ಶನಿವಾರ, ಮೇ 30, 2020
27 °C

ಕೊರೊನಾ ಸೋಂಕು: ಜ್ವರ ಕಾರಣ ಗ್ರಾಮಕ್ಕೆ ಪ್ರವೇಶವಿಲ್ಲ, ದೋಣಿಯಲ್ಲೇ ಕ್ವಾರಂಟೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಶ್ಚಿಮ ಬಂಗಾಳ: ಜ್ವರ ಬಂದ ಕಾರಣ ಗ್ರಾಮ ಪ್ರವೇಶಕ್ಕೆ ನಿರಾಕರಿಸಿದ್ದರಿಂದ ವ್ಯಕ್ತಿಯೊಬ್ಬರು ದೋಣಿಯ ಮೇಲೆಯೇ ಕ್ರಾರಂಟೈನ್ ದಿನಗಳನ್ನು ಕಳೆಯುತ್ತಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಇಲ್ಲಿನ ನಾಡಿಯಾ ಜಿಲ್ಲೆ  ನಬದ್ವೀಪ್ ಎಂಬಲ್ಲಿ ಈ ಘಟನೆ ನಡೆದಿದೆ. ಹಿರಿಯ ವ್ಯಕ್ತಿಯೊಬ್ಬರು ತನ್ನ ಸಂಬಂಧಿಕರ ಮನೆಗೆಂದು ತೆರಳಿದ್ದರು. ಅಲ್ಲಿಂದ ವಾಪಸಾಗುತ್ತಿದ್ದಂತೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. 

ಈ  ವಿಷಯ ತಿಳಿಯುತ್ತಿದ್ದಂತೆ ಕೊರೊನಾ ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು ವ್ಯಕ್ತಿಯನ್ನು ಗ್ರಾಮದ ಒಳಗೆ ಪ್ರವೇಶ ಮಾಡದಂತೆ ಅಡ್ಡಿಪಡಿಸಿದರು. ಕೂಡಲೆ ವೈದ್ಯರನ್ನು ಸಂಪರ್ಕಿಸಿದ ವ್ಯಕ್ತಿ ಅವರಿಂದ ಸಲಹೆ ಪಡೆದರು. ನಂತರ  ಹಬೀಬಪುರದ ಪಕ್ಕದಲ್ಲಿಯೇ ಇರುವ ನದಿಯಲ್ಲಿ ದೋಣಿಯನ್ನೇ ಮನೆ ಮಾಡಿಕೊಂಡರು. 14 ದಿನಗಳ ಕಾಲ ಅಲ್ಲಿಯೇ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಈಗ ಅಲ್ಲಿಯೇ ಊಟ ನಿದ್ರೆ ವಿಶ್ರಾಂತಿ ಎಲ್ಲವೂ ನಡೆಯುತ್ತಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು