ಶನಿವಾರ, ಫೆಬ್ರವರಿ 29, 2020
19 °C

ಅಮೆರಿಕ: ಗರ್ಭಿಣಿಯರಿಗೆ ವೀಸಾ ನಿರಾಕರಣೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ‘ಬರ್ತ್‌ ಟೂರಿಸಂ’ ಹೆಸರಿನಲ್ಲಿ ಅಮೆರಿಕಕ್ಕೆ ಭೇಟಿ ನೀಡಲು ಬಯಸುವ ಗರ್ಭಿಣಿಯರಿಗೆ ವೀಸಾ ನೀಡುವುದಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಬಂಧ ಹೇರಿದ್ದಾರೆ. ಈ ಮೂಲಕ ವಲಸೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಹೋರಾಟ ಆರಂಭಿಸಿದ್ದಾರೆ.

ಗರ್ಭಿಣಿಯರಿಗೆ ವೀಸಾ ನಿರಾಕರಣೆ ಶುಕ್ರವಾರದಿಂದಲೇ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಈ ಕುರಿತು ಹೇಳಿಕೆ ನೀಡಿರುವ ಶ್ವೇತ ಭವನ, ‘ಅಮೆರಿಕ ನೆಲದಲ್ಲಿ ಜನ್ಮನೀಡುವ ಮೂಲಕ ಮಕ್ಕಳಿಗೆ ಸ್ವಯಂ ಮತ್ತು ಶಾಶ್ವತವಾಗಿ ಅಮೆರಿಕದ ಪೌರತ್ವ ಪಡೆಯಲು ಒತ್ತು ನೀಡಿದ್ದರು‘ ಎಂದಿದೆ.

ಅಮೆರಿಕ ಪೌರತ್ವದ ಸಾರ್ವಭೌಮತ್ವವನ್ನು ನಾವು ರಕ್ಷಿಸಬೇಕಿದೆ ಎಂದು ಶ್ವೇತಭವನದ ವಕ್ತಾರ ಸ್ಟೀಫನ್‌ ಗ್ರಿಶಂ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು