ತಿರುವನಂತಪುರ: ವೈದ್ಯಕೀಯ ಚಿಕಿತ್ಸೆ ಪಡೆಯಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭಾನುವಾರ ಬೆಳಿಗ್ಗೆ ಅಮೆರಿಕಕ್ಕೆ ತೆರಳಿದರು. ಪತ್ನಿ ಕಮಲಾ ಕೂಡ ಜೊತೆಗಿದ್ದರು.

ಮಿನ್ನೆಸೊಟಾದ ರೊಚ್‌ಸ್ಟರ್‌ನಲ್ಲಿರುವ ಮೆಯೊ ಕ್ಲಿನಿಕ್‌ಗೆ ವಿಜಯನ್ ಅವರು ಚಿಕಿತ್ಸೆಗಾಗಿ ದಾಖಲಾಗಲಿದ್ದಾರೆ. ಈ ಹಿಂದೆ ನಿಗದಿಯಾದಂತೆ, ಆಗಸ್ಟ್ 19ರಂದೇ ಅವರು ಅಮೆರಿಕಕ್ಕೆ ತೆರಳಬೇಕಿತ್ತು. ಆಗಸ್ಟ್ 8ರಂದು ರಾಜ್ಯದಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹದ ಕಾರಣ ಪ್ರವಾಸವನ್ನು 10 ದಿನಗಳ ಕಾಲ ಮುಂದೂಡಿದ್ದರು.

ವಿಜಯನ್ ಅವರು ಮೂರು ವಾರಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ಆದರೆ ಯಾವ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ನೀಡಲು ಸರ್ಕಾರ ನಿರಾಕರಿಸಿದೆ.

ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಸಂಪುಟಕ್ಕೆ ಮರುಸೇರ್ಪಡೆಯಾದ ಸಚಿವ ಇ.ಪಿ.ಜಯರಾಜನ್ ಅವರು ಸಂಪುಟ ಸಭೆ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ದೇಣಿಗೆಯನ್ನು ಸ್ವೀಕರಿಸಲಿದ್ದಾರೆ.

ಕೇರಳ ರಾಜ್ಯಪಾಲ ಪಿ.ಸದಾಶಿವಂ ಅವರನ್ನುಶನಿವಾರ ರಾಜಭವನದಲ್ಲಿ ಭೇಟಿಯಾದ ವಿಜಯನ್ ಅವರು ಪ್ರವಾಸದ ಕುರಿತಂತೆ ಮಾಹಿತಿ ನೀಡಿದರು. ಅಲ್ಲದೇ, ಪ್ರವಾಹಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಲಾದ ಪರಿಹಾರ ಕಾರ್ಯ, ಪುನರ್ ನಿರ್ಮಾಣ ಕೆಲಸಗಳ ಬಗ್ಗೆ ವಿವರಣೆ ನೀಡಿದರು.

ದೇಣಿಗೆ ಸ್ವೀಕಾರ: ಪುನರ್ ನಿರ್ಮಾಣ ಕೈಗೊಳ್ಳಲು ಅನಿವಾಸಿ ಕೇರಳಿಯರಿಂದ ನೆರವು ಪಡೆಯಲು 14 ದೇಶಗಳಲ್ಲಿ ಕಾರ್ಯಕ್ರಮ ನಡೆಸಲು ಕೇರಳ ಸರ್ಕಾರ ಮುಂದಾಗಿದೆ. ಇದಲ್ಲದೇ ಸೆಪ್ಟೆಂಬರ್ 10ರಿಂದ 15ರ ತನಕ ರಾಜ್ಯದ 14 ಜಿಲ್ಲೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ದೇಣಿಗೆ ಸ್ವೀಕಾರ ಸಮಾರಂಭ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.