‘ಬಿಜೆಪಿ ವಿರೋಧಿ ವೇದಿಕೆ’ ರಚನೆಗೆ ಸಿದ್ಧತೆ

7

‘ಬಿಜೆಪಿ ವಿರೋಧಿ ವೇದಿಕೆ’ ರಚನೆಗೆ ಸಿದ್ಧತೆ

Published:
Updated:

ಹೈದರಾಬಾದ್: ರಾಷ್ಟ್ರಮಟ್ಟದಲ್ಲಿ ‘ಬಿಜೆಪಿ ವಿರೋಧಿ ವೇದಿಕೆ’ಯನ್ನು ರೂಪಿಸುವ ಉದ್ದೇಶದಿಂದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಶನಿವಾರ ಮಾತುಕತೆ ನಡೆಸಿದ್ದಾರೆ.

ನವೆಂಬರ್ 1ರಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದ ನಾಯ್ಡು ಅವರು, ಬಿಜೆಪಿ ವಿರೋಧಿ ವೇದಿಕೆ ರಚನೆ ಬಗ್ಗೆ ಚರ್ಚೆ ನಡೆಸಿದ್ದರು.

ಆ ಚರ್ಚೆಯ ಭಾಗವಾಗಿಯೇ ಗೆಹ್ಲೋಟ್ ಅವರು ಶನಿವಾರ ಅಮರಾವತಿಗೆ ಭೇಟಿ ನೀಡಿದ್ದರು. ದೀರ್ಘ ಮಾತುಕತೆಯ ನಂತರ ಇಬ್ಬರು ನಾಯಕರೂ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

‘ಬಿಜೆಪಿಯನ್ನು ವಿರೋಧಿಸುವ ಎಲ್ಲಾ ಪಕ್ಷಗಳೂ ಈ ವೇದಿಕೆಗೆ ಬರಬೇಕು. ಈ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡುತ್ತೇನೆ. ವೇದಿಕೆ ರಚನೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇದೇ 22ರಂದು ಸಭೆ ನಡೆಯಲಿದೆ. ಆ ಸಭೆಗೆ ಮಮತಾ ಅವರನ್ನು ಆಹ್ವಾನಿಸಲಿದ್ದೇನೆ’ ಎಂದು ನಾಯ್ಡು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !