ಬುಧವಾರ, ಜನವರಿ 22, 2020
25 °C
ರಾಹುಲ್‌_ಗಾಂಧಿ ವಾಗ್ದಾಳಿ

ಜಗತ್ತಿನ ಅತ್ಯಾಚಾರ ರಾಜಧಾನಿ ಭಾರತ: ಮೋದಿ ವಿರುದ್ಧ ರಾಹುಲ್‌ ಕೆಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಯನಾಡು(ಕೇರಳ): ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಮತ್ತು ಸರ್ಕಾರಿ ಸಂಸ್ಥೆಗಳ ದುರುಪಯೋಗದ ಬಗ್ಗೆ ಕೇರಳದಲ್ಲಿ ಇಂದು ಮಾತನಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು. 

ವಯನಾಡಿನ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ, ‘ಭಾರತವು ಜಗತ್ತಿನ ಅತ್ಯಾಚಾರ ರಾಜಧಾನಿ ಎಂದು ಹೆಸರಾಗಿದೆ. ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಭಾರತಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಹೊರ ದೇಶಗಳು ಕೇಳುತ್ತಿವೆ,’ ಎಂದು ತಿಳಿಸಿದರು.

ದೇಶವನ್ನು ನಡೆಸುತ್ತಿರುವ ವ್ಯಕ್ತಿಗೆ ಹಿಂಸೆಯಲ್ಲಿ ನಂಬಿಕೆ ಇದೆ ಎಂದಿರುವ ರಾಹುಲ್‌, ‘ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು, ಸರ್ಕಾರಿ ಸಂಸ್ಥೆಗಳು ದುರುಪಯೋಗವಾಗುತ್ತಿರುವುದು, ಜನರು ಕಾನೂನನ್ನು ಕೈಗೆ ಎತ್ತಿಕೊಳ್ಳುವುದರ ಹಿಂದೆ ಒಂದು ಕಾರಣವಿದೆ. ದೇಶವನ್ನು ನಡೆಸುತ್ತಿರುವ ವ್ಯಕ್ತಿ ಹಿಂಸೆಯಲ್ಲಿ ನಂಬಿಕೆ ಹೊಂದಿದ್ದಾರೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.  

‘ಮಹಿಳೆಯರ ಅತ್ಯಾಚಾರ, ಕಿರುಕುಳ, ದೌರ್ಜನ್ಯಗಳಂತಹ ಪ್ರಕರಣಗಳ ಬಗ್ಗೆ ಪ್ರತಿದಿನವೂ ನಾವು ಓದುತ್ತಿದ್ದೇವೆ. ದಲಿತರ ಮೇಲೆ ಹಲ್ಲೆ, ಬುಡಕಟ್ಟು ಜನಾಂಗದವರ ಮೇಲೆ ದಾಳಿಗಳಾಗುತ್ತಿವೆ. ಉನ್ನಾವ್‌ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಪ್ರಮುಖ ಆರೋಪಿ,’ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 

ಇದನ್ನೂ ಓದಿ: ಉನ್ನಾವ್ ಅತ್ಯಾಚಾರ| ಬೆಂಕಿಯಲ್ಲಿ ಉರಿಯುತ್ತಲೇ 1 ಕಿ.ಮೀ ಓಡಿದ್ದ ಸಂತ್ರಸ್ತೆ

ಇದನ್ನೂ ಓದಿ: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಸಾವು: ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಕಿಡಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು