ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ 15 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, 500ಕ್ಕೂ ಹೆಚ್ಚು ಸಾವು

Last Updated 19 ಏಪ್ರಿಲ್ 2020, 5:15 IST
ಅಕ್ಷರ ಗಾತ್ರ

ಜಗತ್ತನ್ನು ಆವರಿಸಿರುವ ಮಹಾಮಾರಿ ಕೊರೊನಾ ವೈರಸ್‌ ಎಂಬ ಮಹಾಮಾರಿ ಭಾರತವನ್ನೂ ಇನ್ನಿಲ್ಲದಂತೆ ಕಾಡುತ್ತಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ವೃದ್ಧಿಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ.

ಭಾನುವಾರ ದೇಶದಲ್ಲಿ ಸೋಂಕಿತರ ಸಂಖ್ಯೆ 15 ಸಾವಿರದ ಗಡಿ ದಾಟಿದೆ. ಸದ್ಯ ದೇಶದಲ್ಲಿ15712 ಮಂದಿ ಸೋಂಕಿತರಿದ್ದಾರೆ. ದೇಶದಲ್ಲಿ ಈ ವರೆಗೆ507 ಮಂದಿ ಮೃತಪಟ್ಟಿದ್ದರೆ,2231 ಮಂದಿ ಗುಣಮುಖರಾಗಿದ್ದಾರೆ.

ಎಂದಿನಂತೆ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್‌, ಮಧ್ಯಪ್ರದೇಶ ರಾಜ್ಯಗಳು ಕೋವಿಡ್‌ ಸೋಂಕಿತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. ಮಹಾರಾಷ್ಟ್ರವೊಂದರಲ್ಲೇ3651 ಸೋಂಕಿತರಿದ್ದಾರೆ. ಅಲ್ಲಿ 211 ಮಂದಿ ಕೊರೊನಾ ವೈರಸ್‌ ಮಹಾಮಾರಿಗೆ ಬಲಿಯಾಗಿದ್ದಾರೆ.

ಈ ಕೆಳಗಿನ ಪಟ್ಟಿ ದೇಶದಲ್ಲಿನ ಸೋಂಕಿತರು, ಶಂಕಿತರು, ಮೃತರ ಸಂಖ್ಯೆಗಳನ್ನು ತಿಳಿಸುತ್ತದೆ.

15712: ಭಾರತದಲ್ಲಿ ಸದ್ಯ ಕೋವಿಡ್‌ ಸೋಂಕು ದೃಢಪಟ್ಟಿರುವವರ ಸಂಖ್ಯೆ

507: ದೇಶದಲ್ಲಿ ಕೋವಿಡ್‌ ಸೋಂಕಿನಿಂದ ಸತ್ತವರು

2231: ಗುಣಮುಖರಾದವರು

ಕೊರೊನಾ ವೈರಸ್‌ ಸೋಂಕು ದೃಢವಾಗಿರುವ ರಾಜ್ಯಗಳು ಮತ್ತು ಸಂಖ್ಯೆಗಳು

-ಮಹಾರಾಷ್ಟ್ರ –3651
-ದೆಹಲಿ – 1893
-ತಮಿಳುನಾಡು –1372
-ತೆಲಂಗಾಣ –809
-ರಾಜಸ್ಥಾನ – 1351
-ಮಧ್ಯಪ್ರದೇಶ –1407
-ಉತ್ತರ ಪ್ರದೇಶ –969
-ಆಂಧ್ರಪ್ರದೇಶ – 603
-ಕೇರಳ- 400
-ಗುಜಾರಾತ್‌ –1376
-ಕರ್ನಾಟಕ –384
-ಜಮ್ಮು ಮತ್ತು ಕಾಶ್ಮೀರ –341
-ಹರಿಯಾಣ –225
-ಪಂಜಾಬ್‌ –202
-ಪಶ್ಚಿಮ ಬಂಗಾಳ –310
-ಬಿಹಾರ –86
-ಒಡಿಶಾ – 61
-ಉತ್ತರಾಖಂಡ–42
-ಅಸ್ಸಾಂ –35
-ಚಂಡೀಗಢ– 23
​-ಹಿಮಾಚಲ ಪ್ರದೇಶ –39
-ಚತ್ತೀಸಗಢ–36
-ಲಡಾಕ್‌ –18
-ಜಾರ್ಖಂಡ್‌ –34
-ಅಂಡಮಾನ್‌ ನಿಕೋಬಾರ್‌ –14
-ಗೋವಾ –7
-ಪುದುಚೆರಿ – 7
-ಮಣಿಪುರ –2
-ಅರುಣಾಚಲ ಪ್ರದೇಶ –1
-ಮಿಜೊರಾಂ–1
-ತ್ರಿಪುರ–2
-ಮೇಘಾಲಯ–11

2231: ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT