ಬುಧವಾರ, ಅಕ್ಟೋಬರ್ 23, 2019
24 °C

ನಾಪತ್ತೆಯಾಗಿದ್ದ ಬಿಎಸ್‌ಎಫ್‌ ಯೋಧನ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆ

Published:
Updated:

ನವದೆಹಲಿ: ನಾಪತ್ತೆಯಾಗಿದ್ದ ಬಿಎಸ್‌ಎಫ್‌ (ಗಡಿ ಭದ್ರತಾ ಪಡೆ) ಸಬ್‌ ಇನ್ಸ್‌ಪೆಕ್ಟರ್‌ ಪರಿತೋಷ್‌ ಮಂಡಲ್‌ ಅವರ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. 

ಕಳೆದ ಸೆಪ್ಟೆಂಬರ್‌ 28ರಂದು ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ನಾಪತ್ತೆಯಾಗಿದ್ದರು. ಪರಿತೋಷ್‌ ಮಂಡಲ್‌ ಗಸ್ತು ತಿರುಗುತ್ತಿದ್ದಾಗ ವ್ಯಾಪಕ ಮಳೆ ಸುರಿಯುತ್ತಿತ್ತು. ಅವರು ಸ್ಥಳೀಯ ಅಲಿಕ್‌ ನಲ್ಲ ನದಿ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ಬಿಎಸ್‌ಎಫ್‌ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. 

ಪರಿತೋಷ್‌ ಮಂಡಲ್‌ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಮಂಗಳವಾರ ಬೆಳಗ್ಗೆ ಅವರ ಮೃತದೇಹ ಪಾಕಿಸ್ತಾನದ ಗಡಿಯಲ್ಲಿ ಪತ್ತೆಯಾಗಿದೆ ಎಂದು ಪಾಕ್‌ ಅಧಿಕಾರಿಗಳು ಮಾಹಿತಿ ನೀಡಿದ್ದರು. ನಂತರ ಮೃತದೇಹವನ್ನು ಬಿಎಸ್‌ಎಫ್‌ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದರು. 

ಕಳೆದ ಮೂರು ದಿನಗಳಿಂದ ಬಿಎಸ್‌ಎಫ್‌ ಯೋಧರು ಹಾಗೂ ಸ್ಥಳೀಯ ಪೊಲೀಸರು ಪರಿತೋಷ್‌ ಮಂಡಲ್‌ ಪತ್ತೆಗಾಗಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದರು. ಪಾಕ್‌ ಯೋಧರು ಹಾಗೂ ಪಾಕಿಸ್ತಾನದ ಹಳ್ಳಿಗಳ ನಾಗರಿಕರು ಸಹ ಈ ಜಂಟಿ ಕಾರ್ಯಾಚರಣೆಗೆ ಸಹಕಾರ ನೀಡಿದ್ದರು ಎಂದು ಬಿಎಸ್‌ಎಫ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪರಿತೋಷ್‌ ಮಂಡಲ್‌ ಅವರು ಮೂಲತಹ ಪಶ್ಚಿಮ ಬಂಗಾಳ ರಾಜ್ಯದವರು. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)