ರಫೇಲ್‌ ಒಪ್ಪಂದ ಅಕ್ರಮ ಆರೋಪ: ಸಂಸತ್‌ ಒಳ, ಹೊರಗೆ ವಿಪಕ್ಷಗಳ ಪ್ರತಿಭಟನೆ

7

ರಫೇಲ್‌ ಒಪ್ಪಂದ ಅಕ್ರಮ ಆರೋಪ: ಸಂಸತ್‌ ಒಳ, ಹೊರಗೆ ವಿಪಕ್ಷಗಳ ಪ್ರತಿಭಟನೆ

Published:
Updated:

ನವದೆಹಲಿ:  ‘ರಫೇಲ್ ಒಪ್ಪಂದವು ದೇಶದ ಅತ್ಯಂತ ದೊಡ್ಡ ಹಗರಣವಾಗಿದೆ. ಜಂಟಿ ಸಂಸದೀಯ ಸಮಿತಿಯನ್ನು ರಚಿಸಿ, ಆ ಮೂಲಕ ರಫೇಲ್ ಒಪ್ಪಂದದ ಬಗ್ಗೆ ತನಿಖೆ ನಡೆಸಬೇಕು’ ಎಂದು ಗುರುವಾರ ಲೋಕಸಭೆಯಲ್ಲಿ ಒತ್ತಾಯಿಸಿದ್ದ ಕಾಂಗ್ರೆಸ್‌ ಇಂದು(ಶುಕ್ರವಾರ) ಸಂಸತ್‌ನ ಒಳಗೆ ಮತ್ತು ಹೊರಗೆ ಪತ್ರಿಭಟನೆ ವ್ಯಕ್ತಪಡಿಸಿದೆ.

ಸಂಸತ್‌ ಹೊರಗೆ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಹಾಗೂ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಈ ಸಂಬಂಧ ಪ್ರತಿಭಟನೆ ನಡೆಸಿದ್ದಾರೆ.

ರಫೆಲ್‌ ಒಪ್ಪಂದ ತನಿಖೆ ನಡೆಸಬೇಕು ಎಂಬ ಬರಹವುಳ್ಳ ಫಲಕಗಳನ್ನು ಹಿಡಿದು ಕಾಂಗ್ರೆಸ್‌, ಸಿಪಿಐ, ಆರ್‌ಜೆಡಿ, ಎಎಪಿ ಸಂಸದರು ಸಂಸತ್‌ನ ಹೊರಗೆ ಪ್ರತಿಭಟನೆ ನಡೆಸಿದರು. 

ಇತ್ತ ರಾಜ್ಯಸಭೆಯಲ್ಲಿ ನೂತನ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್‌ ಅವರಿಗೆ ಮೊದಲ ಕಲಾಪದಲ್ಲೇ ವಿಪಕ್ಷಗಳನ್ನು ಸಮಾಧಾನ ಪಡಿಸಿ, ಸದನ ನಡೆಸುವ ಜವಾಬ್ದಾರಿ ಎದುರಾಗಿದೆ.

ರಫೆಲ್‌ ಒಪ್ಪಂದ ಕುರಿತು ವಿಪಕ್ಷಗಳು ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದ್ದರಿಂದ ಉಪ ಸಭಾಪತಿ ಕಲಾಪವನ್ನು ಮಧ್ಯಾಹ್ನ 2.30ರ ವರೆಗೆ ಮುಂದೂಡಿದರು. 

* ಇದನ್ನೂ ಓದಿ...

ರಫೇಲ್‌ ಒಪ್ಪಂದದಲ್ಲಿ ₹ 45,000 ಕೋಟಿ ಅಕ್ರಮ: ಮಲ್ಲಿಕಾರ್ಜುನ ಖರ್ಗೆ ಆರೋಪ
‘ಪ್ರತಿ ವಿಮಾನವನ್ನು ₹ 526 ಕೋಟಿ ವೆಚ್ಚದಲ್ಲಿ ಖರೀದಿಸಲು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಎನ್‌ಡಿಎ ಸರ್ಕಾರವು ಪ್ರತಿ ವಿಮಾನಕ್ಕೆ ₹ 1,600 ಕೋಟಿ ನೀಡುತ್ತಿದೆ. 36 ವಿಮಾನಗಳಿಗೆ ₹ 58,000 ಕೋಟಿ ನೀಡಲಾಗುತ್ತಿದೆ. ಇಡೀ ಒಪ್ಪಂದದಲ್ಲಿ ₹ 45,000 ಕೋಟಿ ಅಕ್ರಮ ನಡೆದಿದೆ’ ಎಂದು ಆರೋಪಿಸಿದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ತನಿಖೆ ನಡೆಯಬೇಕು ಎಂದು ಗುರುವಾರ ಸದನದಲ್ಲಿ ಆಗ್ರಹಿಸಿದ್ದರು.

‘ಇದು ಈವರೆಗೆ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಹಗರಣವಾಗಿದೆ. ರಫೇಲ್ ಒಪ್ಪಂದದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸತ್ತು ಮತ್ತು ದೇಶದ ಜನತೆಯ ಹಾದಿತಪ್ಪಿಸುತ್ತಿದ್ದಾರೆ. ಹೀಗಾಗಿ ಈ ಒಪ್ಪಂದವನ್ನು ಜಂಟಿ ಸಂಸದೀಯ ಸಮಿತಿಯು ತನಿಖೆಗೆ ಒಳಪಡಿಸಬೇಕು’ ಎಂದು ಖರ್ಗೆ ಆಗ್ರಹಿಸಿದ್ದರು.

ಖರ್ಗೆ ಅವರು ಮಾತು ಮುಗಿಸುತ್ತಿದ್ದಂತೆ, ಕಾಂಗ್ರೆಸ್‌ ಸದಸ್ಯರು ಸದನದಲ್ಲಿ ಧರಣಿ ಆರಂಭಿಸಿದರು. ‘ರಫೇಲ್‌ ಒಪ್ಪಂದದ ತನಿಖೆ ನಡೆಸಬೇಕು’ ಮತ್ತು ‘ದೇಶದ ಹಾದಿತಪ್ಪಿಸುವುದನ್ನು ನಿಲ್ಲಿಸಿ ಮೋದಿ’ ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಧರಣಿ ತೀವ್ರವಾದ ಕಾರಣ ಕಲಾಪವನ್ನು ಎರಡು ಬಾರಿ ಮುಂದೂಡಲಾಗಿತ್ತು.
 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !