ಚೇತನ ಚಿಲುಮೆ ಅಂಬೇಡ್ಕರ್ ಕುರಿತು ಓದಲೇಬೇಕಾದ ಈ 15 ಸುದ್ದಿಗಳು

ಶುಕ್ರವಾರ, ಏಪ್ರಿಲ್ 26, 2019
24 °C

ಚೇತನ ಚಿಲುಮೆ ಅಂಬೇಡ್ಕರ್ ಕುರಿತು ಓದಲೇಬೇಕಾದ ಈ 15 ಸುದ್ದಿಗಳು

Published:
Updated:

ಚೇತನ ಚಿಲುಮೆ’ಯಾಗಿ ಕಂಡ ಅಂಬೇಡ್ಕರ್ ಅವರು ಈ ದೇಶದ ಶೋಷಿತರು ಮತ್ತು ಹಿಂದುಳಿದವರು ಬದುಕಿಗೆ ಧ್ವನಿಯಾಗಿ, ಬೆಳಕಾದವರು. ಅಂಬೇಡ್ಕರ್‌ ಜಯಂತಿ ನಿಮಿತ್ತವಾಗಿ ಅವರ ವಿಚಾರಗಳು, ಸಿದ್ಧಾಂತಗಳು ಮತ್ತು ಚಿಂತನೆಗಳ ಕುರಿತಂತೆ ಓದಲೇ ಬೇಕಾದ 15 ಸುದ್ದಿಗಳು...

1) ನನ್ನ ಬದುಕಿನಲ್ಲಿ ಅಂಬೇಡ್ಕರ್ ಹೆಚ್ಚು ಜಾಗೃತಗೊಂಡ ಅಪೂರ್ವ ಕ್ಷಣ
ಏಪ್ರಿಲ್‌ 14ರ ‘ಅಂಬೇಡ್ಕರ್‌ ಜಯಂತಿ’ ಸಂದರ್ಭದಲ್ಲಿ ಈ ಬರಹಗಳು ‘ನಮ್ಮೊಳಗಿನ ಅಂಬೇಡ್ಕರ್‌’ ಅವರನ್ನು ಒಮ್ಮೆ ತಡವಿಕೊಳ್ಳಲು ಪ್ರೇರೇಪಿಸುವಂತಿವೆ.

2) ಸಂವಿಧಾನ ಉಳಿಸುವುದೆಂದರೆ...
ಸಂವಿಧಾನವನ್ನು ಅಳಿಸಿ ಹಾಕುವುದು ಅಷ್ಟು ಸುಲಭವಾದ ಕೆಲಸವಲ್ಲ. ಆದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಅಭಿಪ್ರಾಯ ಮೂಡಿಸುತ್ತ ಅದರ ಮೂಲ ಸಾಮಾಜಿಕ ಸತ್ವ ಮತ್ತು ಸಮಾನತೆಯ ತತ್ತ್ವದ ಶಕ್ತಿ ಕುಗ್ಗಿಸಲು ಸಾಧ್ಯ.

3) ಅಂಬೇಡ್ಕರ್ ಸ್ಮೃತಿ-ಸಂಸ್ಕೃತಿ
ಅಂಬೇಡ್ಕರ್ ಅವರು ನೀಡಿದ ಕೊನೆಯ ಸಂದೇಶಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ಇಲ್ಲಿದೆ. ಈ ಸಂದೇಶಗಳನ್ನು ‘ಅಂಬೇಡ್ಕರ್ ಸ್ಮೃತಿ-ಸಂಸ್ಕೃತಿ’ ಪುಸ್ತಕದಿಂದ ಸಂಗ್ರಹಿಸಲಾಗಿದೆ.

4) ಅಂಬೇಡ್ಕರ್ ತಾತ್ವಿಕತೆ ಮತ್ತು ದಲಿತರ ಆತಂಕಗಳು
ಅಂಬೇಡ್ಕರ್ ಜಯಂತಿಯನ್ನು ನೆಪವಾಗಿರಿಸಿಕೊಂಡು ‘ಪ್ರಜಾವಾಣಿ’ ಕೇಳಿದ ಮೂರು ಪ್ರಶ್ನೆಗಳಿಗೆ ದಲಿತ ಸಮುದಾಯದ ಮೂವರು ಜನಪ್ರತಿನಿಧಿಗಳು ಹಾಗೂ ಒಬ್ಬ ಕವಿ ನೀಡಿರುವ ಉತ್ತರಗಳು ಇಲ್ಲಿವೆ...

5) ಅಂಬೇಡ್ಕರರ ‘ಘರ್-ವಾಪಸಿ’!
ನಿಜವಾಗಿಯೂ ಅಂಬೇಡ್ಕರರ ದಲಿತ ಚಿಂತನೆಗಳಿಗೆ ಹೊಡೆತ ಬೀಳುತ್ತಿರುವುದು, ನಿಜವಾದ ದಲಿತ ಸಂವೇದನೆಯ ಗಂಧ-ಗಾಳಿಯು ಇಲ್ಲದ ಡೋಂಗಿ ಅಂಬೇಡ್ಕರ್ ವಾದಿಗಳಿಂದ...

6) ಅಮ್ಮ ನೀಡಿದ ಅಂಬೇಡ್ಕರ್ ದೀಕ್ಷೆ
ಇಡೀ ದೇಶವನ್ನು ನೀಲ ವರ್ಣದಲ್ಲಿ ಮುಳುಗಿಸುವ ಆಕೆಯ ರೂಪಕ ಗಣರಾಜ್ಯ ದಿನದ ಮಹತ್ವದ ಕುರಿತ ಮಾಹಿತಿಗಿಂತ ದೊಡ್ಡದು.

7) ವ್ಯವಸ್ಥೆಯನ್ನೇ ಬದಲಿಸಬಲ್ಲದು ಹೊಸ ದಲಿತ ತಲೆಮಾರು!
ದಲಿತರ ಕಷ್ಟಗಳಿಗೆ ಕೊನೆ ಹಾಡಬೇಕಾದ ಅಸ್ಪೃಶ್ಯತಾ ನಿವಾರಣಾ ಕಾನೂನುಗಳ ಜಾರಿಯ ವಾಸ್ತವ ಸ್ಥಿತಿಯನ್ನು ಕರ್ನಾಟಕದ ಸದನದಲ್ಲಿ ನಡೆದ ಮೂರು ಚರ್ಚೆಗಳು ಬಿಚ್ಚಿಡುತ್ತವೆ:

8) ಹೊಸ ಪುಸ್ತಕ: ಅಂಬೇಡ್ಕರ್ ಚಿಂತನೆಗಳಿಗೆ ಹೊಸ ನೋಟ
ಹಾಗಿದ್ದರೆ ಸಮಾನತೆ ಎಂದರೇನು? ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರು ಪ್ರತಿಪಾದಿಸಿರುವ ಸಮಾನತೆ ಯಾವ ರೀತಿಯದ್ದು?

9) ’ಮತ್ತೊಬ್ಬ ಬುದ್ಧನನ್ನು ಕಂಡೆ’
ದಲಿತ ಚಿಂತನೆಗಳ ಬೆಳಕಿನಿಂದ ದಲಿತರ ಉದ್ಧಾರದ ಹೊಸ ಮಾರ್ಗ ತೆರೆಯುತ್ತದೆ ಎಂದು ನಂಬಿರುವ ಶಿಕ್ಷಣ ತಜ್ಞ ಎಲ್.ಶಿವಲಿಂಗಯ್ಯ ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆಗಳ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

10) ದಲಿತ ಬಂಡವಾಳ ವಿಮೋಚನೆಯ ಮಾರ್ಗವೇ? 
‘ದಲಿತ ಬಂಡವಾಳಶಾಹಿ’ಯನ್ನು ಕಲ್ಪಿಸಿಕೊಳ್ಳುವುದೇ ಶ್ರೇಷ್ಠ ನಾಯಕರ ಸಾಮಾಜಿಕ ಹೋರಾಟದ ಮೂಲತತ್ವಗಳಿಂದ ವಿಮುಖರಾಗುವುದು ಎಂದರ್ಥ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ ವಿಶಾಲ್‌ ಠಾಕ್ರೆ ಅವರು.

11) ಏನಿದೇನಿದು ತೇಲುನೋಟದ ಹೊರಳುಗಣ್ಣಿನ ಸೂಚನೆ
‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಿರುವ ಪ್ರಗತಿಪರ ಶಕ್ತಿಗಳು ಇದೀಗ ‘ಇಂಕ್ವಿಲಾಬ್ ಜಿಂದಾಬಾದ್ – ಜೈ ಭೀಮ್’ ಎಂದು ತಮ್ಮ ಭಾಷಣಗಳನ್ನು ಕೊನೆಗೊಳಿಸುತ್ತಿವೆ. ಈ ಅನುಭವದ ಹಿನ್ನೆಲೆಯಲ್ಲಿ ಉತ್ತರ ಭಾರತದ ಎಲ್ಲ ವಿದ್ಯಾರ್ಥಿ ಸಂಘಟನೆಗಳನ್ನು ಒಂದೆಡೆ ತರುವ ಪ್ರಯತ್ನಗಳೂ ಆರಂಭವಾಗಿವೆ ಎಂಬುದನ್ನು ಪುರುಷೋತ್ತಮ ಬಿಳಿಮಲೆ ಅವರು ವಿಶ್ಲೇಷಿಸಿದ್ದಾರೆ.

12) ಆಡುತ ಹಾಡುತ ಹೋರಾಡುತ ಬದುಕಿನ ಬಂಡಿ 
ಸಾಮಾಜಿಕ ಬದಲಾವಣೆಯ ಪ್ರಾಮಾಣಿಕ ತುಡಿತ ಇದ್ದ ಅವರ ಬಗ್ಗೆ ಗೌರವ ಬೆಳೆಯಿತು. ಶ್ರೀರಾಂಪುರದಲ್ಲಿ ದಲಿತ ಮಕ್ಕಳಿಗಾಗಿ ಆರ್‌. ಗೋಪಾಲಸ್ವಾಮಿ ಅಯ್ಯರ್‌ ಒಂದು ಹಾಸ್ಟೆಲ್‌ ತೆರೆದರು. –ಹೀಗೆ ರಂಗಕರ್ಮಿ ಜನಾರ್ದನ್ (ಜನ್ನಿ) ಅವರು ಬದುಕಿನ ಕೆಲವು ಪುಟಗಳ ನೆನಪಿನಗಣಿನ್ನು ತೆರೆದಿಟ್ಟಿದ್ದಾರೆ.

13) ಬಾಬಾ ಸಾಹೇಬರ ಬೆಳಕಿನಲ್ಲಿ... 
ಅಂಬೇಡ್ಕರ್‌ರ ಚಿಂತೆನೆಗಳಿಗೆ ಆಕರ್ಷಿತಳಾದೆ. ಸಹಮಾನವ ದ್ವೇಷವಿರದ ಅವರ ತತ್ವಚಿಂತನೆಗಳು ನನ್ನನ್ನು ಪ್ರಭಾವಿಸಿದವು. ನನ್ನಲ್ಲಿ ಸತತ ಅಭ್ಯಾಸದ ಅನ್ವೇಷಕ ಪ್ರವೃತ್ತಿಯನ್ನು ಹುಟ್ಟಿಸಿದವು. ಹೋರಾಟಗಳಲ್ಲೂ ಪಾಲ್ಗೊಳ್ಳುವಂಥ ಮನಸ್ಥಿತಿಯನ್ನು ನನ್ನಲ್ಲಿ ನಿರ್ಮಿಸಿದ್ದು ಅಂಬೇಡ್ಕರ್‌ರರೇ ಎಂದು ಡಾ. ಅನಸೂಯ ಕಾಂಬಳೆ ಅವರು ಬೆಳಕು ಕಂಡ ಬಗೆಯನ್ನು ಕಟ್ಟಿಕೊಟ್ಟಿದ್ದಾರೆ.

14) ಅಂಬೇಡ್ಕರರ ‘ಘರ್-ವಾಪಸಿ’!
 ಗಾಂಧಿಯಂತೆ ಅಂಬೇಡ್ಕರರನ್ನು ‘ದಲಿತ್ ಬ್ರ್ಯಾಂಡ್’ನಿಂದ ಬಿಡುಗಡೆಗೊಳಿಸಿ, ಹೊಸ ತಲೆಮಾರಿನ ಉತ್ಸಾಹಿ ಯುವ ಮನಸುಗಳಿಗೆ ಅಂಬೇಡಕರ್ ಚಿಂತನೆ ದಕ್ಕುವಂತೆ ಮಾಡುವುದು ‘ನಿಜ ಅಂಬೇಡ್ಕರ್’ ವಾದಿಗಳ ಜವಾಬ್ದಾರಿಯಾಗಿದೆ ಎಂದಿದ್ದಾರೆ ಆರೀಫ್ ರಾಜಾ ಅವರು.

15) ಅಮ್ಮ ನೀಡಿದ ಅಂಬೇಡ್ಕರ್ ದೀಕ್ಷೆ
ಅಂಬೇಡ್ಕರ್ ಜೊತೆಗಿನ ನನ್ನ ಸಂಬಂಧಕ್ಕೆ ದೇಹದ ಹೊರಗೊಂದು ಸಂಕೇತ ಬೇಕಾಗಿಲ್ಲ. ಅವರು ನನ್ನೊಳಗೇ ಇದ್ದು ನನ್ನನ್ನು ಸಬಲನನ್ನಾಗಿಸಿದ್ದಾರೆ. ಇಪ್ಪತ್ತಮೂರು ಸಂಪುಟಗಳಲ್ಲಿರುವ ಅವರ ಕೃತಿ ಶ್ರೇಣಿಯ ಪ್ರತೀ ಪದಗಳ ಮೂಲಕ ಅವರು ನನಗೆ ಶಕ್ತಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ ಪ್ರೊ. ಗೋಪಾಲ್‌ ಗುರು ಅವರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !