ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮದುವೆ ಮುಂದೂಡಿದ್ದ ವೈದ್ಯ, ಅದೇ ವೈರಸ್‌ಗೆ ಬಲಿ

Last Updated 21 ಫೆಬ್ರುವರಿ 2020, 11:18 IST
ಅಕ್ಷರ ಗಾತ್ರ

ಬೀಜಿಂಗ್: ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆಗಾಗಿ ಮದುವೆಯನ್ನು ಮುಂದೂಡಿದ್ದ ಇಲ್ಲಿನ ವೈದ್ಯರೊಬ್ಬರು ಅದೇ ವೈರಸ್‌ಗೆಬಲಿಯಾಗಿದ್ದಾರೆ.

ದಿನೇ ದಿನೇ ವ್ಯಾಪಿಸುತ್ತಲೇ ಇರುವ ಮಾರಣಾಂತಿಕ ಕೊರೊನಾ ವೈರಸ್‌ಗೆ ತುತ್ತಾದವರನ್ನು ಗುಣಪಡಿಸಲು ಇಲ್ಲಿನವೈದ್ಯರು ಮತ್ತು ಶ್ರುಶ್ರೂಷಕರು ನಿರಂತರ ಪ್ರಯತ್ನಿಸುತ್ತಿದ್ದಾರೆ. ಚಿಕಿತ್ಸೆ ನೀಡುತ್ತಿದ್ದವರೇ ಸೋಂಕಿಗೆ ಬಲಿಯಾದ ಒಂಬತ್ತನೇ ಪ್ರಕರಣ ಇದಾಗಿದೆ.

ವುಹಾನ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ 29 ವರ್ಷದ ವೈದ್ಯ ಡಾ. ಪೆಂಗ್ ಯಿನ್‌ಹುವಾ ವೈದ್ಯರು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ.

ಪೆಂಗ್‌ ಅವರು ಶ್ವಾಸಕೋಶ ತಜ್ಞರಾಗಿದ್ದರು. ಕೊರೊನಾ ವೈರಸ್‌ಗೆ ಚಿಕಿತ್ಸೆ ನೀಡುವವಾಗ ಇವರಿಗೆ ಸೋಂಕು ತಗುಲಿದೆ. ಜನವರಿ 25ರಂದು ಪೆಂಗ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಜನವರಿ 30ರಂದು ಇವರನ್ನು ವುಹಾನ್‌ನಲ್ಲಿನ ಜಿನ್‌ಯಿನ್ತಾನ್‌ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

ಜನರ ಕಾಯಿಲೆ ವಾಸಿ ಮಾಡಲು ತಮ್ಮ ಜೀವವನ್ನೇ ಅರ್ಪಿಸಿದ ವೈದ್ಯರ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದ ಎಂದು ಚೀನಾ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿಯಿಂದಇಲ್ಲಿಯವರೆಗೆ ಸುಮಾರು 2 ಸಾವಿರ ಮಂದಿ ಈ ವೈರಸ್‌ಗೆಬಲಿಯಾಗಿದ್ದಾರೆ.ಇದುವರೆಗೂ 74,576 ಮಂದಿ ಸೋಂಕು ಪೀಡಿತರಾಗಿದ್ದಾರೆ. ಜನವರಿಯಲ್ಲಿ ಮೊದಲ ಬಾರಿಗೆಕಡಲತೀರದ ನಗರಿ ವುಹಾನ್‌ ಮತ್ತು ಹುವಾನ್‌ಗಾಂಗ್‌ನಲ್ಲಿ ಇದು ಕಾಣಿಸಿಕೊಂಡಿದ್ದು, ಈಗವಿವಿಧ ರಾಷ್ಟ್ರಗಳಿಗೂ ವ್ಯಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT