ಸೋಮವಾರ, ಫೆಬ್ರವರಿ 24, 2020
19 °C

ಸುಪ್ರೀಂ ಕೋರ್ಟ್‌ನಲ್ಲಿ ಬಾಂಬ್‌ ಆತಂಕ ತಂದ ‘ಪವರ್‌ ಬ್ಯಾಂಕ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಪ್ರೀಂ ಕೋರ್ಟ್‌ನ ಆವರಣದಲ್ಲಿದ್ದ ಚೀಲವೊಂದರಲ್ಲಿ ಬಾಂಬ್‌ ಇದೆ ಎನ್ನುವ ಶಂಕೆ ಕೆಲ ಕಾಲ ಸ್ಥಳದಲ್ಲಿ ಆತಂಕ ಮೂಡಿಸಿತ್ತು. 

ಕೋರ್ಟ್‌ ಸಂಖ್ಯೆ 4ರ ಹೊರಗಡೆ ಇದ್ದ ಚೀಲದಿಂದ ‘ಬೀಪ್‌, ಬೀಪ್‌...’ ಶಬ್ದ ಕೇಳಿ ಬಂದ ಕಾರಣ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ, ಈ ಪ್ರದೇಶಕ್ಕೆ ಯಾರೂ ಪ್ರವೇಶಿಸದಂತೆ ತಡೆದರು.

ಖಾಲಿ ಜಾಗಕ್ಕೆ ಚೀಲವನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅದರೊಳಗೆ ಮೊಬೈಲ್‌ ಚಾರ್ಜ್‌ ಮಾಡುವ ಪವರ್‌ ಬ್ಯಾಂಕ್‌ ಪತ್ತೆಯಾಗಿದೆ. ‘ಚೀಲ ಹಾಗೂ ಪವರ್‌ ಬ್ಯಾಂಕ್‌ ಅನ್ನು ನಿಯಂತ್ರಣ ಕೊಠಡಿಯಲ್ಲಿ ಇಡಲಾಗಿದೆ. ಇದರ ವಾರಸುದಾರರು ಪತ್ತೆಯಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು