ನವದೆಹಲಿ: ಭಾರತವು ಈ ವಾರ ವೈದ್ಯಕೀಯ ಸಾಮಗ್ರಿಗಳೊಂದಿಗೆ ಚೀನಾದ ವುಹಾನ್ಗೆ ವಿಮಾನವನ್ನು ಕಳುಹಿಸುತ್ತಿದ್ದು, ಕೊರೊನಾ ವೈರಸ್ ಪೀಡಿತ ಚೀನಾ ಪ್ರಾಂತ್ಯದಿಂದ ಭಾರತಕ್ಕೆ ಸ್ಥಳಾಂತರವಾಗಲು ಇಚ್ಛಿಸುವ ಭಾರತೀಯ ನಾಗರಿಕರು ಬೀಜಿಂಗ್ನಲ್ಲಿರುವ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸರ್ಕಾರ ಹೇಳಿದೆ.

ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿರುವಂತೆ, 'ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ನೆರವಾಗುವಂತೆ ಭಾರತವು ಚೀನಾದ ವುಹಾನ್ ಪ್ಯಾಂತ್ಯಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಈ ವಾರದಲ್ಲಿ ವಿಮಾನದ ಮೂಲಕ ಕಳುಹಿಸುತ್ತಿದೆ. ವಿಮಾನ ಅಲ್ಲಿಂದ ಹಿಂತಿರುಗುವಾಗ ಚೀನಾದ ವುಹಾನ್ ಅಥವಾ ಹುಬೆ ಪ್ರಾಂತ್ಯದಿಂದ ಭಾರತೀಯರನ್ನು ಕರೆತರಲು ಸೀಮಿತ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದೆ.

ಚೀನಾದ ವುಹಾನ್ನಿಂದ ಭಾರತಕ್ಕೆ ಹಿಂತಿರುಗಲು ಬಯಸುವ ನಾಗರಿಕರು ಕೂಡಲೇ +8618610952903 ಮತ್ತು +8618612083629 ಸಹಾಯವಾಣಿಯನ್ನು ಮತ್ತು helpdesk.beijing@mea.gov.in. ಇಮೇಲ್ ಮೂಲಕವು ಸಂಪರ್ಕಿಸಬಹುದು. ಸೋಮವಾರ ಸಂಜೆ 7 ಗಂಟೆಯೊಳಗೆ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಎಂದು ಕೋರಲಾಗಿದೆ.

ಕೊರೊನಾ ವೈರಸ್ ಈಗಾಗಲೇ 1,700ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಚೀನಾದಾದ್ಯಂತ 66,000ಕ್ಕೂ ಹೆಚ್ಚಿನ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಫೆಬ್ರುವರಿ 1 ಮತ್ತು 2ರಂದು ಚೀನಾದ ವುಹಾನ್ನಿಂದ ಎರಡು 747 ಬೋಯಿಂಗ್ ವಿಮಾನಗಳ ಮೂಲಕ ಭಾರತವು 650 ಜನರನ್ನು ಚೀನಾದ ವುಹಾನ್ನಿಂದ ಕರೆತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.