ಬುಧವಾರ, ಆಗಸ್ಟ್ 12, 2020
22 °C
ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದ ಕಾಲೇಜಿನ ಪ್ರಾಂಶುಪಾಲ ಎಚ್‌.ಎನ್‌. ವೀರಭದ್ರಪ್ಪ

ದ್ವಿತೀಯ ಪಿಯುಸಿ ಫಲಿತಾಂಶ | ರೈತನ ಮಗನಿಗೆ ಮೊದಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟೂರು (ಬಳ್ಳಾರಿ ಜಿಲ್ಲೆ): ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 594 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಇಲ್ಲಿನ ಇಂದು ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿ ಕರೆಗೌಡ ದಾಸನಗೌಡ್ರು ಅವರನ್ನು ಪ್ರಾಂಶುಪಾಲ ಎಚ್.ಎನ್. ವೀರಭದ್ರಪ್ಪ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಕರೆಗೌಡ, ಹೂವಿನಹಡಗಲಿ ತಾಲ್ಲೂಕಿನ ಮಹಜನದಹಳ್ಳಿಯ ಕೃಷಿಕ ಕೊಟ್ರೇಶ–ಶಾಂತಮ್ಮ ದಂಪತಿಯ ಪುತ್ರ. 

ಬೆಳಿಗ್ಗೆ ಫಲಿತಾಂಶ ಪ್ರಕಟಗೊಳ್ಳುವ ವೇಳೆಗೆ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಯನ್ನು ಅಪ್ಪಿಕೊಂಡು ಶಹಬ್ಬಾಸ್‌ಗಿರಿ ನೀಡಿದ ಪ್ರಾಂಶುಪಾಲರು ಸಂತಸ ತಾಳಲಾಗದೆ, ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನೆರೆದವರಲ್ಲಿ ಅಚ್ಚರಿ ಮೂಡಿಸಿದರು. ಅವರಿಬ್ಬರಿಗೂ ಆಡಳಿತ ಮಂಡಳಿ ಸದಸ್ಯರು ಆರತಿ ಬೆಳಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

‘ಸತತ ಐದು ವರ್ಷದಿಂದ ಕಲಾ ವಿಭಾಗದಲ್ಲಿ ಕಾಲೇಜು ಪ್ರಥಮ ಸ್ಥಾನ ಪಡೆಯುತ್ತಿದೆ. ಕರೆಗೌಡ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಹತ್ತು ಸ್ಥಾನಗಳಿಸಿ ರಾಜ್ಯದ ಗಮನ ಸೆಳೆದಿದ್ದಾರೆ. ಈ ಸಾಧನೆಗೆ ಪ್ರಾಥಮಿಕ, ಪ್ರೌಢ ಶಿಕ್ಷಣ ಉತ್ತಮವಾಗಿರುವುದರ ಜೊತೆಗೆ ಶಿಕ್ಷಕರ ತಂಡದ ಪರಿಶ್ರಮ ಇದೆ’ ಎಂದು ಪ್ರಾಂಶುಪಾಲರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು