ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊವಿಡ್-19: ಕೇಂದ್ರ, ರಾಜ್ಯ ಸರ್ಕಾರಗಳಿಂದ ಕೊರೊನಾ ಆ್ಯಪ್‌‌ಗಳ ಅಭಿವೃದ್ಧಿ

Last Updated 1 ಏಪ್ರಿಲ್ 2020, 15:41 IST
ಅಕ್ಷರ ಗಾತ್ರ
ADVERTISEMENT
""
""
""
""

ಕೊರೊನಾ ವೈರಸ್ ಭಾರತದಾದ್ಯಂತ ಹರಡುತ್ತಿದ್ದು, ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಈ ಸೋಂಕು ಹರಡುವುದನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿವೆ. ಇದಕ್ಕಾಗಿ ಇಡೀ ದೇಶ ಲಾಕ್ ಡೌನ್ ಆಗಿದೆ.ಅನೇಕ ರಾಜ್ಯ ಸರ್ಕಾರಗಳು ಸಮೂಹ ಸಾರಿಗೆ ಬಂದ್ ಮಾಡಿವೆ. ವೈದ್ಯರು, ಸರ್ಕಾರಿ ಆಡಳಿತ ಯಂತ್ರಗಳು ಸಾಕಷ್ಟು ಪ್ರಯತ್ನಗಳನ್ನು ನಡೆಸಿ ಕೊರೊನಾ ವೈರಸ್ ನಿಂದ ಈ ದೇಶದ ನಾಗರಿಕರನ್ನು ಪಾರುಮಾಡಲು ಶ್ರಮಿಸುತ್ತಿವೆ. ಇದರೊಂದಿಗೆ ಭಾರತ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿ ಕೊರೊನಾ ವೈರಸ್ ನಿಯಂತ್ರಿಸಲು ಸಾಕಷ್ಟು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರಗಳು ತಮ್ಮ ಮೊಬೈಲ್ ಅಪ್ಲಿಕೇಶನ್‌ನಿಂದ ಸೋಂಕು ಹರಡುವುದನ್ನು ತಪ್ಪಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲುಅನೇಕ ಮೊಬೈಲ್ ಅ್ಯಪ್‌ಗಳನ್ನು ಅಭಿವೃದ್ಧಿಪಡಿಸಿವೆ.

ಈ ಮೊಬೈಲ್ ಆ್ಯಪ್‌‌ಗಳು ಗೂಗಲ್ ಪ್ಲೇ ಸ್ಟೋರ್‌‌ನಲ್ಲಿ ಲಭ್ಯವಿವೆ. ಕೆಲವು ಇನ್ನೂ ಬಿಡುಗಡೆಯಾಗಬೇಕಿದೆ. ಈ ಆ್ಯಪ್‌‌ಗಳಲ್ಲಿ ಕೊರೊನಾ ಸೋಂಕಿತರ ಸ್ಥಿತಿಗತಿ, ಹೊಸದಾಗಿ ಸೋಂಕು ತಗುಲಿದ ಬಗ್ಗೆ, ಅಕ್ಕಪಕ್ಕ ಕೊರೊನಾಸೋಂಕಿತರ ಕುರಿತು ಮಾಹಿತಿ ಸೇರಿದಂತೆ ಕೊರೊನಾ ಸೋಂಕು ಕುರಿತ ವಿವರಗಳು ಲಭ್ಯವಿದೆ. ಇದನ್ನು ನೋಡಿದ ಹಲವರು ಸೋಂಕಿತರ ಖಾಸಗಿತನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಬಗೆಗಳಲ್ಲಿ ಚರ್ಚೆ ನಡೆಸಿದ್ದಾರೆ.ಕೆಲವು ಆ್ಯಪ್‌ಗಳಲ್ಲಿ ಸೋಂಕಿತರು ಸ್ವಯಂ ಪರೀಕ್ಷಿಸಿಕೊಳ್ಳುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಇವುಗಳಲ್ಲಿ ಪ್ರಮುಖವಾದ ವಿಷಯವೆಂದರುಅಷ್ಟು ಮಾಹಿತಿಯನ್ನು ಸರ್ಕಾರ ಎಲ್ಲಿ ಹೇಗೆಶೇಖರಿಸಿಕೊಳ್ಳುತ್ತದೆ ಎಂಬುದನ್ನು ತಿಳಿಸಿಲ್ಲ.

ಕೇಂದ್ರ ಹಾಗೂ ದೇಶದ ಹಲವುರಾಜ್ಯ ಸರ್ಕಾರಗಳು ಎರಡೂ ಸೇರಿ ಒಂದೇ ರೀತಿ ವೈಶಿಷ್ಟ್ಯಗಳಿರುವ ಆ್ಯಪ್‌‌ಗಳನ್ನುಅಭಿವೃದ್ಧಿಪಡಿಸಿವೆ. ಅಂತಹ ಆ್ಯಪ್‌‌ಗಳ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಕೊರೊನಾ ಕವಚ್ (corona kavach)

'ಕೊರೊನಾ ಕವಚ್' ಇದು ಕೊವಿಡ್-19 ಟ್ರ್ಯಾಕ್ ಮಾಡುವ ಆ್ಯಪ್‌. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದೀಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.ಈ ಆ್ಯಪ್‌ ವೈಶಿಷ್ಟ್ಯವೆಂದರೆ ಕೊರೊನಾ ಸೋಂಕಿತರು ಈ ಆ್ಯಪ್ ಬಳಸಬೇಕು. ಸೋಂಕಿತರು ಆ್ಯಪ್ ಡೌನ್ ಲೋಡ್ ಮಾಡಿಕೊಂಡರೆ, ಬಳಕೆದಾರರು ಎಲ್ಲಿಗೆಹೋಗುತ್ತಾರೆ ಎಂಬುದಲ್ಲದೆ, ಅವರ ಚಟುವಟಿಕೆಯನ್ನು ದಾಖಲಿಸುತ್ತದೆ. ಇದರ ಸಹಾಯದಿಂದಸೋಂಕಿತರನ್ನು ಗಮನಿಸಿಕೊಳ್ಳಬಹುದು. ಅಲ್ಲದೆ, ಸೋಂಕಿತರಲ್ಲದವರೂ ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡರೆ ಅವರ ಕಾಲ ಮತ್ತು ಸ್ಥಳವನ್ನೂ ಸರ್ಕಾರ ತಿಳಿಯಬಹುದು.

ಈ ಆ್ಯಪ್‌ನಲ್ಲಿ ದೇಶದಾದ್ಯಂತ ಕೊರೊನಾ ಸೋಂಕಿತರು, ಸೋಂಕಿನಿಂದ ಗುಣಮುಖರಾದವರು, ಮೃತಪಟ್ಟವರ ಕುರಿತ ವಿವರವನ್ನೂ ಪಡೆಯಬಹುದು.ಕೊರೊನಾ ಕವಚ್ ಉಪಯೋಗಿಸುವವರು ಆ್ಯಪ್‌ನಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಬಳಕೆದಾರರಮೊಬೈಲ್ ನಂಬರ್‌‌ಗೆ ಒನ್ ಟೈಮ್ ಪಾಸ್‌‌ವರ್ಡ್ (ಒಟಿಪಿ) ಬರುತ್ತದೆ.ಆ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಟೆಸ್ಟ್ ಯುವರ್ಸೆಲ್ಫ್ ಗೋವಾ(Test yourself Goa)

ಇದು ಗೋವಾ ಸರ್ಕಾರ ಕೊರೊನಾ ವೈರಸ್ ವಿರುದ್ಧ ಹೋರಾಡಲು ಅಭಿವೃದ್ಧಿಪಡಿಸಿರುವಆ್ಯಪ್. ಗೋವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇನ್ನೊವಾಕರ್ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. 'ಟೆಸ್ಟ್ ಯುವರ್ ಸೆಲ್ಫ್ ಗೋವಾ' ಆ್ಯಪ್‌‌ನಲ್ಲಿ ಬಳಕೆದಾರರು ಸ್ವಯಂ ಪರೀಕ್ಷಿಸಿಕೊಳ್ಳಬಹುದು. ಈ ಆ್ಯಪ್ನಲ್ಲಿ ಔಷಧ ನೀಡುವ ಕುರಿತು ಸಲಹೆ ನೀಡುವುದಿಲ್ಲ. ಹೆಸರು, ವಿಳಾಸ, ನಂಬರ್ ಹಾಗೂ ಮನೆಯ ವಿಳಾಸ ಎಲ್ಲವನ್ನೂ ನಮೂದಿಸಬೇಕು. ಇದೂ ಕೂಡ ಒಂದು ಬಗೆಯ ಸಮೀಕ್ಷೆ. ಈ ಆ್ಯಪ್ ಆರು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.ಈ ಪ್ರಶ್ನೆಗಳು ಸೋಂಕಿತರ ಪ್ರವಾಸದ ಇತಿಹಾಸ, ಪ್ರಸ್ತುತ ಕೆಮ್ಮು, ಉಸಿರಾಟದ ಸ್ಥಿತಿಗತಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ಆರು ಪ್ರಶ್ನೆಗಳಿಗೆ ನೀಡಿದ ಉತ್ತರ ಆಧರಿಸಿ ಕೊರೊನಾ ಸೋಂಕು ಇದೆಯೋ ಇಲ್ಲವೊ ಎಂಬುದನ್ನು ತಿಳಿಸುತ್ತದೆ.ಇಲ್ಲಿಯೂ ಬಳಕೆದಾರರ ಮಾಹಿತಿಯನ್ನು ಹೇಗೆ ಸಂಗ್ರಹಿಸಿಡಲಾಗುತ್ತದೆ ಎಂದು ತಿಳಿಸಿಲ್ಲ. ಪ್ರಸ್ತುತ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಆ್ಯಪಲ್ ಡಿವೈಸ್‌‌ನಲ್ಲಿ ಈ ಆ್ಯಪ್ಲಭ್ಯವಿದೆಯೋ ಇಲ್ಲವೋ ಎಂಬುದರ ಮಾಹಿತಿ ಇಲ್ಲ. ಗೋವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ವಿಶ್ವಜಿತ್ ರಾಣೆ ಟ್ವಿಟರ್ ನಲ್ಲಿ ಈ ಆ್ಯಪ್ ಬಿಡುಗಡೆಮಾಡಿದ್ದಾರೆ.

'ಟೆಸ್ಟ್ ಯುವರ್ ಸೆಲ್ಫ್ ಪುದುಚೆರಿ'(Test yourself puducherry)

ಕೇಂದ್ರಾಡಳಿತ ಪ್ರದೇಶವಾದ ಪುಚುಚೆರಿಸರ್ಕಾರವೂ ಕೊರೊನಾ ವೈರಸ್ ಸೋಂಕಿನ ಕುರಿತು ಆ್ಯಪ್ ಅಭಿವೃದ್ಧಿಪಡಿಸಿದೆ.'ಟೆಸ್ಟ್ ಯುವರ್ ಸೆಲ್ಫ್ ಪುದುಚೆರಿ' ಎಂಬ ಹೆಸರಿನ ಈ ಆ್ಯಪ್ ಅನ್ನು ಗೋವಾ ಜೊತೆ ಸೇರಿ ಅಭಿವೃದ್ಧಿ ಪಡಿಸಿರುವ ಇನೊವಕರ್ ಸಂಸ್ಥೆಯೇ ಜಂಟಿಯಾಗಿಅಭಿವೃದ್ಧಿಪಡಿಸಿದೆ. ಟೆಸ್ಟ್ ಯುವರ್ ಸೆಲ್ಫ್ ಗೋವಾ ಆ್ಯಪ್ ರಚನೆಯಂತೆಯೇ ಈ ಆ್ಯಪ್ ಕೂಡ ಅಭಿವೃದ್ಧಿಪಡಿಸಲಾಗಿದೆ.

ಇದು ವೈಯಕ್ತಿಕ ವಿವರಗಳಿಗೆ ಸಂಬಂಧಿಸಿದಪ್ರಶ್ನೆಗಳಿಗೆ ಉತ್ತರ ಪಡೆದ ಕೂಡಲೆ ಕೊರೊನಾ ಸೋಂಕಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಲಿಂಕ್ ಪಡೆದುಕೊಳ್ಳುತ್ತದೆ. ಇದು ಕೂಡ ಕೊರೊನಾ ವೈರಸ್ ಸಮೀಕ್ಷೆಯ ಒಂದುಭಾಗವಾಗಿದೆ. ಇದು ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ಲಭ್ಯವಿದೆ.

ಕೊವಿಡ್-19 ಕ್ವಾರಂಟೈನ್ ಮಾನಿಟರ್-ತಮಿಳುನಾಡು(COVID-19 Quarantine Monitor - Tamil Nadu)

ತಮಿಳುನಾಡಿನಲ್ಲಿ ಹೋಮ್ ಕ್ವಾರಂಟೈನ್‌‌ನಲ್ಲಿರುವ ಜನರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರಪಿಕ್ಶನ್ ಐ ಸಲ್ಯೂಷನ್ಸ್ ಸಂಸ್ಥೆಯ ಜೊತೆಯಾಗಿ ಕೊವಿಡ್-19 ಕ್ವಾರಂಟೈನ್ ಮಾನಿಟರ್ ಎಂಬ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.ಬಳಕೆದಾರರು ಈ ಆ್ಯಪ್ ಅನ್ನು ಬಳಸಲು ತಮಿಳುನಾಡು ನೋಂದಣಿ ಇರುವ ಮೊಬೈಲ್ ಸಂಖ್ಯೆಯನ್ನೇ ಬಳಸಬೇಕು.'ಕೊವಿಡ್-19 ಕ್ವಾರಂಟೈನ್ ಮಾನಿಟರ್' ಆ್ಯಪ್ ಉಪಯೋಗಿಸುವ ಮುಖ್ಯವಾದ ಕಾರಣ ಎಂದರೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದುತಿಳಿಸಿರುವ ಜನರ ಮೇಲ್ವಿಚಾರಣೆ ನಡೆಸುವುದೇ ಆಗಿದೆ.ಕರ್ನಾಟಕದಲ್ಲಿಯೂ ಹೋಮ್ ಕ್ವಾರಂಟೈನ್ ಗೆ ಒಳಗಾಗಿರುವ ಜನರನ್ನು ಮೇಲ್ವಿಚಾರಣೆ ನಡೆಸುವುದಾಗಿದೆ.ಇದಲ್ಲದೆ, ಆ್ಯಪ್ ಮೂಲಕ ಕರ್ನಾಟಕದಲ್ಲಿ ಗೃಹ ಬಂಧನದಲ್ಲಿರುವ ಸೋಂಕಿತರನ್ನು ಸಂಪರ್ಕಿಸುವುದು ಪ್ರಮುಖವಾಗಿದೆ.

ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಕ್ವಾರಂಟೈನ್ ನಲ್ಲಿ ಒಳಗಾಗಿರುವವರು ಸೆಲ್ಫಿ ತೆಗೆದು ಪ್ರತಿಗಂಟೆಗೂ ಕಳುಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಹಲವು ಟೀಕೆಗಳು ಕೇಳಿಬಂದಿವೆ.

ಕೊರೊನಾ ವಾಚ್ (corona watch)

ಕರ್ನಾಟಕ ಸರ್ಕಾರದ ಒಂದು ಮೊಬೈಲ್ ಆ್ಯಪ್ ಲಭ್ಯವಿದ್ದು, ಇದಕ್ಕೆ corona watch ಎಂದು ಹೆಸರಿಡಲಾಗಿದೆ. ಇದನ್ನು ಉಪಯೋಗಿಸಿಕೊಂಡುಕೊರೊನಾ ವೈರಸ್ ಸೋಂಕಿತರ ದಿನಚರಿಯನ್ನು ಗಮನಿಸುವುದು ಮುಖ್ಯ ಉದ್ದೇಶವಾಗಿದೆ. ಕಳೆದ 14 ದಿನಗಳಿಂದ ಕೊರೊನಾ ಸೋಂಕಿತರ ಉಪಚಾರ ಕೂಡಇದೇ ಆ್ಯಪ್ ಆಧರಿಸಿ ನಡೆಯುತ್ತಿದೆ. ಕರ್ನಾಟಕ ಜಿಯೋಗ್ರಫಿಕ್ ಇನ್ಫರ್ಮೇಶನ್ ಸಿಸ್ಟಮ್ ಏಜೆನ್ಸಿ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಫೋನ್ ಲೊಕೇಷನ್, ನೆಟ್ ವರ್ಕ್ ಕಾರ್ಯಕ್ಷಮತೆ ಆಧಾರದ ಮೇಲೆ ಈಆ್ಯಪ್ ಲಭ್ಯವಿದೆ. ಈ ಆ್ಯಪ್ ಕೊರೊನಾ ಸೋಂಕಿತರ ಪ್ರದೇಶವನ್ನು ತಿಳಿಸುತ್ತದೆ ವಿನಃ ಅವರ ವೈಯಕ್ತಿಕ ವಿಳಾಸವನ್ನು ಬಹಿರಂಗಪಡಿಸುವುದಿಲ್ಲ.ಇದು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ಕೋವಾ ಪಂಜಾಬ್ (Cova Punjab)

'ಕೋವಾ ಪಂಜಾಬ್ ' ಪಂಜಾಬ್ ಸರ್ಕಾರವೇ ಅಭಿವೃದ್ಧಿಪಡಿಸಿರುವ ಆ್ಯಪ್. ಈ ಆ್ಯಪ್ ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲೂ ಲಭ್ಯವಿದೆ.ಈ ಆ್ಯಪ್ ಉಪಯೋಗಿಸಬೇಕಾದರೆ, ಮೊಬೈಲ್ ನಂಬರ್ ನೀಡಿನೋಂದಣಿ ಮಾಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ವಿವರಗಳನ್ನುಡ್ಯಾಶ್ ಬೋರ್ಡ್‌ನಲ್ಲಿಯೇ ವೀಕ್ಷಿಸಬಹುದು.ಇಲ್ಲಿ ಕರ್ಫ್ಯೂ ಪಾಸ್‌ಗಳಿಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚುವರಿಯಾಗಿ ಆ್ಯಪ್ ಪ್ರಸ್ತುತ ದೇಶದ ಕೊರೊನಾ ಸೋಂಕಿತರ ಮಾಹಿತಿಯನ್ನು ನೀಡುತ್ತದೆ.

ಇತರೆ ವೈಶಿಷ್ಟ್ಯಗಳೆಂದರೆ, ಸ್ವಯಂ ಪರೀಕ್ಷಿಸುವುದರ ಮಾಹಿತಿ, ಕೊರೊನಾ ಕುರಿತ ಜಾಗೃತಿ, ಸಂಚಾರದ ಕುರಿತು ಮಾಹಿತಿ,
ಪಂಜಾಬ್ ಆಸ್ಪತ್ರೆಗಳ ಕುರಿತ ಮಾಹಿತಿ ಈ ಆ್ಯಪ್‌ನಲ್ಲಿ ದೊರೆಯಲಿದೆ. ಈ ಆ್ಯಪ್ ವೈಶಿಷ್ಟ್ಯವೆಂದರೆ ಈ ಮಾಹಿತಿ ಮೂರನೆ ವ್ಯಕ್ತಿಗಳಿಗೆ ಸಿಗುವುದಿಲ್ಲ.

ಕೇರಳ (GoK Direct)

ಕೇರಳ ಸರ್ಕಾರ ಕೂಡ ಆ್ಯಪ್ ಅಭಿವೃದ್ಧಿಪಡಿಸಿ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ನಾಗರೀಕರಲ್ಲಿ ಜಾಗೃತಿಮೂಡಿಸುವ ಕೆಲಸಕ್ಕೆ ಮುಂದಾಗಿದೆ.ಅಲ್ಲದೆ, ರಾಜ್ಯ ಸರ್ಕಾರದ ಜೊತೆ ಎರಡು ಸಂಸ್ಥೆಗಳು ಈ ಆ್ಯಪ್ ಅಭಿವೃದ್ಧಿಪಡಿಸುವಲ್ಲಿ ನೆರವಾಗಿವೆ. ಒಂದು ಗೂಗಲ್ ಪ್ಲೇ ಸ್ಟೋರ್, ಮತ್ತೊಂದು ಆಪಲ್ ಆ್ಯಪ್ ಸ್ಟೋರ್ಇದು ಇತರೆ ಆ್ಯಪ್ ಗಳಂತಲ್ಲ, ಕೇರಳ ಸರ್ಕಾರ ಇದೊಂದು ರೀತಿ ಸುದ್ದಿ ವಾಹಿನಿಯಂತೆ ಇದೆ. ಕೊರೊನಾ ವೈರಸ್ ಸುದ್ದಿಯನ್ನೇ ಈ ಆ್ಯಪ್‌ನಲ್ಲಿ ಬಿತ್ತರಿಸಲಾಗುತ್ತದೆ.ಎಲ್ಲಾ ಭಾಷೆಗಳಲ್ಲಿಯೂ ಈ ಆ್ಯಪ್ ಲಭ್ಯವಿದೆ.



ಮಹಾಕವಚ್ (Mahakavach)

ಮಹಾಕವಚ್ ಎಂಬುದು ಮಹಾರಾಷ್ಟ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್ ಆ್ಯಪ್ ಆಗಿದೆ. ಕೊರೊನಾ ಸೋಂಕಿತರು ಹಾಗೂ ಕ್ವಾರಂಟೈನ್‌ನಲ್ಲಿರುವ ಜನರನ್ನು ಮೇಲ್ವಿಚಾರಣೆ ಮಾಡುವುದು ಈ ಆ್ಯಪ್ ನ ಪ್ರಮುಖ ಉದ್ದೇಶವಾಗಿದೆ.ಆ್ಯಪ್ ತೆರೆದ ತಕ್ಷಣ ಹೋಮ್ ಪೇಜ್ ಮಹಾ ಕವಚ್ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಮೊದಲು 'private kit' ಎಂದು ತೋರಿಸುತ್ತದೆ. ಆ್ಯಪ್ ನಂತರ
ಸ್ಥಳವನ್ನು ತೋರಿಸಲು ಅನುಮತಿ ಕೇಳುತ್ತದೆ. ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಆ ಪುಟದಲ್ಲಿ ಬೇರಾವುದೇ ಮಾಹಿತಿ ಇರುವುದಿಲ್ಲ. ಅಲ್ಲದೆ,ಲೋಕೇಷನ್ ಡಾಟಾವನ್ನು ಬೇರೆಲ್ಲೂ ಹಂಚಿಕೊಳ್ಳುವುದಿಲ್ಲ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಒಂದರಲ್ಲಿ ಮಾತ್ರ ಲಭ್ಯವಿದೆ. ಇದನ್ನು ಮಹಾರಾಷ್ಟ್ರ ಸ್ಟೇಟ್ ಇನ್ನೋವೇಷನ್ಸೊಸೈಟಿ ಈ ಆ್ಯಪ್ಅಭಿವೃದ್ಧಿಪಡಿಸಿದೆ.

ಕೋವಿಡ್ ಫೀಡ್ ಬ್ಯಾಕ್ (covid19 feedback)

ದೇಶದಲ್ಲಿ ಕೊರೊನಾ ಸೋಂಕಿತರನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆ್ಯಪ್ ಇದಾಗಿದೆ. ಈ ಆ್ಯಪ್ ವೈಯಕ್ತಿಕವಾಗಿ ಕೊರೊನಾ ಸೋಂಕಿತರುಚಿಕಿತ್ಸೆ ಪಡೆದುಕೊಂಡರೆ ಅಂತಹವರನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ.
ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.ಇದಲ್ಲದೆ, Cowin-20ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿರುವ ಕೇಂದ್ರ ಸರ್ಕಾರ ಆ ಮೂಲ ಇಡೀ ದೇಶದಲ್ಲಿ ಕೊರೊನಾ ಪೀಡಿತ ಪ್ರದೇಶಗಳ ಕುರಿತ ಮಾಹಿತಿಯನ್ನುಸಂಗ್ರಹಿಸಲಿದೆ. ಈ ಆ್ಯಪ್ ಗೂಗಲ್ ಮತ್ತು ಆಪಲ್ ಆಪ್ ಸ್ಟೋರ್‌‌ಗಳಲ್ಲಿ ದೊರೆಯಲಿದೆ. ನೀತಿ ಆಯೋಗ್ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.ಇದು ಕೂಡ ಬಳಕೆದಾರರ ಖಾಸಗಿತನದ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಲ್ಲದೆ, ಈ ಆ್ಯಪ್ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದೆ.

ಇದಲ್ಲದೆ, ಕೊರೊನಾ ಮುಕ್ತ್ ಹಿಮಾಚಲ್ ಮತ್ತು ಎಸ್ ಎಂಸಿ ಕೊನ್ ವಿಡ್ 19 ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿವೆ. ಆದರೆ, ಇನ್ನೂ ಇವು ಆ್ಯಪ್ ಸ್ಟೋರ್ ಗಳಲ್ಲಿ ಲಭ್ಯವಿಲ್ಲ

ಕೊವಿಗಾರ್ಡ್ ಮತ್ತು ಕೊವಿಕೇರ್ ಎಂಬ ಮೊಬೈಲ್ ಆ್ಯಪ್ ಗಳನ್ನು ಆ್ಯಪ್‌‌ಗಳನ್ನು ಮಹಾರಾಷ್ಟ್ರ ನಗರ ಪಾಲಿಕೆ ಅಭಿವೃದ್ದಿಪಡಿಸಿದೆ. ಈ ಆ್ಯಪ್ ಗಳ ಮೂಲಕ ಕೊರೊನಾ ವೈರಸ್ ಸೋಂಕುಗಳನ್ನುತಡೆಗಟ್ಟುವುದು ಮತ್ತು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಿವೆ. ಆದರೆ, ಈ ಆ್ಯಪ್ ಆಪ್ ಸ್ಟೋರ್ ಗಳಲ್ಲಿ ಲಭ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT