ಪಶ್ಚಿಮಬಂಗಾಳ: ‘ಜೈ ಶ್ರೀರಾಮ್ ಪಠಿಸುತ್ತೇನೆ..ತಾಕತ್ತಿದ್ದರೆ,ನನ್ನನ್ನು ಬಂಧಿಸಿ’ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅಮಿತ್ ಶಾ ಸವಾಲು ಹಾಕಿದರು.
ಕಳೆದ ವಾರ ಪಶ್ವಿಮ ಬಂಗಾಳದಲ್ಲಿಮಮತಾ ಬ್ಯಾನರ್ಜಿ ವಾಹನ ಹಾದು ಹೋಗುವಾಗ ಜೈ ಶ್ರೀರಾಮ್ ಕೂಗಿದ್ದಕ್ಕೆ ಮೂವರನ್ನು ಬಂಧಿಸಿಲಾಗಿತ್ತು.ಜಾಯ್‌ನಗರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರುಈ ಘಟನೆಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.
‘ಯಾರಾದರೂ ಜೈ ಶ್ರೀರಾಮ್ ಎಂದರೆ, ಮಮತಾ ಅವರಿಗೆ ಸಿಟ್ಟು ಬರುತ್ತದೆ. ನಾನು ಈಗ ಇಲ್ಲಿ ಜೈ ಶ್ರೀರಾಮ್ ಎನ್ನುತ್ತೇನ. ನಿಮಗೆ (ಮಮತಾ) ಧೈರ್ಯವಿದ್ದರೆ, ನನ್ನನ್ನು ಬಂಧಿಸಿ. ನಾಳೆಯೂ ನಾನು ಕೋಲ್ಕತ್ತದಲ್ಲಿಯೇ ಇರುತ್ತೇನೆ’ ಎಂದು ಹೇಳಿದ್ದಾರೆ.
ಬರುಯಿಪುರದಲ್ಲಿ ಅಮಿತ್ ಶಾ ಚಾಪರ್ ಇಳಿಸುವುದಕ್ಕೆ ಟಿಎಂಸಿ ಸರ್ಕಾರ ಅನುಮತಿ ನಿರಾಕರಿಸಿದ್ದರ ಬಗ್ಗೆ ಟೀಕಿಸಿದ ಶಾ, ‘ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಗೊಂದಲಕ್ಕೀಡಾಗಿರುವಂತೆ ಕಾಣುತ್ತಿದೆ. ನನ್ನನ್ನು ರ್‍ಯಾಲಿಗೆ ಹೋಗದಂತೆ ಅವರು ತಡೆಯಬೇಕಿದೆ. ರ್‍ಯಾಲಿಯಲ್ಲಿ ಭಾಗವಹಿಸುವುದನ್ನು ಅವರು ತಡೆಯಬಹುದು ಆದರೆ, ಬಂಗಾಳದಲ್ಲಿ ಬಿಜೆಪಿ ವಿಜಯಯಾತ್ರೆಯನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದರು.
ಅಮಿತ್ ಶಾ ಅವರ ಹೆಲಿಕಾಪ್ಟರ್ ಇಳಿಯುವುದಕ್ಕೆ ಅನುಮತಿ ಸಿಗದಿದ್ದರಿಂದ ಜಾದವಪುರ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ನಡೆಯಬೇಕಿದ್ದ ಅವರ ಚುನಾವಣಾ ರ್‍ಯಾಲಿಯನ್ನು ರದ್ದುಪಡಿಸಿ,ಬರುಯಿಪುರದಲ್ಲಿಹಮ್ಮಿಕೊಳ್ಳಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.