ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಹಿಂಸಾಚಾರ: ಶ್ವೇತ ವರ್ಣೀಯನನ್ನು ರಕ್ಷಿಸಿದ ಕಪ್ಪು ವರ್ಣೀಯ

Last Updated 15 ಜೂನ್ 2020, 15:03 IST
ಅಕ್ಷರ ಗಾತ್ರ

ಲಂಡನ್‌: ಜನಾಂಗೀಯ ದಾಳಿ ಖಂಡಿಸಿ ಇಲ್ಲಿ ಈಚೆಗೆ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ ವೇಳೆ ಗಾಯಗೊಂಡಿದ್ದ ಶ್ವೇತವರ್ಣೀಯ ವ್ಯಕ್ತಿಯನ್ನು ಕಪ್ಪು ವರ್ಣೀಯ ವ್ಯಕ್ತಿಯೊಬ್ಬರು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ದಾಳಿ ಖಂಡಿಸಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಪ್ರತಿಭಟನಕಾರರು ಮತ್ತು ಶ್ವೇತ ವರ್ಣೀಯರ ಪರ ಇರುವವರ ನಡುವೆ ಘರ್ಷಣೆ ನಡೆದಿದೆ.

‘ವಾಟರ್ಲೂ ಸೇತುವೆಯ ಬಳಿ ಪ್ರತಿಭಟನೆ ನಡೆಯುತ್ತಿದ್ದಾಗ, ಶ್ವೇತವರ್ಣೀಯ ವ್ಯಕ್ತಿಯೊಬ್ಬರು ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ಕೂಡಲೇ ಇಬ್ಬರು ಕಪ್ಪುವರ್ಣೀಯ ವ್ಯಕ್ತಿಗಳು ಆತನನ್ನು ರಕ್ಷಿಸಿದ್ದಾರೆ’ ಎಂದು ಈ ಚಿತ್ರ ತೆಗೆದಿರುವ ರಾಯಿಟರ್ಸ್‌ ಛಾಯಾಗ್ರಾಹಕ ಡೈಲೆನ್‌ ಮಾರ್ಟಿನೆಜ್‌ ಹೇಳಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಕೆಲವರು ಆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದರು ಎಂದೂ ತಿಳಿಸಿದ್ದಾರೆ.

ಶ್ವೇತವರ್ಣೀಯ ವ್ಯಕ್ತಿಯನ್ನು ಹೆಗಲಲ್ಲಿ ಹೊತ್ತುಕೊಂಡಿದ್ದ ವ್ಯಕ್ತಿಯನ್ನು ಪ್ಯಾಟ್ರಿಕ್‌ ಹಚಿನ್ಸನ್‌ ಎಂದು ಬ್ರಿಟಿಷ್‌ ಮಾಧ್ಯಮಗಳು ಗುರುತಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT