ಸೋಮವಾರ, ಮಾರ್ಚ್ 30, 2020
19 °C

ಬಿಜೆಪಿಯ ನವ ರಾಷ್ಟ್ರೀಯವಾದಕ್ಕೆ ಸಾವರ್ಕರ್‌ ಗುರಾಣಿ: ಶಿವಸೇನಾ ಗಂಭೀರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ನವ ರಾಷ್ಟ್ರೀಯವಾದದ ರಾಜಕಾರಣಕ್ಕೆ ‘ಗುರಾಣಿ’ಯಾಗಿ ಹಿಂದುತ್ವ ಸಿದ್ಧಾಂತವಾದಿ ಸಾವರ್ಕರ್‌ ಅವರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಶಿವಸೇನಾ ಆರೋಪಿಸಿದೆ.

ಸಾವರ್ಕರ್‌ ಬಗ್ಗೆ ಬಿಜೆಪಿಗೆ ಇರುವುದು ‘ನಕಲಿ’ ಪ್ರೀತಿ. ಕೇಂದ್ರವು ಸಾವರ್ಕರ್‌ಗೆ ಏಕೆ ಗೌರವ ಕೊಟ್ಟಿಲ್ಲ ಎಂಬ ಬಗ್ಗೆ ಬಿಜೆಪಿ ಮುಖಂಡರು ಪ್ರಶ್ನಿಸಬೇಕೇ ಹೊರತು ಮಹಾರಾಷ್ಟ್ರ ಸರ್ಕಾರವನ್ನು ಗುರಿ ಮಾಡಿಕೊಳ್ಳಬಾರದು ಎಂದು ಶಿವಸೇನಾದ ಮುಖವಾಣಿ ‘ಸಾಮ್ನಾ’ದಲ್ಲಿ ಹೇಳಲಾಗಿದೆ.

ಸಾವರ್ಕರ್‌ ವಿಚಾರದಲ್ಲಿ ಸೇನಾವನ್ನು ಮೂಲೆಗುಂಪು ಮಾಡಬಹುದು ಎಂದು ಬಿಜೆಪಿ ಯೋಚಿಸುತ್ತಿದ್ದರೆ ಅದು ಸಾಧ್ಯವಿಲ್ಲ ಎಂದೂ ತಿಳಿಸಲಾಗಿದೆ.

‘ಸಾವರ್ಕರ್‌ಗೆ ಸಂಬಂಧಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಮಹಾರಾಷ್ಟ್ರದ ಬಿಜೆಪಿ ಮುಖಂಡರು ಘೋಷಿಸಿದ್ದಾರೆ. ಸಾವರ್ಕರ್‌ ಬಗ್ಗೆ ಬಿಜೆಪಿಗೆ ಗೌರವ ಅಥವಾ ವಿಶ್ವಾಸ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಇದು ರಾಜಕೀಯ ವಿಚಾರ ಮಾತ್ರ’ ಎಂದು ವಿವರಿಸಲಾಗಿದೆ. 

‘ವೀರ ಸಾವರ್ಕರ್‌ ಅವರು ಚರ್ಚೆಯ ವಿಷಯ ಮಾತ್ರ ಅಲ್ಲ. ಅವರ ಸಿದ್ಧಾಂತಗಳನ್ನು ಜೀವನದಲ್ಲಿ ಅನುಸರಿಸಬೇಕು. ಸಾವರ್ಕರ್‌ ಅವರ ಜೀವನವು ತ್ಯಾಗ, ತತ್ವ, ಹೋರಾಟದ ಸಂಕೇತ’ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು