ಗುರುವಾರ , ನವೆಂಬರ್ 21, 2019
20 °C

ಅಯೋಧ್ಯೆ ಪ್ರಕರಣ ಇತ್ಯರ್ಥಕ್ಕೆ ಒಪ್ಪುವುದಿಲ್ಲ ಎಂದ ಮುಸ್ಲಿಂ ಕಕ್ಷಿದಾರರು

Published:
Updated:
s Babri Masjid in Ayodhya

ನವದೆಹಲಿ: ಅಯೋಧ್ಯೆ ವಿವಾದಿತ ರಾಮ ಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದಲ್ಲಿ ಸಂಧಾನ ಸಮಿತಿಯ ಮುಂದೆ ನಾವು ಪ್ರಕರಣ ಇತ್ಯರ್ಥಗೊಳಿಸಬೇಕು ಎಂಬ ಪ್ರಸ್ತಾಪ ಮುಂದಿಟ್ಟಿಲ್ಲ ಎಂದು  ಜಮಾತ್‌ ಉಲೇಮಾ ಇ ಹಿಂದ್‌ ಮತ್ತು ಮುಸ್ಲಿಂ  ಕಕ್ಷಿದಾರರ ಪರ ವಾದಿಸುತ್ತಿರುವ  ವಕೀಲರು ಹೇಳಿದ್ದಾರೆ. 

ವಿಚಾರಣೆ ಅಂತ್ಯಗೊಳಿಸುವ ಮುನ್ನ ಅಯೋಧ್ಯೆ ಪ್ರಕರಣದಲ್ಲಿ ಸಂಧಾನ ಸಮಿತಿಯು  ಸುಪ್ರೀಂಕೋರ್ಟ್‌ನ  ಐವರು ನ್ಯಾಯಾಧೀಶರ ನ್ಯಾಯಪೀಠಕ್ಕೆ ಅಂತಿಮ ವರದಿ ಸಲ್ಲಿಸಿತ್ತು. 

ಇದನ್ನೂ ಓದಿ:  ಅಯೋಧ್ಯೆ: ತೀರ್ಪಿನತ್ತ ಎಲ್ಲರ ಚಿತ್ತ

ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಬುಧವಾರ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. 40 ದಿನಗಳ ವಿಚಾರಣೆ ಅಕ್ಟೋಬರ್ 16ರಂದು ಮುಕ್ತಾಯಗೊಂಡಿದೆ. 

ಯಾವೆಲ್ಲ ವಿಚಾರಗಳನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ತಮ್ಮ ಬೇಡಿಕೆ ಏನು ಎಂಬ ಬಗ್ಗೆ ಲಿಖಿತ ಟಿಪ್ಪಣಿ ಸಲ್ಲಿಸಲು ಕಕ್ಷಿದಾರರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಮೂರು ದಿನಗಳ ಅವಕಾಶ ನೀಡಿದೆ.

ಇದನ್ನೂ ಓದಿ:  ಅಯೋಧ್ಯೆ ವಿವಾದ: ಮುಸ್ಲಿಂ ಕಕ್ಷಿದಾರರಿಗೆ ಮಾತ್ರ ಪ್ರಶ್ನೆ ಏಕೆ?

ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಬಲ್ಲಮೂಲಗಳ ಪ್ರಕಾರ ಆ ರೀತಿಯ ಪ್ರಸ್ತಾಪ ಮಾಡಿದ್ದು ವಕ್ಫ್  ಮಂಡಳಿ. ಈ ಪ್ರಸ್ತಾಪ 4 ಷರತ್ತುಗಳಿಂದ ಕೂಡಿದೆ. ಅಯೋಧ್ಯೆ ಮತ್ತು ದೇಶದ ಇತರ ಭಾಗಗಳಲ್ಲಿಯೂ  ಮುಸ್ಲಿಂ ಸಮುದಾಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿರಬೇಕು ಎಂದು ಇದರಲ್ಲಿ ಹೇಳಲಾಗಿದೆ.
 

ಶುಕ್ರವಾರ ಈ ಬಗ್ಗೆ ಪ್ರತಿಕ್ರಯಿಸಿದ ವಕೀಲ ಇಜಾಜ್  ಮಕ್ಬೂಲ್ , ಶಾಹೀದ್ ರಿಜ್ವಿ ಅವರ ಹೇಳಿಕೆಯನ್ನು ಮಾಧ್ಯಮಗಳು ತಿರುಚಿದ್ದು ನೋಡಿ ದಂಗಾದೆ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ನಾವು ಈ ರೀತಿ ಇತ್ಯರ್ಥ ಪ್ರಸ್ತಾಪವನ್ನು ಒಪ್ಪುವುದಿಲ್ಲ. ಈ ರೀತಿಯ ಸುದ್ದಿಯನ್ನು ಸಂಧಾನ ಸಮಿತಿ ಅಥವಾ ನಿರ್ಮೋಹಿ ಅಖಾಡವೇ ಸೋರಿಕೆ ಮಾಡಿರಬೇಕು ಎಂದು ಆರೋಪಿಸಿದ್ದಾರೆ.

 

ಪ್ರತಿಕ್ರಿಯಿಸಿ (+)