ಸಿಎಂ ಯೋಗಿ ಹೆಲಿಕಾಪ್ಟರ್‌ ಇಳಿಸಲು ಮತ್ತೆ ಅನುಮತಿ ನೀಡದ ಪಶ್ಚಿಮ ಬಂಗಾಳ ಸರ್ಕಾರ

7
ಜಾರ್ಖಂಡ್‌ನಿಂದ ರಸ್ತೆ ಮಾರ್ಗದಲ್ಲಿ ಪ್ರಯಾಣ

ಸಿಎಂ ಯೋಗಿ ಹೆಲಿಕಾಪ್ಟರ್‌ ಇಳಿಸಲು ಮತ್ತೆ ಅನುಮತಿ ನೀಡದ ಪಶ್ಚಿಮ ಬಂಗಾಳ ಸರ್ಕಾರ

Published:
Updated:

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಪಶ್ಚಿಮ ಬಂಗಾಳದಲ್ಲಿ ಇಳಿಸಲು ಮಂಗಳವಾರ ಅಲ್ಲಿನ ಸರ್ಕಾರ ಮತ್ತೆ ಅನುಮತಿ ನಿರಾಕರಿಸಿದೆ. ಜಾರ್ಖಂಡ್‌ನ ಬೊಕಾರೊದಲ್ಲಿ ಇಳಿದಿರುವ ಸಿಎಂ ಯೋಗಿ, ಬಿಜೆಪಿ ರ್‍ಯಾಲಿಯಲ್ಲಿ ಭಾಗಿಯಾಗಲು ರಸ್ತೆ ಮಾರ್ಗದಲ್ಲಿ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಗೆ ತೆರಳಿದ್ದಾರೆ. 

ಫೆಬ್ರುವರಿ 3ರಂದು ಸಿಎಂ ಯೋಗಿ ಆದಿತ್ಯನಾಥ್ ಉತ್ತರ ದಿನಾಜ್‌ಪುರದ ರಾಯ್‌ಗಂಜ್ ಮತ್ತು ದಕ್ಷಿಣ ದಿನಾಜ್‌ಪುರದ ಬಲೂರ್‌ಘಾಟ್‌ನಲ್ಲಿ ಬಿಜೆಪಿ ರ‍್ಯಾಲಿಗಳಲ್ಲಿ ಭಾಗಿಯಾಗಬೇಕಿತ್ತು. ಆದರೆ, ಯಾವುದೇ ಪೂರ್ವ ಸೂಚನೆ ನೀಡದೆ ಹೆಲಿಕಾಪ್ಟರ್‌ ಇಳಿಸಲು ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿತ್ತು. ಟೆಲಿಫೋನ್‌ ಮೂಲಕ ರಾಯ್‌ಗಂಜ್ ರ್‍ಯಾಲಿಯ ಜನರನ್ನು ಉದ್ದೇಶಿ ಮಾತನಾಡಿದ ಯೋಗಿ ಆದಿತ್ಯನಾಥ್‌, ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೊಂದು ಅವಮಾನಕಾರಿ ನಡೆ ಎಂದು ಆರೋಪಿಸಿದರು. 

ರಾಜ್ಯದಲ್ಲಿ ಬಿಜೆಪಿ ಸಭೆ ಸೇರಿದಂತೆ ಇತರೆ ಚಟುವಟಿಕೆಗಳನ್ನು ನಡೆಸಲು ಮಮತಾ ಸರ್ಕಾರ ಹಲವು ರೀತಿ ಅಡ್ಡಿ ಮಾಡುತ್ತಿರುವುದರ ವಿರುದ್ಧ ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ. 

ಈ ಹಿಂದೆ ಅಮಿತ್‌ ಶಾ ಅವರ ಹೆಲಿಕಾಪ್ಟರ್‌ನ್ನು ಇಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿತ್ತು. ಆಗ ಅಮಿತ್‌ ಶಾ ಮಾಲ್ಡಾ ಜಿಲ್ಲೆಯ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿತ್ತು. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಹೆಲಿಕಾಪ್ಟರ್‌ ಇಳಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿತ್ತು.

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 6

  Sad
 • 0

  Frustrated
 • 6

  Angry

Comments:

0 comments

Write the first review for this !