ಶುಕ್ರವಾರ, ಜೂನ್ 5, 2020
27 °C

ಬಿಜೆಪಿಯ ಸಂಸ್ಥಾಪನಾ ದಿನವನ್ನು ಹೀಗೆ ಆಚರಿಸಿ: ಪಕ್ಷದಿಂದ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯು ಸ್ಥಾಪನೆಗೊಂಡು ಇಂದಿಗೆ 40 ವರ್ಷಗಳು ಪೂರ್ಣಗೊಂಡಿದ್ದು, ಪಕ್ಷದ ಸಂಸ್ಥಾಪನಾ ದಿನ ಆಚರಿಸಲು ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕಾರ್ಯಕರ್ತರಿಗೆ ಮಾರ್ಗಸೂಚಿಗಳನ್ನು ನೀಡಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. 

ಏನದು ಮಾರ್ಗಸೂಚಿಗಳು? 

– ಪಕ್ಷದ ಕಚೇರಿಯಲ್ಲಿ ಮತ್ತು ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಪಕ್ಷದ ಹೊಸ ಬಾವುಟವನ್ನು ಹಾರಿಸಬೇಕು. ಆದರೆ ಈ ವೇಳೆ ಸಾಮಾಜಿಕ ಅಂತರವನ್ನು ಪಾಲಿಸಬೇಕು. 

–ಡಾ ಶ್ಯಾಮ ಪ್ರಸಾದ್‌ ಮುಖರ್ಜಿ ಮತ್ತು ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಫೋಟೋಗಳಿಗೆ ಪುಷ್ಪಾಂಜಲಿ ಅರ್ಪಿಸಬೇಕು. 

–ಲಾಕ್‌ ಡೌನ್‌ನ ಈ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದವರಿಗಾಗಿ ಬಿಜೆಪಿಯ ಎಲ್ಲ ಕಾರ್ಯಕರ್ತರು ಒಂದು ಹೊತ್ತಿನ ಭೋಜನ ತ್ಯಜಿಸಬೇಕು. ಇದರ ಮೂಲಕ ಅವರ ಸಂಕಷ್ಟದ ವಿರುದ್ಧ ನಾವು ಒಗ್ಗಟ್ಟ ಪ್ರದರ್ಶಿಸಬೇಕು. 

– #FeedtheNeddyಕಾರ್ಯಕ್ರಮದ ಅಡಿಯಲ್ಲಿ ಅಗತ್ಯವಿರುವವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಬೇಕು. 

–ಮುಂದಿನ ಒಂದು ವಾರದಲ್ಲಿ ಬೂತ್‌ ಮಟ್ಟದಲ್ಲಿ ಎಲ್ಲರಿಗೂ ಎರಡೆರಡು ಗೃಹ ತಯಾರಿಕೆಯ ಫೇಸ್‌ ಕವರ್‌ (ಮುಖಗವಸು) ಅನ್ನು ವಿತರಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಫೇಸ್‌ ಕವರ್‌ ತಯಾರಿಸುವ ಮತ್ತು ವಿತರಿಸುವ ವಿಡಿಯೋವನ್ನು #WearFaceCoverStaySafe ಅಡಿಯಲ್ಲಿ ವ್ಯಾಪಕವಾಗಿ ಹಂಚಬೇಕು. 

– ಪಕ್ಷಕ್ಕೆ 40 ವರ್ಷ ಪೂರೈಸಿರುವ ಈ ಹೊತ್ತಿನಲ್ಲಿ ನಮ್ಮ ಪ್ರತಿ ಕಾರ್ಯಕರ್ತರು 40 ಮಂದಿಯನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ₹100 ದೇಣಿಗೆ ನೀಡುವಂತೆ ಪ್ರೇರೇಪಿಸಬೇಕು

– ಪ್ರತಿ ಕಾರ್ಯಕರ್ತರು 40 ಮನೆಗಳಿಗೆ ತೆರಳಿ ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಪೊಲೀಸ್‌, ವೈದ್ಯರು ಮತ್ತು ದಾದಿಯರು, ಸಫಾಯಿ ಕರ್ಮಚಾರಿಗಳು, ಬ್ಯಾಂಕ್‌–ಅಂಚೆ ಇಲಾಖೆ ನೌಕರರು, ಸರ್ಕಾರಿ ಮತ್ತು ನಾಗರಿಕ ಸೇವಾ ಸಿಬ್ಬಂದಿಗಳಿಗೆ  ಧನ್ಯವಾದ ಪತ್ರಗಳನ್ನು ಬರೆಸಿಕೊಳ್ಳಬೇಕು. 
ಪತ್ರಗಳನ್ನು ಸ್ತಳೀಯವಾಗಿ ನಮಗೆ ಪರಿಚಯವಿರುವ ಈ ಐದು ರಂಗದವರಿಗೆ ನೀಡಬೇಕು. 

– ಬಿಜೆಪಿ ಪಕ್ಷ ಮತ್ತು  ಪಕ್ಷದ ನಾಯಕರ ಕುರಿತ ಸಾಹಿತ್ಯ, ಲೇಖನಗಳನ್ನು ಓದಲು ಆರಂಭಿಸಿ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು