ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ಅಭಿಜ್ಞಾ ರಾವ್ ಪ್ರತಿಕ್ರಿಯೆ

Last Updated 14 ಜುಲೈ 2020, 12:28 IST
ಅಕ್ಷರ ಗಾತ್ರ
ADVERTISEMENT
""

ಉಡುಪಿ: ‘ನಿರೀಕ್ಷೆಯಂತೆ ಪಿಯುಸಿ ಫಲಿತಾಂಶ ಬಂದಿದ್ದು, ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಬಂದಿರುವುದು ತುಂಬಾ ಖುಷಿಯಾಗಿದೆ. ಲಾಕ್‌ಡೌನ್‌ ಸಂದರ್ಭವನ್ನು ಇಂಗ್ಲೀಷ್‌ ವಿಷಯದ ಓದಿಗೆ ಪೂರಕವಾಗಿ ಬಳಸಿಕೊಂಡಿದ್ದರಿಂದ ಹೆಚ್ಚು ಅಂಕ ಪಡೆಯಲು ಸಾಧ್ಯವಾಯಿತು ಎಂದು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ಅಭಿಜ್ಞಾ ರಾವ್‌ ಹೇಳುತ್ತಾರೆ.

ಅಭಿಜ್ಞಾ ರಾವ್

ಎಂಜಿನಿಯರಿಂಗ್ ವಿಭಾಗ ಆಯ್ಕೆ ಮಾಡಿಕೊಳ್ಳುವ ಉದ್ದೇಶವಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್‌ ಪಡೆದಿದ್ದೆ. ಪಿಯುಸಿಯಲ್ಲೂ ರ‍್ಯಾಂಕ್‌ ಪಡೆಯಬೇಕು ಎಂಬ ಗುರಿ ಈಡೇರಿದ್ದು ಸಂತಸ ತಂದಿದೆ’ ಎನ್ನುತ್ತಾರೆ ಅವರು.

ಅಭಿಜ್ಞಾ ರಾವ್‌ ಪಡೆದ ಅಂಕಗಳು– 596

ಇಂಗ್ಲೀಷ್‌–96, ಸಂಸ್ಕೃತ–100, ಭೌತಶಾಸ್ತ್ರ–100, ರಸಾಯನ ಶಾಸ್ತ್ರ–100, ಗಣಿತ–100, ಕಂಪ್ಯೂಟರ್ ಸೈನ್ಸ್‌–100

ಅಭಿಜ್ಞಾ ರಾವ್‌ ಉಡುಪಿಯು ವಿದ್ಯೋದಯ ಪಿಯು ಕಾಲೇಜು ವಿದ್ಯಾರ್ಥಿನಿ. ತಂದೆ ದಿ.ವಿಠಲರಾವ್‌, ತಾಯಿ ಆಶಾ ರಾವ್‌. ಅಕ್ಕ ರಕ್ಷಾ ರಾವ್‌ ಡಾ.ರೆಡ್ಡೀಸ್‌ ಫಾರ್ಮಾದಲ್ಲಿ ಉದ್ಯೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT