ಭಾನುವಾರ, ಆಗಸ್ಟ್ 1, 2021
27 °C
ಎಸ್ಸೆಸ್ಸೆಲ್ಸಿ ಮೌಲ್ಯಮಾಪನ

ತಾಯಿ ನಿಧನದ ದುಃಖದಲ್ಲೂ ಕರ್ತವ್ಯ ಪ್ರಜ್ಞೆ ತೋರಿದ ಶಿಕ್ಷಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ತಾಯಿಯ ನಿಧನದ ದುಃಖದಲ್ಲೂ, ಶಿಕ್ಷಕಿಯೊಬ್ಬರು ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆ ತೋರಿದರು.

ತಾಲ್ಲೂಕಿನ ಬೆಟ್ಟಿಗೇರಿಯ ಶಿಕ್ಷಕಿ ಕವಿತಾ ಅವರ ತಾಯಿ ವಯೋಸಹಜ ಅನಾರೋಗ್ಯದಿಂದ ಸೋಮವಾರ ಮುಂಜಾನೆ ಮೃತಪಟ್ಟಿದ್ದರು. ಆ ದುಃಖದಲ್ಲೂ ಕವಿತಾ ಅವರು, ನಗರದ ಸೇಂಟ್‌ ಮೈಕಲ್‌ ಶಾಲೆಯಲ್ಲಿ ನಡೆದ ಮೌಲ್ಯಮಾಪನಕ್ಕೆ ಹಾಜರಾಗಿದ್ದರು. ಬಳಿಕ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.

‘ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಳಂಬವಾಗಿ ನಡೆದಿದೆ. ವಿದ್ಯಾರ್ಥಿಗಳ ಭವಿಷ್ಯವೂ ಮುಖ್ಯ. ಹೀಗಾಗಿ, ಮೌಲ್ಯಮಾಪನಕ್ಕೆ ಬಂದೆ’ ಎಂದು ಶಿಕ್ಷಕಿ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು