ಬೆಂಗಳೂರು: ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದರಿಂದ ನಟ ಅರ್ಜುನ್ ಸರ್ಜಾ ಕಬ್ಬನ್ ಪಾರ್ಕ್ಪೊಲೀಸ್ ಠಾಣೆಗೆ ಸೋಮವಾರ ಬೆಳಿಗ್ಗೆ ಬಂದರು.
ಶೃತಿ ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಇನ್‌ಸ್ಪೆಕ್ಟರ್ಐಯ್ಯಣ್ಣ ರೆಡ್ಡಿ, ವಿಚಾರಣೆಗೆ ಹಾಜರಾಗುವಂತೆ ಅರ್ಜುನ್ ಸರ್ಜಾ ಅವರಿಗೆ ಶನಿವಾರ ನೋಟಿಸ್ ನೀಡಿದ್ದರು. ಅದನ್ನು ಸ್ವೀಕರಿಸಿದ ಅರ್ಜುನ್ ಸರ್ಜಾ ಈಗ ವಿಚಾರಣೆಗೆ ಬಂದಿದ್ದಾರೆ.
ಸಂಜೆಯವರೆಗೂ ಅವರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಲಿಖಿತವಾಗಿ ಸರ್ಜಾ ಅವರ ಹೇಳಿಕೆಯನ್ನು ಇನ್‌ಸ್ಪೆಕ್ಟರ್ ದಾಖಲಿಸಿ ಕೊಳ್ಳಲಿದ್ದಾರೆ.
‘ನಟಿ ಶ್ರುತಿ ಹರಿಹರನ್ ದಾಖಲಿಸಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರನ್ನು ಇದೇ 14ರವರೆಗೆ ಬಂಧಿಸಬಾರದು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರಆದೇಶಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.