ಬುಧವಾರ, ಜನವರಿ 29, 2020
24 °C

ದೇಶದ ಜನರ ಧ್ವನಿಯನ್ನು ಬಿಜೆಪಿ ನಿರ್ಲಕ್ಷಿಸಿದೆ: ಸೋನಿಯಾ ಗಾಂಧಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ‘ದೇಶದ ಜನರ ಧ್ವನಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ’ ಎಂದು ಆರೋಪಿಸಿದ್ದಾರೆ. 

ಶುಕ್ರವಾರ ವಿಡಿಯೊ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ‘ಅಭಿಪ್ರಾಯ ಭೇದ ಹತ್ತಿಕ್ಕಲು ಬಿಜೆಪಿಯು ವಿವೇಚನಾ ರಹಿತವಾಗಿ ಬಲ ಪ್ರಯೋಗಿಸಿದೆ. ಇದು ಪ್ರಜಾಪ್ರಭುತ್ವದಲ್ಲಿ ಸಮ್ಮತವಲ್ಲ’ ಎಂದು ಹೇಳಿದ್ದಾರೆ. 

ಸಂವಿಧಾನದ ಆಶಯಗಳನ್ನು ಕಾಪಾಡಲು ಕಾಂಗ್ರೆಸ್‌ ಸದಾ ಸಿದ್ಧವಿದೆ ಎಂದಿರುವ ಸೋನಿಯಾ ಗಾಂಧಿ, ‘ನಮ್ಮ ಪಕ್ಷವು ವಿದ್ಯಾರ್ಥಿಗಳ ಪರ ನಿಂತಿದೆ. ಜನರ ಮೂಲಭೂತ ಹಕ್ಕು ಹಾಗೂ ಸಂವಿಧಾನದ ಆಶಯಗಳನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು