ಮಂಗಳವಾರ, ಫೆಬ್ರವರಿ 25, 2020
19 °C

ಕೇಜ್ರಿವಾಲ್ ದೆಹಲಿ ಶಾಲೆಗಳಲ್ಲಿ ಹನುಮಾನ್ ಚಾಲಿಸಾ ಕಡ್ಡಾಯಗೊಳಿಸಲಿ: ಬಿಜೆಪಿ

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಅರವಿಂದ ಕೇಜ್ರಿವಾಲ್ ಹನುಮಾನ್ ಚಾಲಿಸಾ ಮಂತ್ರವನ್ನು ಎಲ್ಲಾ ಶಾಲೆಗಳಲ್ಲಿ ಜಾರಿಗೆ ತರಲಿ, ಕೇಜ್ರಿವಾಲ್ ಹನುಮಾನ್ ಭಕ್ತರಾದ್ದರಿಂದ ದೆಹಲಿಯ ಎಲ್ಲಾ ಶಾಲಾ ಮಕ್ಕಳೇಕೆ ಈ ಮಂತ್ರದಿಂದ ವಂಚಿತರಾಗಬೇಕು ಎಂದು ದೆಹಲಿ ಬಿಜೆಪಿ ಮುಖಂಡ ಕೈಲಾಸ್ ವಿಜಯವರ್ಗಿಯಾ ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ಶುಭಾಶಯ ತಿಳಿಸಿರುವ ವಿಜಯ್ ವರ್ಗಿಯಾ ಅವರು, ಯಾರೆ ಬರಲಿ ಹನುಮಾನ್ ಆಶೀರ್ವಾದ ನೀಡುತ್ತಾರೆ. ಈಗ ಕಾಲ ಕೂಡಿ ಬಂದಿದೆ. ಹನುಮಾನ್ ಚಾಲೀಸಾ ಮಂತ್ರವನ್ನು ದೆಹಲಿಯ ಎಲ್ಲಾ ಶಾಲೆ, ಮದರಸಾ, ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯ ಮಾಡಿ, ದೆಹಲಿ ವಿದ್ಯಾರ್ಥಿಗಳೇಕೆ ಭಜರಂಗಬಲಿಯ ಈ ಆಶೀರ್ವಾದದಿಂದ ವಂಚಿತರಾಗಬೇಕು ಎಂದು ಕಾಲೆಳೆದಿದ್ದಾರೆ.

ಮಂಗಳವಾರ ದೆಹಲಿ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶ ಹೊರಬಿದ್ದ ಸಮಯದಲ್ಲಿ ಕೇಜ್ರಿವಾಲ್, ಈ ದಿನ ಹನುಮಾನ್ ದೇವರ ದಿನ, ದೇವರು ದೆಹಲಿಯ ಜನರನ್ನು ಆಶೀರ್ವದಿಸಿದ್ದಾರೆ ಎಂದಿದ್ದರು.

ಈ ಪ್ರತಿಕ್ರಿಯೆ ಹೊರಬಿದ್ದ ನಂತರ ಬಿಜೆಪಿಯ ವಿಜಯ್ ಈ ರೀತಿ ವ್ಯಂಗ್ಯವಾಡಿದ್ದಾರೆ. 62 ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಇದೇ 16ರಂದು ಭಾನುವಾರ ಅಧಿಕಾರವಹಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು