ವಿಮಾನದಲ್ಲಿ ನೀಡಿದ ಆಹಾರದಲ್ಲಿ ಜಿರಲೆ: ಪ್ರಯಾಣಿಕನ ಕ್ಷಮೆಯಾಚಿಸಿದ ಏರ್‌ ಇಂಡಿಯಾ

7

ವಿಮಾನದಲ್ಲಿ ನೀಡಿದ ಆಹಾರದಲ್ಲಿ ಜಿರಲೆ: ಪ್ರಯಾಣಿಕನ ಕ್ಷಮೆಯಾಚಿಸಿದ ಏರ್‌ ಇಂಡಿಯಾ

Published:
Updated:
Prajavani

ನವದೆಹಲಿ: ಪ್ರಯಾಣಿಕರೊಬ್ಬರಿಗೆ ವಿತರಿಸಿದ್ದ ಆಹಾರದಲ್ಲಿ ಜಿರಲೆ ಪತ್ತೆಯಾಗಿರುವುದಕ್ಕೆ ಏರ್‌ ಇಂಡಿಯಾ ಕ್ಷಮೆಯಾಚಿಸಿದೆ.

ಭೋಪಾಲ್‌ನಿಂದ ಮುಂಬೈಗೆ ಶನಿವಾರ ತೆರಳುತ್ತಿದ್ದ ವಿಮಾನದಲ್ಲಿ ರೋಹಿತ್‌ ರಾಜ್‌ ಸಿಂಗ್‌ ಚೌಹಾಣ್‌ ಎನ್ನುವವರಿಗೆ ನೀಡಿದ್ದ ಇಡ್ಲಿ–ಸಾಂಬಾರ್‌ನಲ್ಲಿ ಜಿರಲೆ ಸಿಕ್ಕಿತ್ತು. ರೋಹಿತ್‌ ಅವರು ಜಿರಲೆ ಮತ್ತು ಇಡ್ಲಿ–ಸಾಂಬಾರ್‌ನ ಚಿತ್ರಗಳ ಜತೆ ಟ್ವೀಟ್‌ ಮಾಡಿದ್ದರು.

‘ನಮ್ಮ ಪ್ರಯಾಣಿಕರಿಗೆ ಕಹಿ ಅನುಭವವಾಗಿದ್ದಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ’ ಎಂದು ಏರ್‌ ಇಂಡಿಯಾ ತಿಳಿಸಿದೆ.

‘ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂಬಂಧಿಸಿದವರಿಗೆ ನೋಟಿಸ್‌ ನೀಡಲಾಗಿದೆ. ಈ ವಿಷಯದಲ್ಲಿ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಸಂಸ್ಥೆಯು ಆಂತರಿಕವಾಗಿಯೂ ಕ್ರಮಗಳನ್ನು ಕೈಗೊಂಡಿದೆ. ಹಿರಿಯ ಅಧಿಕಾರಿಗಳು ತೊಂದರೆಗೀಡಾದ ಪ್ರಯಾಣಿಕರ ಜತೆ ಚರ್ಚೆ ನಡೆಸಿದ್ದಾರೆ’ ಎಂದು ಏರ್‌ ಇಂಡಿಯಾ ಟ್ವೀಟ್‌ ಮಾಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !