ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: 60 ಸಾವಿರದ ಸನಿಹಕ್ಕೆ ಸೋಂಕಿತರ ಒಟ್ಟು ಸಂಖ್ಯೆ

ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿಶನಿವಾರ 4,537 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 60 ಸಾವಿರದತ್ತ (59,652) ದಾಪುಗಾಲಿಟ್ಟಿದೆ. ಕೋವಿಡ್‍ನಿಂದ ಮತ್ತೆ 93 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. ಇದರಿಂದ ಮೃತರ ಸಂಖ್ಯೆ 1,240ಕ್ಕೆ ಏರಿದೆ.

ಒಂದೇ ದಿನ 9,315 ಮಂದಿಗೆ ಆ್ಯಂಟಿಜೆನ್‌ ಪರೀಕ್ಷೆ ಸೇರಿದಂತೆ 34,819 ಮಂದಿಯ ಗಂಟಲದ್ರವದ ಪರೀಕ್ಷೆ ಮಾಡಲಾಗಿದೆ. ಕೇವಲ 48 ಗಂಟೆಗಳಲ್ಲಿ 8,230 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ಇದೇ ಅವಧಿಯಲ್ಲಿ 208 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ 250 ಸೇರಿದಂತೆ ರಾಜ್ಯದಲ್ಲಿ 1,018 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಹೀಗಾಗಿ, ಗುಣಮುಖರಾದವರ ಸಂಖ್ಯೆ 21,775ಕ್ಕೆ ಏರಿಕೆಯಾಗಿದೆ.

ಯಾವ ಜಿಲ್ಲೆಯಲ್ಲಿ ಹೆಚ್ಚು?
ಬೆಂಗಳೂರು ನಗರ (2125), ದಕ್ಷಿಣ ಕನ್ನಡ (509), ಧಾರವಾಡ (186), ವಿಜಯಪುರ (176), ಬಳ್ಳಾರಿ (155), ಬೆಳಗಾವಿ (137), ಉತ್ತರ ಕನ್ನಡ (116), ಶಿವಮೊಗ್ಗ (114), ಉಡುಪಿ (109), ಚಿಕ್ಕಬಳ್ಳಾಪುರ (107), ಮೈಸೂರು (101) ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT