ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19 ಭೀತಿಗೆ ರದ್ದಾದ ಕಾರ್ಯಕ್ರಮ, ಕ್ರೀಡೆ, ಸಭೆಗಳ ಪಟ್ಟಿ ಇಲ್ಲಿದೆ

Last Updated 13 ಮಾರ್ಚ್ 2020, 7:38 IST
ಅಕ್ಷರ ಗಾತ್ರ

ನವದೆಹಲಿ: ಚೀನಾದಲ್ಲಿ ಶುರುವಾಗಿ ಜಾಗತಿಕವಾಗಿ ನಾಲ್ಕು ಸಾವಿರಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರುವ ಕೋವಿಡ್-19 ವಿಶ್ವದಾದ್ಯಂತ ಭೀತಿ ಸೃಷ್ಟಿಸಿದೆ. ಇದರಿಂದಾಗಿ ಕ್ರೀಡಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.

ಜಗತ್ತಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ಮುಂದೂಡುವಂತೆ ಕರೆ ನೀಡಲಾಗಿದ್ದು, ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಗೆ ತಡೆ ನೀಡಲಾಗಿದೆ.

ಐಸಿಸಿ ಸಭೆ ರದ್ದು

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ: ಜಾಗತಿಕವಾಗಿ ಹಬ್ಬುತ್ತಿರುವ ಕೋವಿಡ್-19 ಭೀತಿಯಿಂದಾಗಿ ಮಾರ್ಚ್ ಅಂತ್ಯದಲ್ಲಿ ದುಬೈನಲ್ಲಿ ನಡೆಯಬೇಕಿದ್ದ ಸಭೆಗಳನ್ನು ಐಸಿಸಿ ರದ್ದುಪಡಿಸಿದೆ. ಬದಲಿಗೆ ಮೇ ಆರಂಭಕ್ಕೆ ಪೂರ್ಣ ಸಭೆ ನಡೆಸಲು ಐಸಿಸಿ ನಿರ್ಧರಿಸಿದೆ. ತುರ್ತು ಮಾತುಕತೆಗಳಿಗೆ ಕಾನ್ಫರೆನ್ಸ್ ಕಾಲ್ ಮೊರೆ ಹೋಗಿದೆ.

ದಕ್ಷಿಣ ಆಫ್ರಿಕಾ ಪ್ರವಾಸ ಸ್ಥಗಿತ

ಕೋವಿಡ್-19ನಿಂದಾಗಿ ಮುಂದಿನ ಸೂಚನೆ ಬರುವವರೆಗೂ ಆಸ್ಟ್ರೇಲಿಯಾಮಹಿಳಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಸ್ಥಗಿತಗೊಳಿಸಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಆಸ್ಟ್ರೇಲಿಯಾಪುರುಷ ತಂಡದ ಮೂರು ಪಂದ್ಯಗಳ ಏಕದಿನ ಅಂತರ ರಾಷ್ಟ್ರೀಯ ಸರಣಿಯು ನಿಗದಿಯಂತೆ ನಡೆಯಲಿವೆ.ಆದರೆ ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆಪ್ರವೇಶ ನಿರಾಕರಿಸಲಾಗಿದೆ.

ಗ್ರ್ಯಾಂಡ್ ಪ್ರಿಕ್ಸ್‌ ಬಂದ್‌: ಕೊರೊನಾವೈರಸ್‌ ಹರಡುವಿಕೆಯಿಂದಾಗಿ ಆಸ್ಟ್ರೇಲಿಯಾದಗ್ರ್ಯಾಂಡ್ ಪ್ರಿಕ್ಸ್ ಫಾರ್ಮುಲಾ ಒನ್ ಸ್ಪರ್ಧೆರದ್ಧಾಗಿದೆ. ಈ ಕುರಿತುಫಾರ್ಮುಲಾ ಒನ್‌ ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದೆ.ಆರಂಭಿಕ ಸುತ್ತಿನ ಆಸ್ಟ್ರೇಲಿಯನ್ ಓಪನ್ ಮೋಟಾರ್ ರೇಸ್ ಮಾರ್ಚ್ 15 ರಂದು ನಡೆಯಬೇಕಿತ್ತು. ಆದರೆ ಅದರ ತಂಡದ ಸದಸ್ಯನಿಗೆ ಕೋವಿಡ್-19 ದೃಢಪಟ್ಟಿರುವುದರಿಂದಾಗಿ ರದ್ದು ಮಾಡಲಾಗಿದೆ.

ಮೌಂಟ್ ಎವರೆಸ್ಟ್ ಪರ್ವತಾರೋಹಣ ಬಂದ್

ಮುಂದಿನ ಸೂಚನೆ ಬರುವವರೆಗೂ ನೇಪಾಳ ಸರ್ಕಾರವು ಎವರೆಸ್ಟ್ ಪರ್ವತಾರೋಹಣಕ್ಕೆತಡೆ ನೀಡಿದೆ. ಪರ್ವತಾರೋಹಣದ ಪರವಾನಗಿ ನೀಡುವ ಸಂಸ್ಥೆಯಾದ ಚೀನಾ ಟಿಬೆಟ್ ಪರ್ವತಾರೋಹಣ ಅಸೋಸಿಯೇಷನ್, ಕೋವಿಡ್-19 ಪರಿಣಾಮವಾಗಿಉತ್ತರ ಭಾಗದಿಂದ ಎವರೆಸ್ಟ್ ಆರೋಹಣ ರದ್ದು ಮಾಡಿದೆ. ಈ ಬಗ್ಗೆಕಠ್ಮಂಡು ಪೋಸ್ಟ್ ವರದಿ ಮಾಡಿದೆ.

ತೀವ್ರ ಸೋಂಕಿಗೆತುತ್ತಾಗಿರುವಚೀನಾ ಈಗಾಗಲೇ ಟಿಬೆಟ್ ಭಾಗದಿಂದಎವರೆಸ್ಟ್ ಏರುವ ಎಲ್ಲ ಪರ್ವತಾರೋಹಣ ರದ್ದುಗೊಳಿಸಿದೆ.

ಥೀಮ್ ಪಾರ್ಕ್‌ ಮುಚ್ಚಿದ ಡಿಸ್ನಿ

ಜನರು ಒಂದೆಡೆ ಹೆಚ್ಚಾಗಿ ಸೇರುವುದು ಕೊರೊನಾ ವೈರಸ್ ಸೋಂಕು ಹರಡಲು ನೆರವಾಗುತ್ತದೆ ಎನ್ನುವ ಆತಂಕದಿಂದಾಗಿ ಡಿಸ್ನಿ ಹಲವಾರು ಥೀಮ್ ಪಾರ್ಕ್‌ಗಳನ್ನು ತಿಂಗಳ ಕೊನೆಯಲ್ಲಿ ಮುಚ್ಚಲು ತೀರ್ಮಾನಿಸಿದೆ.
ಎಚ್ಚರಿಕೆಯ ಭಾಗವಾಗಿ ಫ್ಲೋರಿಡಾದ ವಾಲ್ಟ್ ಡಿಸ್ನಿ ವರ್ಲ್ಡ್ ರೆಸಾರ್ಟ್, ಡಿಸ್ನಿಲ್ಯಾಂಡ್ ಪ್ಯಾರಿಸ್ ರೆಸಾರ್ಟ್ ಮತ್ತು ಅನಾಹೈಮ್, ಕ್ಯಾಲಿಫೋರ್ನಿಯ, ಪ್ರಮುಖ ಆಕರ್ಷಣೆಗಳಾದಡಿಸ್ನಿಲ್ಯಾಂಡ್ ಪಾರ್ಕ್ ಮತ್ತು ಡಿಸ್ನಿಲ್ಯಾಂಡ್ ಕ್ಯಾಲಿಫೋರ್ನಿಯಾ ಅಡ್ವೆಂಚರ್ ಇವೆಲ್ಲವೂ ಈ ವಾರಾಂತ್ಯದಲ್ಲಿ ಸ್ಥಗಿತಗೊಳ್ಳುತ್ತಿವೆ ಎಂದು ವಾಲ್ಟ್ ಡಿಸ್ನಿ ಕಂಪನಿ ಗುರುವಾರ ಪ್ರಕಟಿಸಿದೆ.

ಲೀಗ್ ವಿರಾಮ ಕನಿಷ್ಠ 30 ದಿನಗಳವರೆಗೆ ಇರುತ್ತದೆ ಎಂದು ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಸಂಘ (ಎನ್‌ಬಿಎ) ಶುಕ್ರವಾರ ದೃಢಪಡಿಸಿದೆ. ಕೊರೊನಾವೈರಸ್ ಸೋಂಕು ಹರಡುತ್ತಿರುವುದರಿಂದಾಗಿ ಲೀಗ್‌ ಅನ್ನು ರದ್ದುಗೊಳಿಸುವ ನಿರ್ಧಾರವನ್ನು ಎನ್‌ಬಿಎ ಗುರುವಾರ ತೆಗೆದುಕೊಂಡಿದ್ದು, ಎಷ್ಟು ಸಮಯದವರೆಗೆ ಅಮಾನತುಗೊಳಿಸಲಾಗಿದೆ ಎಂಬ ಕುರಿತು ಸ್ಪಷ್ಟೀಕರಣ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT