ಶುಕ್ರವಾರ, ಮೇ 29, 2020
27 °C

World covid-19 update: ವಿಶ್ವದಲ್ಲಿ 3.40ಲಕ್ಷ ಮಂದಿ ಸಾವು, 53.03ಲಕ್ಷ ಸೋಂಕು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ಸೋಂಕಿಗೆ ಶನಿವಾರದವರೆಗೆ 3.40 ಲಕ್ಷ ಮಂದಿ ಬಲಿಯಾಗಿದ್ದಾರೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಶನಿವಾರ ಬೆಳಗಿನಜಾವದವರೆಗೆ ಒಟ್ಟು 53. 03 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, ಅಮೆರಿಕಾ ಒಂದರಲ್ಲಿ ಸಾವಿನ ಸಂಖ್ಯೆ 97 ಸಾವಿರ ದಾಟಿರುವುದು ವಿಶ್ವ ನಾಯಕರನ್ನು ಕಂಗೆಡಿಸಿದೆ.

ಕೊರೊನಾ ಉಗಮ ಸ್ಥಾನ ಚೀನಾದಲ್ಲಿ 2019ರ ಅಂತ್ಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರೂ ಅದು ವಿಶ್ವದೆಲ್ಲೆಡೆ ಬೆಳಕಿಗೆ ಬಂದಿದ್ದು ಜನವರಿ 22ರಂದು 17 ಮಂದಿ ಮೃತಪಟ್ಟ ನಂತರ. ಜನವರಿ 23ರಿಂದ ಫೆಬ್ರವರಿ 23ರವರೆಗೆ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 2, 618 ಮಂದಿ. ಫೆಬ್ರವರಿ 23 ರಿಂದ ಮಾರ್ಚ್ 22ರವರೆಗೆ 14, 739 ಮಂದಿ ಮೃತಪಟ್ಟರು. ಈ ಸೋಂಕು ವಿಶ್ವಕ್ಕೆಲ್ಲಾ ಹರಡುವುದನ್ನು ಅರಿತ ಹಲವು ರಾಷ್ಟ್ರಗಳು ಮಾರ್ಚ್ 22ರಿಂದ ಲಾಕ್‌ಡೌನ್ ಜಾರಿಗೆ ತಂದು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿವೆ.

ಲಾಕ್‌‌ಡೌನ್ ಜಾರಿಗೆ ತಂದರೂ ವಿಶ್ವದೆಲ್ಲೆಡೆ ಸಾವಿನ ಸಂಖ್ಯೆ ಮಾತ್ರ ಮಾರ್ಚ್22ರಲ್ಲಿ 14. 73 ಸಾವಿರ ಇದ್ದದ್ದು ಏಪ್ರಿಲ್ 23ರವರೆಗೆ 1.93 ಲಕ್ಷಕ್ಕೆ ಏರಿಕೆಯಾಯಿತು. ಸಾವನ್ನು ನಿಯಂತ್ರಿಸಲು ಮಾತ್ರ ಸಾಧ್ಯವಾಗುತ್ತಿಲ್ಲ. ಮೇ 23ರ ವೇಳೆಗೆ ಈ ಕೊರೊನಾ ಬಾಧಿತರ ಸಂಖ್ಯೆ 53.03 ಲಕ್ಷಕ್ಕೆ ತಲುಪಿದೆ. ಅಲ್ಲದೆ, ವಿಶ್ವದಲ್ಲಿ  ಸಾವಿನ ಸಂಖ್ಯೆ 340,003ಕ್ಕೆ ಏರಿಕೆಯಾಗಿ ವಿಶ್ವದೆಲ್ಲೆಡೆ ಜನರನ್ನು ತಲ್ಲಣಗೊಳಿಸಿದೆ.

ಇದನ್ನೂ ಓದಿ: Covid-19 World Update: ವಿಶ್ವದಾದ್ಯಂತ 3.33 ಲಕ್ಷಕ್ಕೂ ಹೆಚ್ಚು ಸಾವು

ವೈದ್ಯರ ಚಿಕಿತ್ಸೆ, ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಾಗಿ 2,158,562 ಮಂದಿ ಈ ರೋಗದಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ವಿಶ್ವದಲ್ಲಿ 28.60 ಲಕ್ಷ ಮಂದಿ ವಿವಿಧ ಆಸ್ಪತ್ರೆ ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ 
ಪ್ರಕರಣಗಳೂ( 340,003 ಮಂದಿ) ಹಾಗೂ ಗುಣಮುಖರಾದವರನ್ನೂ(2,158,562 ಮಂದಿ) ಸೇರಿ ಒಟ್ಟು 2,498,565 ಪ್ರಕರಣಗಳನ್ನು ಮುಕ್ತಾಯಗೊಳಿಸಿದ ಪ್ರಕರಣಗಳೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದೇಕೆ?: ಟ್ರಂಪ್ ಏನಂದರು?

ಭಾರತದಲ್ಲಿ ಇಲ್ಲಿಯವರೆಗೆ 124,794 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 3,726 ಮಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್‌ನಲ್ಲಿ 254,195 ಮಂದಿಗೆ ಸೋಂಕು ತಗುಲಿದ್ದು, 36,393 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 228,658 ಮಂದಿಗೆ ಈ ಸೋಂಕು ದೃಢಪಟ್ಟಿದ್ದು, 32,616 ಮಂದಿ ಸಾವನ್ನಪ್ಪಿದ್ದಾರೆ. ಸ್ಪೇನ್‌‌ನಲ್ಲಿ 281,904 ಮಂದಿಗೆ ಈ ಸೋಂಕು ತಗುಲಿದ್ದು, 28,628 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ 50, 694 ಜನರಲ್ಲಿ ಈ ಸೋಂಕು ದೃಢಪಟ್ಟಿದ್ದು, 1,067 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ವಿಶ್ವದಲ್ಲಿಯೇ ಅತಿಹೆಚ್ಚು ಅಂದರೆ 2,960 ಹೊಸ ಪ್ರಕರಣಗಳು ಮೆಕ್ಸಿಕೋದಲ್ಲಿ ದಾಖಲಾಗಿದ್ದು, ಇದೇ ದೇಶದಲ್ಲಿ 479 ಮಂದಿ ಸಾವನ್ನಪ್ಪಿದ್ದಾರೆ. ಅತಿ ಕಡಿಮೆ ಪ್ರಕರಣಗಳೆಂದರೆ ಜಮೈಕಾದಲ್ಲಿ ದಾಖಲಾಗಿದ್ದು 10 ಮಂದಿಗೆ ಮಾತ್ರ ಈ ಸೋಂಕು ದೃಢಪಟ್ಟಿದೆ.

ವಿಶ್ವದಲ್ಲಿ 6 ಗಂಟೆಗಳ ಅವಧಿಯಲ್ಲಿ 6,148 ಪ್ರಕರಣಗಳು ಹೊಸದಾಗಿ  ದಾಖಲಾಗಿದ್ದು, 579 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಕೋವಿಡ್‌–19: ವಿಶ್ವದಾದ್ಯಂತ ಸೋಂಕಿತರು 4.5 ಲಕ್ಷ, ಸಾವಿನ ಸಂಖ್ಯೆ 20,334                

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು