ಭಾನುವಾರ, ಸೆಪ್ಟೆಂಬರ್ 20, 2020
22 °C

ರಿವಾಲ್ವರ್‌ ಹಿಡಿದು ನೃತ್ಯ ಮಾಡಿದ್ದ ಬಿಜೆಪಿ ಶಾಸಕನ ಉಚ್ಚಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್‌(ಪಿಟಿಐ): ರಿವಾಲ್ವರ್‌ ಹಿಡಿದು ನೃತ್ಯ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಬಿಜೆಪಿಯಿಂದ ಅಮಾನತುಗೊಂಡಿದ್ದ ಶಾಸಕ ಕುನ್ವರ್‌ ಪ್ರಣವ್‌ ಸಿಂಗ್‌ ಅವರನ್ನು ಪಕ್ಷದಿಂದ ಶುಕ್ರವಾರ ಉಚ್ಚಾಟಿಸಲಾಗಿದೆ.

ಸಿಂಗ್‌ ನೃತ್ಯ ಮಾಡುತ್ತಿದ್ದ ವಿಡಿಯೊ ವೈರಲ್‌ ಆಗಿತ್ತು. ವಿಡಿಯೊವನ್ನು ತಿರುಚಲಾಗಿದೆ ಮತ್ತು ಖಾಸಗಿತನಕ್ಕೆ ಧಕ್ಕೆ ತರಲಾಗಿದೆ ಎಂದು ಸಿಂಗ್‌ ಆರೋಪಿಸಿದ್ದಾರೆ.

ರಿವಾಲ್ವರ್ ಹಿಡಿದುಕೊಂಡು ನೃತ್ಯ ಮಾಡುತ್ತಿದ್ದ ವಿಡಿಯೊವನ್ನು ಪತ್ರಕರ್ತರೊಬ್ಬರು ಸೆರೆ ಹಿಡಿದಿದ್ದರು. ಈ ವಿಡಿಯೊವನ್ನು ಪ್ರಕಟಿಸಿದ್ದ ಪತ್ರಕರ್ತನಿಗೆ ಕುನ್ವರ್‌ ಪ್ರಣವ್‌ ಸಿಂಗ್‌ ಬೆದರಿಕೆ ಹಾಕಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು