ಭಾನುವಾರ, ಸೆಪ್ಟೆಂಬರ್ 22, 2019
28 °C

ಡಿಕೆಶಿ ಬಂಧನ| ಕಾಂಗ್ರೆಸ್‌ ಖಂಡನೆ, ಬೆಂಬಲಿಗರ ಕಣ್ಣೀರು

Published:
Updated:

ನವದೆಹಲಿ: ಮಾಜಿ ಸಚಿವ, ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್‌ ಬಂಧನವನ್ನು ಕಾಂಗ್ರೆಸ್‌ ಹೈಕಮಾಂಡ್‌ ಖಂಡಿಸಿದೆ. 

ಶಿವಕುಮಾರ್‌ ಅವರ ವಿರುದ್ಧ ಬಿಜೆಪಿ ಕುಟಿಲ, ದ್ವೇಷದ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ದುರಾಡಳಿತವನ್ನು ಮರೆಮಾಚುವ, ಜನರ ಗಮನ ಬೇರೆಡೆ ಸೆಳೆಯುವ ತಂತ್ರವೇ ಡಿಕೆಶಿ ಬಂಧನ ಎಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ #BJPVendettaPolitics ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಬಳಸಿದಿದೆ. 

ಇನ್ನು ಬಂಧಿತ ಡಿ.ಕೆ ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಕಚೇರಿಯಿಂದ ಹೊರಗೆ ಕರೆತಂದರು. ಅದಾಗಲೇ ಇ.ಡಿ ಕಚೇರಿಯ ಎದುರು ಜಮಾಯಿಸಿದ್ದ ಬೆಂಬಲಿಗರು ಡಿಕೆಶಿ ಪರ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ತಮ್ಮ ನಾಯಕನನ್ನು ಬಂಧಿಸಿದಂತೆ ಕಣ್ಣೀರಿಟ್ಟು ಬೇಡಿದರು. 

Post Comments (+)