ಪುಲ್ವಾಮಾದಲ್ಲಿ ನಡೆದದ್ದು ‘ದುರ್ಘಟನೆ’ ಎಂದ ಬಿಜೆಪಿ ನಾಯಕ

ನವದೆಹಲಿ: ‘ಪುಲ್ವಾಮಾದಲ್ಲಿ ನಡೆದದ್ದು ದುರ್ಘಟನೆ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೇಶವ ಪ್ರಸಾದ್ ಮೌರ್ಯ ಹೇಳಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
उत्तर प्रदेश के उपमुख्यमंत्री @kpmaurya1 ने भी #पुलवामा हमले को सुरक्षा में चूक नहीं "दुर्घटना" कहा है। भक्तों इनको देशद्रोही कब घोषित कर रहे हो? या सेना के नाम पर केवल चुनावी रोटियां सेंकनी है? @brajeshabpnews @jarariya91 @AdityaMenon22 @shahnawazk @anandrai177 pic.twitter.com/FYTQzMnuN5
— Anshul Trivedi (@anshultrivedi47) March 5, 2019
ಪುಲ್ವಾಮಾ ದಾಳಿಯನ್ನು ‘ದುರ್ಘಟನೆ (ಅಪಘಾತ ಎಂಬರ್ಥದಲ್ಲಿ)’ ಎಂಬ ಶಬ್ದ ಬಳಸಿ ಟ್ವೀಟ್ ಮಾಡಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮಂಗಳವಾರ ಆಕ್ರೋಶಕ್ಕೆ ಗುರಿಯಾಗಿದ್ದರು. ಕೇಂದ್ರದ ಹಲವು ಸಚಿವರು ಮತ್ತು ಬಿಜೆಪಿ ಬೆಂಬಲಿಗರು ನೇರವಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮೌರ್ಯ ಅವರ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್, ಕೇಂದ್ರ ಸಚಿವರಿಗೆ ಸವಾಲೆಸೆದಿದ್ದಾರೆ.
ಇದನ್ನೂ ಓದಿ: ‘ಧೈರ್ಯವಿದ್ದರೆ ನನ್ನ ಮೇಲೆ ಕೇಸ್ ಹಾಕಿ’ ಮೋದಿಗೆ ದಿಗ್ವಿಜಯ ಸಿಂಗ್ ಸವಾಲು
‘ಪುಲ್ವಾಮಾ ದಾಳಿಯನ್ನು ‘ದುರ್ಘಟನೆ’ ಎಂದು ಕರೆದಾಗ ಮೂವರು ಕೇಂದ್ರ ಸಚಿವರು ನನ್ನನ್ನು ಪಾಕಿಸ್ತಾನದ ಬೆಂಬಲಿಗ ಎಂದು ಬಿಂಬಿಸಿದರು. ಈಗ ಕೇಶವ ಪ್ರಸಾದ್ ಮೌರ್ಯ ಅವರ ಈ ಹೇಳಿಕೆಯನ್ನು ಕೇಳಿ. ಮೋದಿ ಜೀ ಮತ್ತು ಅವರ ಸಂಪುಟ ಸಚಿವರಿಂದ ಏನಾದರೂ ಪ್ರತಿಕ್ರಿಯೆಗಳಿವೆಯೇ?’ ಎಂದು ದಿಗ್ವಿಜಯ್ ಟ್ವೀಟ್ ಮಾಡಿದ್ದಾರೆ.
पुलवामा आतंकी हमले को मैंने “दुर्घटना” कह दिया तो मोदी जी से ले कर ३ केंद्रीय मंत्री जी मुझे पाकिस्तान समर्थक बताने में जुट गये। उत्तर प्रदेश में भाजपा के उप मुख्य मंत्री जी केशव देव मौर्य जी का बयान कृपया सुनें। मोदी जी व उनके मंत्रीगण मौर्य जी के बारे में कुछ कहना चाहेंगे?
— digvijaya singh (@digvijaya_28) March 6, 2019
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.