ಸೋಮವಾರ, ಮಾರ್ಚ್ 8, 2021
31 °C

ಲಾಕ್‌ಡೌನ್ | ಮದ್ಯದ ದರ ಶೇ.50ರಷ್ಟು ಹೆಚ್ಚಿಸಿದ ಆಂಧ್ರಪ್ರದೇಶ

ಎಪಿ Updated:

ಅಕ್ಷರ ಗಾತ್ರ : | |

ಅಮರಾವತಿ: ಆಂಧ್ರಪ್ರದೇಶ ಸರ್ಕಾರ ಮದ್ಯದ ದರವನ್ನು ಮಂಗಳವಾರ ಶೇ 50ರಷ್ಟು ಹೆಚ್ಚಳ ಮಾಡಿ ಮದ್ಯಪ್ರಿಯರಿಗೆ ಆಘಾತ ನೀಡಿದೆ.

ಲಾಕ್‌ಡೌನ್‌ ಸಡಿಲಗೊಂಡ ಕಾರಣ ಮದ್ಯದ ಅಂಗಡಿಗಳು ಸೋಮವಾರ ತಮ್ಮ ವಹಿವಾಟು ಆರಂಭಿಸಿದವು. ಹೀಗಾಗಿ, ಮದ್ಯದ ದರದಲ್ಲಿ ನಿನ್ನೆಯಷ್ಟೇ ಶೇ 25ರಷ್ಟು ಹೆಚ್ಚಳ ಮಾಡಿದ್ದ ಸರ್ಕಾರ, ಇಂದು ಮತ್ತೇ ಶೇ 50ರಷ್ಟು ಹೆಚ್ಚಿಸಿದೆ. ಈ ಕ್ರಮದಿಂದ ಈ ವರ್ಷದ ಆದಾಯದಲ್ಲಿ ಹೆಚ್ಚುವರಿಯಾಗಿ 9,000 ಕೋಟಿ ಸರ್ಕಾರದ ಬೊಕ್ಕಸ ಸೇರಲಿದೆ ಎಂದು ಅಂದಾಜಿಸಲಾಗಿದೆ.     

‘ಜನರು ಮದ್ಯ ಸೇವಿಸುವುದರಿಂದ ದೂರ ಇದ್ದು, ಆರೋಗ್ಯ ಕಾಪಾಡಿಕೊಳ್ಳಲಿ ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಕಂದಾಯ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ರಜತ್‌ ಭಾರ್ಗವ ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು