ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಂದಲೇ ಶಿಕ್ಷಣ ವ್ಯವಸ್ಥೆ ಹಾಳು: ಡಾ. ತೇಜಸ್ವಿ ವಿ. ಕಟ್ಟೀಮನಿ

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಸದಸ್ಯ ತೇಜಸ್ವಿ ಬೇಸರ
Last Updated 30 ಜುಲೈ 2020, 19:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜಕಾರಣಿಗಳು ಹಾಗೂಪೋಷಕರಿಂದ ದೇಶದ ಶಿಕ್ಷಣ ವ್ಯವಸ್ಥೆ ಹಾಳಾಗಿದೆ ಎಂದು ಎಲ್ಲರೂ ದೂರುತ್ತಾರೆ. ವಾಸ್ತವದಲ್ಲಿ ಶಿಕ್ಷಕರಿಂದಲೇ ಶಿಕ್ಷಣ ವ್ಯವಸ್ಥೆ ಹಾಳಾಗಿದೆ’ ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಸದಸ್ಯ ಡಾ. ತೇಜಸ್ವಿ ವಿ. ಕಟ್ಟೀಮನಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರ ಜೊತೆ ಸಂವಾದ ನಡೆಸಿದ ಅವರು ‘ಸರ್ಕಾರಗಳು ಶೈಕ್ಷಣಿಕ ಪ್ರಗತಿ
ಗಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿವೆ. ಶಿಕ್ಷಕರ ಅರ್ಪಣೆ ಮತ್ತು ತ್ಯಾಗ ಮನೋಭಾವದ ಕೊರತೆಯಿಂದ ನಿರೀಕ್ಷೆಗೆ ತಕ್ಕಷ್ಟು ಯಶಸ್ಸು ಸಾಧಿಸಿಲ್ಲ. ಶಿಕ್ಷಕರು ಮನಸ್ಸು ಮಾಡಿದರೆ ಹಣಕಾಸಿನ ನೆರ
ವಿಲ್ಲದೆ ಶೈಕ್ಷಣಿಕ ಕ್ರಾಂತಿ ಸಾಧ್ಯ. ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಉಳಿದ ಯಾವ ಕಾರ್ಯಗಳಿಗೂ ನಿಯೋಜಿಸಬಾರದು’ ಎಂದರು.

‘ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ, ವಿಜ್ಞಾನ, ತಾಂತ್ರಿಕ ಶಿಕ್ಷಣ ಸಾಧ್ಯವಾಗಿಸಿರುವ ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳ ಕ್ರಮ ಅನುಕರಣೀಯ. ಹೊಸ ಶಿಕ್ಷಣ ನೀತಿ ಇಂತಹ ಎಲ್ಲಾ ಅವಕಾಶಗಳನ್ನು ಒದಗಿಸಲಿದೆ’ ಎಂದು ಮಧ್ಯಪ್ರದೇಶದ ಅಮರಕಂಟಕದಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯೂ ಆದ ಕಟ್ಟೀಮನಿ ಹೇಳಿದರು. ಇವರು ಮೂಲತಃ ಕೊಪ್ಪಳ ಜಿಲ್ಲೆ ಅಳವಂಡಿಯವರು.‌ ಸದ್ಯ ಧಾರವಾಡ ಸಮೀಪದ ನಿಗದಿ ಗ್ರಾಮದಲ್ಲಿ ವಾಸವಾಗಿದ್ದಾರೆ.

‘ಹೊಸ ಶಿಕ್ಷಣ ನೀತಿಯು ಕಲಿಕೆಯವಿಭಜಕಗಳನ್ನು ದೂರ ಮಾಡಿ, ಹಳ್ಳಿಗಾಡಿನ ಬದುಕು, ಒಕ್ಕಲುತನ, ಕಮ್ಮಾರಿಕೆ,
ಕುಂಬಾರಿಕೆ, ಪಶುಸಂಗೋಪನೆ, ತೋಟಗಾರಿಕೆ ಮೊದಲಾದ ವೃತ್ತಿಗಳಿಂದ ಕೂಡಿರುವ ಗ್ರಾಮೀಣ ಭಾರತವನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲಿದೆ. ಭಾರತದ ಶೇ 70ರಷ್ಟು ಜನ ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಶೇ 60ರಷ್ಟು ಜನ ಕೃಷಿಯನ್ನೇ ಅವಲಂಬಿ
ಸಿದ್ದಾರೆ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಕೌಶಲಗಳನ್ನು ಅಲಕ್ಷಿಸಿದ ಪರಿಣಾಮ, ದೈಹಿಕ ಶ್ರಮ ಆಧರಿಸಿದ ವಿದ್ಯೆಗಳನ್ನು ನಾವು ಶಿಕ್ಷಣವೆಂದು ಪರಿಗಣಿಸಿಯೇ ಇಲ್ಲ. ಗ್ರಾಮೀಣಭಾರತವನ್ನು ಪಠ್ಯದ ಬಹುಮುಖ್ಯ ಭಾಗ
ವಾಗಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೊಂದಾಣಿಕೆ ತರುವುದು ಹೊಸ ಶಿಕ್ಷಣ ನೀತಿಯ ಆಶಯವಾಗಿದೆ’ ಎಂದರು.

‘ಹಳ್ಳಿಯ ಕೆರೆ, ಸರೋವರ, ಒಕ್ಕಲುತನ, ಮೀನುಗಾರಿಕೆ ಬಗ್ಗೆ ಪಠ್ಯಗಳು ಮೌನವಹಿಸಬಾರದು. ಆಹಾರ ಸರಪಳಿ ವ್ಯವಸ್ಥೆ ಮತ್ತು ನೈತಿಕ ಮೌಲ್ಯಗಳ ಅಳವಡಿಕೆಅಗತ್ಯ. ಹಣ್ಣು ತುಂಬಿದ ಗಿಡ ಬಾಗುವಹಾಗೆ ವಿನಯವಂತಿಕೆ, ಸಹಬಾಳ್ವೆ ಕಲಿ
ಸುವ ಶಿಕ್ಷಣ ಪದ್ಧತಿ ನಮ್ಮದಾಗಬೇಕು. ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹೀಗೆ ವಿಶ್ವವಿದ್ಯಾಲಯಗಳ ವಿಭಜನೆ
ಸರಿಯಾದ ಕ್ರಮವಲ್ಲ. ಈ ಮಾದರಿಯ ವಿ.ವಿ.ಗಳು ಕೇವಲ ನೌಕರಿ ಮಾಡುವಪದವೀಧರರನ್ನು ಹುಟ್ಟು ಹಾಕಬಾರದು,
ಒಕ್ಕಲುತನದ ಎಲ್ಲಾ ಮಗ್ಗಲುಗಳ ಸಮಗ್ರ ಜ್ಞಾನ ನೀಡಬೇಕು. ಶಿಕ್ಷಣದ ಶಾಖೆಗಳಿಗೆ ಬಹುಮುಖಿ ಪ್ರವೇಶ ಮತ್ತು ನಿರ್ಗಮನದ ಅವಕಾಶಗಳನ್ನು ಈ ಹೊಸ ಶಿಕ್ಷಣ ನೀತಿ ನೀಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT