ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಫಲಿತಾಂಶ: ಶೇಕಡ 61.80 ಉತ್ತೀರ್ಣ, ಉಡುಪಿ ಪ್ರಥಮ, ಬಾಲಕಿಯರ ಮೇಲುಗೈ

Last Updated 14 ಜುಲೈ 2020, 7:55 IST
ಅಕ್ಷರ ಗಾತ್ರ

ಬೆಂಗಳೂರು: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ, ದಕ್ಷಿಣ ಕನ್ನಡ, ಕೊಡಗುಜಿಲ್ಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿವೆ.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದರು.

ಈ ಬಾರಿಒಟ್ಟಾರೆ ಶೇಕಡ 61.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡ 68.68 ರಷ್ಟಿತ್ತು.

ಮಾರ್ಚ್‌ 4ರಿಂದ 21ರವರೆಗೆ ಪರೀಕ್ಷೆ ನಡೆದಿತ್ತು. ಈ ನಡುವೆ ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆ ಮುಂದೂಡಲಾಗಿದ್ದ ಇಂಗ್ಲಿಷ್‌ ಪರೀಕ್ಷೆಯನ್ನು ಜೂನ್‌ 18ರಂದು ನಡೆಸಲಾಗಿತ್ತು. 6.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,17,297 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಬಾರಿ ಬಾಲಕಿಯರು ಶೇ 68.73,ಬಾಲಕರು ಶೇ 54.77ರಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.

ಉಡುಪಿ ಜಿಲ್ಲೆ ಶೇ 90.71 ತೇರ್ಗಡೆಯ ಪ್ರಮಾಣದೊಂದಿಗೆ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಶೇ 90.71 ತೇರ್ಗಡೆ ಪ್ರಮಾಣದೊಂದಿಗೆ ದ್ವಿತೀಯ, ಕೊಡಗು ಶೇ 81.53 ತೇರ್ಗಡೆ ಪ್ರಮಾಣದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದೆ. ವಿಜಯಪುರ ಶೇ 54.22 ರಷ್ಟು ಫಲಿತಾಂಶ ಪಡೆದಿದ್ದು ಕೊನೆಯ ಸ್ಥಾನ ಪಡೆದಿದೆ.

ರಾಜ್ಯದ 4 ಸರ್ಕಾರಿ ಕಾಲೇಜು ಸೇರಿ 92 ಕಾಲೇಜುಗಳು ಶೇ 100 ಫಲಿತಾಂಶ ಪಡೆದಿವೆ. 10 ಸರ್ಕಾರಿ ಕಾಲೇಜು ಸೇರಿ 88 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ.

ಒಟ್ಟು 68,866 ಮಂದಿ ಉನ್ನತ ಶ್ರೇಣಿ (ಡಿಸ್ಟಿಂಕ್ಷನ್), 2,21,866 ಮಂದಿ ಪ್ರಥಮ ದರ್ಜೆ, 77,455 ಮಂದಿ ದ್ವಿತೀಯ ದರ್ಜೆ, 49,110 ಮಂದಿ ಶೇ 50ಕ್ಕಿಂತ ಕಡಿಮೆ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶವನ್ನು ಪದವಿ ಪೂರ್ಣ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ www.pue.kar.nic.in ಮತ್ತು www.karresults.nic.in ರಲ್ಲಿ ನೋಡಬಹುದು.

ಸ್ಥಾನ ಜಿಲ್ಲೆ ಫಲಿತಾಂಶ ಪ್ರಮಾಣ
1 ಉಡುಪಿ 90.71
2 ದಕ್ಷಿಣ ಕನ್ನಡ 90.71
3 ಕೊಡಗು 81.53
4 ಉತ್ತರ ಕನ್ನಡ 80.97
5 ಚಿಕ್ಕಮಗಳೂರು 79.11
6 ಬೆಂಗಳೂರು ದಕ್ಷಿಣ 77.56
7 ಬೆಂಗಳೂರು ಉತ್ತರ 75.54
8 ಬಾಗಲಕೋಟೆ 74.59
9 ಚಿಕ್ಕಬಳ್ಳಾಪುರ 73.74
10 ಶಿವಮೊಗ್ಗ 72.19
11 ಹಾಸನ 70.18
12 ಚಾಮರಾಜನಗರ 69. 29
13 ಬೆಂಗಳೂರು ಗ್ರಾಮಾಂತರ 69.02
14 ಹಾವೇರಿ 68.01
15 ಮೈಸೂರು 67.98
16 ಕೋಲಾರ 67.42
17 ಧಾರವಾಡ 67.31
18 ಬೀದರ್‌ 64.61
19 ದಾವಣಗೆರೆ 64.09
20 ಚಿಕ್ಕೋಡಿ 63.88
21 ಮಂಡ್ಯ 63.82
22 ಗದಗ 63
23 ತುಮಕೂರು 62.26
24 ಬಳ್ಳಾರಿ 60.02
25 ರಾಮನಗರ 60.96
26 ಕೊಪ್ಪಳ್ಳ 60.09
27 ಬೆಳಗಾವಿ 59.07
28 ಯಾದಗಿರಿ 58. 38
29 ಕಲಬುರಗಿ 58.27
30 ಚಿತ್ರದುರ್ಗ 56.08
31 ರಾಯಚೂರು 56.22
32 ವಿಜಯಪುರ 54.22

**
ಪಿಯುಸಿ ಫಲಿತಾಂಶ: ಉಡುಪಿ ಮತ್ತೆ ಪ್ರಥಮ
ಉಡುಪಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಮತ್ತೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಅಗ್ರಪಟ್ಟವನ್ನು ಉಳಿಸಿಕೊಂಡಿದೆ.
ಈ ವರ್ಷ ಜಿಲ್ಲೆಗೆ ಶೇ 90.71 ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶ ಪ್ರಮಾಣ ಶೇ 1.31 ರಷ್ಟು ಕುಸಿತವಾಗಿದೆ.

**
ಬಾಗಲಕೋಟೆ ಜಿಲ್ಲೆ: ಶೇ 74.39 ರಷ್ಟು ಫಲಿತಾಂಶ
ಬಾಗಲಕೋಟೆ:
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಗಲಕೋಟೆ ಜಿಲ್ಲೆ ಎಂಟನೇ ಸ್ಥಾನ ಪಡೆದಿದೆ. ಶೇ 74.39 ರಷ್ಟು ಫಲಿತಾಂಶ ಬಂದಿದೆ.

ಕಳೆದ ಬಾರಿ ಫಲಿತಾಂಶಕ್ಕೆ ಹೋಲಿಸಿದರೆ ಜಿಲ್ಲೆ ಈ ಬಾರಿ ಒಂದು ಸ್ಥಾನ ಕೆಳಗಿಳಿದಿದೆ.ಕಳೆದ ವರ್ಷ 7 ನೇ ಸ್ಥಾನದಲ್ಲಿತ್ತು. ಶೇ 74.26 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

**
ಚಿಕ್ಕಬಳ್ಳಾಪುರ ಜಿಲ್ಲೆ: ಶೇ 73.74 ರಷ್ಟು ಫಲಿತಾಂಶ
ಚಿಕ್ಕಬಳ್ಳಾಪುರ:
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 73.74 ರಷ್ಟು ಫಲಿತಾಂಶದ ಜತೆಗೆ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ದೊರೆತಿದೆ.

ಕಳೆದ ಬಾರಿ ಫಲಿತಾಂಶಕ್ಕೆ ಹೋಲಿಸಿದರೆ ಜಿಲ್ಲೆ ಈ ಬಾರಿ ನಾಲ್ಕು ಸ್ಥಾನ ಮೇಲೆ ಏರಿದೆ. ಕಳೆದ ವರ್ಷ ಜಿಲ್ಲೆ 13ನೇ ಸ್ಥಾನದಲ್ಲಿತ್ತು. ಶೇ 70.11 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT