವಿದೆ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಅಮೆರಿಕದಲ್ಲಿ ಕೆಲವರು ಜ್ವರ ಬಾಧಿತರಾಗಿದ್ದಾರೆ ಎಂದು ತಪ್ಪಾಗಿ ರೋಗ ನಿರ್ಣಯ ಮಾಡಲಾಗಿದೆ. ಅವರಿಗೆ ಕೋವಿಡ್‌ –19 ಬಾಧಿಸಿರಬಹುದು’ ಎಂದು ಅಲ್ಲಿನ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕ ರಾಬರ್ಟ್‌ ರೆಡ್‌ಫೀಲ್ಡ್‌ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಲಿಜಿಯಾನ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು