ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World covid-19 update: ಒಂದು ದಿನದಲ್ಲಿ ವಿಶ್ವದೆಲ್ಲೆಡೆ 1.08ಲಕ್ಷ ಗುಣಮುಖ

ವಿಶ್ವದೆಲ್ಲೆಡೆ ಒಟ್ಟು ಸಾವಿನ ಸಂಖ್ಯೆ 3.73 ಲಕ್ಷ
Last Updated 1 ಜೂನ್ 2020, 5:17 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೊರೊನಾ ಸೋಂಕು ಇಡೀ ವಿಶ್ವವನ್ನೇ ಬಾಧಿಸುತ್ತಿದ್ದರೂ ಕಳೆದ 24 ಗಂಟೆಗಳ ಅವಧಿಯಲ್ಲಿ ಪ್ರಪಂಚದಾದ್ಯಂತ 1.08 ಲಕ್ಷ ಮಂದಿ ಈ ರೋಗದಿಂದ ಗುಣಮುಖರಾಗಿದ್ದಾರೆ.

ಪ್ರಮುಖವಾಗಿ ಅಮೆರಿಕಾವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾಗೆ ಇಲ್ಲಿಯವರೆಗೆ 1.06 ಲಕ್ಷ ಮಂದಿ ಬಲಿಯಾಗಿದ್ದಾರೆ.
ಆದರೂ ಅಮೆರಿಕಾ ವೈದ್ಯರ ಸತತ ಪ್ರಯತ್ನದಿಂದಾಗಿ 5.99 ಲಕ್ಷಮಂದಿ ಗುಣಮುಖರಾಗಿದ್ದಾರೆ. ಅಮೆರಿಕಾದಲ್ಲಿ ಒಟ್ಟು 18.37 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. 11.31 ಲಕ್ಷ ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 17 ಸಾವಿರ ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಇಲ್ಲಿಯವರೆಗೆ 59.98 ಸಾವಿರ ಮಂದಿ ಗುಣಮುಖರಾಗಿದ್ದಾರೆ.

ಲಾಕ್‌ಡೌನ್, ಕ್ವಾರಂಟೈನ್, ಕರ್ಫ್ಯೂ ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಈ ಸೋಂಕು ನಿಯಂತ್ರಣ ಮಾಡುತ್ತಿದ್ದರೂ ಪ್ರಮುಖ ರಾಷ್ಟ್ರಗಳಾದ ಬ್ರೆಜಿಲ್, ಸ್ಪೇನ್, ಬ್ರಿಟನ್, ಇಟಲಿ, ಫ್ರಾನ್ಸ್, ಮೆಕ್ಸಿಕೋಗಳಲ್ಲಿ ಪ್ರಪಂಚದ ಇತರೆ ರಾಷ್ಟ್ರಗಳಿಗಿಂತ ಅತಿ ಹೆಚ್ಚಿನ ಜನರು ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ.

ಕೊರೊನಾ ಸೋಂಕಿನಿಂದ ಪ್ರಪಂಚದ ಒಟ್ಟು ಸಾವಿನ ಸಂಖ್ಯೆ ಸೋಮವಾರದ ವೇಳೆಗೆ 3.73 ಲಕ್ಷ ತಲುಪಿದೆ. ವಿಶ್ವದೆಲ್ಲೆಡೆ ಕೊರೊನಾ ಸೋಂಕು ಪ್ರಕರಣ ಸಂಖ್ಯೆ 62.60 ಲಕ್ಷಕ್ಕೆ ಏರಿಕೆಯಾಗಿದೆ. ಕೊರೊನಾ ಆರಂಭವಾದ ಡಿಸೆಂಬರ್ 2019ರಿಂದ ಇಲ್ಲಿಯವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 28.47ಲಕ್ಷ ಮಂದಿ. ಕಳೆದ 24 ಗಂಟೆಗಳ ಅವಧಿಯಲ್ಲಿ ವಿಶ್ವದೆಲ್ಲೆಡೆ 108,429 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಪ್ರಪಂಚದಾದ್ಯಂತ 62.66 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಒಟ್ಟು ಗುಣಮುಖರಾದವರು 28.47 ಲಕ್ಷ ಮಂದಿ. ಪ್ರಸ್ತುತ ವಿಶ್ವದಲ್ಲಿ 30.45 ಲಕ್ಷ ಮಂದಿ ವಿವಿಧ ಆಸ್ಪತ್ರೆ ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಪ್ರಕರಣಗಳೂ(373,960) ಹಾಗೂ ಗುಣಮುಖರಾದವರನ್ನೂ(2,847,525) ಸೇರಿ ಒಟ್ಟು 3,221,485 ಪ್ರಕರಣಗಳನ್ನು ಮುಕ್ತಾಯಗೊಳಿಸಿದ ಪ್ರಕರಣಗಳೆಂದು ಪರಿಗಣಿಸಲಾಗಿದೆ.

ಭಾರತದಲ್ಲಿ ಇಲ್ಲಿಯವರೆಗೆ 190,609 ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಸತ್ತವರ ಸಂಖ್ಯೆ 5408ಕ್ಕೆ ಏರಿದೆ. ಬ್ರಿಟನ್‌‌ನಲ್ಲಿ
274,762 ಪ್ರಕರಣಗಳು ದಾಖಲಾಗಿವೆ. 38,489 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 232,997 ಪ್ರಕರಣಗಳು ದಾಖಲಾಗಿದ್ದು,,
33,415 ಮಂದಿ ಸಾವನ್ನಪ್ಪಿದ್ದಾರೆ. ಸ್ಪೇನ್‌‌ನಲ್ಲಿ 286,509 ಪ್ರಕರಣಗಳು ದಾಖಲಾಗಿದ್ದು, 27,127 ಮಂದಿ ಮೃತಪಟ್ಟಿದ್ದಾರೆ.
ಪಾಕಿಸ್ತಾನದಲ್ಲಿ 72,460 ಪ್ರಕರಣಗಳು ದಾಖಲಾಗಿದ್ದು, 1,543 ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT