ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್ ಸೌಹಾರ್ದ ಕೊಂಡಿಯಾಗಿದ್ದ ಬಿ.ಎಂ.ಕುಟ್ಟಿ ಇನ್ನಿಲ್ಲ

Last Updated 25 ಆಗಸ್ಟ್ 2019, 8:33 IST
ಅಕ್ಷರ ಗಾತ್ರ

ಮುಂಬೈ: ಭಾರತ–ಪಾಕ್‌ ನಡುವೆ ಶಾಂತಿ ಸ್ಥಾಪನೆಯಾಗಬೇಕು ಎಂದು ತುಡಿಯುತ್ತಿದ್ದಬಿ.ಎಂ.ಕುಟ್ಟಿ (88) ಭಾನುವಾರ ನಸುಕಿನಲ್ಲಿ ಕರಾಚಿಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

‘ಎರಡೂ ದೇಶಗಳ ನಡುವೆ ಶಾಂತಿ ನೆಲೆಗೊಳ್ಳಬೇಕು ಎಂದು ಶ್ರಮಿಸುತ್ತಿದ್ದವರ ಪಾಲಿಗೆಕುಟ್ಟಿ ಅವರು ಸಾವು ತುಂಬಲಾರದ ನಷ್ಟ. ನಮ್ಮೆಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದ ಅವರು ಎರಡೂ ದೇಶಗಳ ಜನರ ಪಾಲಿನ ನಿಜವಾದ ಗೆಳೆಯರಾಗಿದ್ದರು’ ಎಂದು ಮುಂಬೈ ಮೂಲದ ಹೋರಾಟಗಾರ ಜತಿನ್ ದೇಸಾಯಿ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಪಾಕ್‌ ನಡುವಣ ಸಾಮಾನ್ಯ ಜನರ ನಡುವೆ ನಿರಂತರ ಸಂಪರ್ಕ ಇರಬೇಕು ಎಂದು ಪ್ರತಿಪಾದಿಸುತ್ತಿದ್ದ ಕುಟ್ಟಿ ಮತ್ತು ದೇಶಾಯಿ, ಎರಡೂ ದೇಶಗಳ ಪತ್ರಕರ್ತರ ನಡುವೆ ವಿಚಾರ ವಿನಿಮಯ ಸಾಧ್ಯವಾಗಲು ಶ್ರಮಿಸಿದ್ದರು.

ಕುಟ್ಟಿ ಅವರ ಪೂರ್ಣ ಹೆಸರು ಬಿಯ್ಯೊತಿಲ್ ಮೊಹ್ಯುದ್ದೀನ್ ಕುಟ್ಟಿ. ಅವರನ್ನು ಜನರು ಕುಟ್ಟಿ ಸಾಬ್‌ ಎಂದೇ ಕರೆಯುತ್ತಿದ್ದರು. ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಕುಟ್ಟಿ, ಪತ್ರಕರ್ತರೂ ಆಗಿದ್ದರು.

ಕೇರಳದ ತಿರೂರ್‌ ಪಟ್ಟಣದಿಂದ ತಮ್ಮ 19ನೇ ವಯಸ್ಸಿಗೆ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಕುಟ್ಟಿ, ಹುಟ್ಟೂರಿಗೆ ಆಗಾಗ ಬಂದು ಹೋಗುತ್ತಿದ್ದರು. ಅನುಭವ ಕಥೆ

ಅವರ ಆತ್ಮಚರಿತ್ರೆ ‘ಸಿಕ್ಸ್‌ಟಿ ಇಯರ್ಸ್‌ ಇನ್ ಸೆಲ್ಫ್‌ ಎಕ್ಸೈಲ್: ನೊ ರಿಗ್ರೆಟ್ಸ್‌’ ಎರಡೂ ದೇಶಗಳಲ್ಲಿ ಜನಪ್ರಿಯವಾಗಿತ್ತು. ಈ ಪುಸ್ತಕ ಮರಾಠಿಗೂ ಅನುವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT