ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೀರ್ಘ ಕಾಲ ನಡೆದ ಯುದ್ಧವೊಂದನ್ನು ಕೊನೆಗೊಳಿಸುವ ಒಪ್ಪಂದವೊಂದಕ್ಕೆ ಆ ದೇಶವು ಶನಿವಾರ (ಫೆ. 29) ಸಹಿ ಮಾಡಿದೆ. ಉಗ್ರ ಸಂಘಟನೆ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ‘ತಾಲಿಬಾನ್’ ಜತೆ ನಡೆದಿರುವ ಈ ಒಪ್ಪಂದದ ಮುಖ್ಯಾಂಶಗಳು ಇಲ್ಲಿವೆ

ತಾಲಿಬಾನ್ ಪ್ರತಿನಿಧಿ ಮುಲ್ಲಾ ಅಬ್ದುಲ್ ಘನಿ ಬರಾದರ್ ಮತ್ತು ಅಮೆರಿಕ ಪ್ರತಿನಿಧಿ ಜಲಮೈ ಖಲೀಲ್‌ಜಾದ್ ಅವರು ಶಾಂತಿ ಒಪ್ಪಂದದ ನಂತರ ಕೈ ಕುಲುಕಿದರು.

l ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆ ವಾಪಸ್, ನ್ಯಾಟೊ ಪಡೆಗಳ ವಾಪಸಾತಿ

l ಒಪ್ಪಂದಕ್ಕೆ ಸಹಿ ಹಾಕಿದ 135 ದಿನಗಳ ಒಳಗೆ ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ಸೈನಿಕರ ಸಂಖ್ಯೆಯನ್ನು 8,600ಕ್ಕೆ ಇಳಿಸುವುದು

l ಒಪ್ಪಂದಕ್ಕೆ ಸಹಿ ಹಾಕಿದ 14 ತಿಂಗಳ ಒಳಗೆ ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ಎಲ್ಲಾ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದು

l ಅಫ್ಗಾನಿಸ್ತಾನದ ವಿವಿಧ ಜೈಲುಗಳಲ್ಲಿ ಬಂಧನದಲ್ಲಿರುವ ತಾಲಿಬಾನ್‌ನ 5,000 ಉಗ್ರರನ್ನು ಬಿಡುಗಡೆ ಮಾಡುವುದು

l ತಾಲಿಬಾನ್‌ನ ಬಂಧನದಲ್ಲಿರುವ 1,000 ಮಂದಿ ಅಫ್ಗಾನಿಸ್ತಾನ ಸೈನಿಕರನ್ನು ಮಾರ್ಚ್ 10ರ ಒಳಗೆ ಬಿಡುಗಡೆ ಮಾಡಬೇಕು

l ಅಲ್ ಕೈದಾ ಉಗ್ರ ಸಂಘಟನೆ ಮತ್ತು ಇತರ ಉಗ್ರ ಸಂಘಟನೆಗಳು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳಿಗೆ ಅಫ್ಗಾನಿಸ್ತಾನದ ನೆಲವನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ತಾಲಿಬಾನ್‌ನದ್ದು

l ತಾಲಿಬಾನ್ ಉಗ್ರರ ಮೇಲೆ ವಿಶ್ವಸಂಸ್ಥೆ ವಿಧಿಸಿರುವ ನಿರ್ಬಂಧಗಳನ್ನು ತೆರವು ಮಾಡಿಸುವ ಜವಾಬ್ದಾರಿ ಅಮೆರಿಕದ್ದು

l ತಾಲಿಬಾನ್–ಅಫ್ಗಾನಿಸ್ತಾನದ ಚುನಾಯಿತ ಸರ್ಕಾರದ ಮಧ್ಯೆ ಮಾತುಕತೆ ನಡೆಯಬೇಕು. ಅಧಿಕಾರ ಹಂಚಿಕೆ ಸಂಬಂಧ ಒಮ್ಮತಕ್ಕೆ ಬರಬೇಕು

l ಅಫ್ಗಾನಿಸ್ತಾನದ ಎಲ್ಲೆಡೆ ಸಂಘರ್ಷಕ್ಕೆ ಅಂತ್ಯ ಹಾಕಬೇಕು. ಕದನ ವಿರಾಮ ಜಾರಿಯಲ್ಲಿರಬೇಕು

l ಈ ಎಲ್ಲಾ ಷರತ್ತುಗಳನ್ನು ಪೂರೈಸಿದರೆ ಮಾತ್ರ, ಅಮೆರಿಕವು ತನ್ನ ಎಲ್ಲಾ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.