ಶುಕ್ರವಾರ, ಜೂನ್ 5, 2020
27 °C

ಕೋವಿಡ್: ಕರ್ನಾಟಕದಲ್ಲಿ ಸಾವಿನ ಸಂಖ್ಯೆ 4, ದೇಶದಲ್ಲಿ ಸೋಂಕು ಪ್ರಕರಣಗಳು 3000

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

covid

ಬೆಂಗಳೂರು: ಲಾಕ್‌ಡೌನ್‌ನ 10ನೇ ದಿನವಾದ ಶುಕ್ರವಾರ ಕೋವಿಡ್ ರೋಗ ದೃಢಪಟ್ಟವರ ಸಂಖ್ಯೆಯಲ್ಲಿ ತೀವ್ರಗತಿಯ ಏರಿಕೆಯಾಗಿದೆ. ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲಿಗಿ ಜಮಾತ್ ಮರ್ಕಜ್ ಕಾರ್ಯಕ್ರಮದಲ್ಲಿ  ಭಾಗವಹಿಸಿದ ಹಲವರಿಗೆ ಸೋಂಕು ತಗುಲಿದ್ದು,  ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 3000ಕ್ಕೆ ತಲುಪಿದೆ. ಮುಂಬೈಯ ಧಾರಾವಿಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಹೆಚ್ಚಿನ ಆತಂಕ ಸೃಷ್ಟಿಸಿದೆ, ಚತ್ತೀಸ್‌ಗಡ, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 83ಕ್ಕೇರಿದೆ.

 ಕರ್ನಾಟಕದಲ್ಲಿ ನಾಲ್ಕನೇ ಸಾವು ಪ್ರಕರಣ
 ಕೋವಿಡ್ ರೋಗ ಬಾಧಿತ 75ರ ಹರೆಯದ ವ್ಯಕ್ತಿಯೊಬ್ಬರು  ಬಾಗಲಕೋಟೆಯಲ್ಲಿ ಸಾವಿಗೀಡಾಗಿದ್ದಾರೆ.

ಇಟಲಿಯಿಂದ  217 ಮಂದಿ ಭಾರತೀಯರನ್ನು ತಾಯ್ನಾಡಿಗೆ ಕರೆತಂದಿದ್ದು ಅವರನ್ನು ಐಟಿಬಿಪಿ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು.  ಇವರನ್ನು ಕೊರೊನಾ ತಪಾಸಣೆಗೊಳಪಡಿಸಿದ್ದು ಯಾರಿಗೂ ಸೋಂಕು ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ದೆಹಲಿಯಲ್ಲಿ  2 ಸಾವು
ದೆಹಲಿಯಲ್ಲಿ  ಶುಕ್ರವಾರ ಎರಡು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 6ಕ್ಕೇರಿದೆ. 93 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು 386 ಪ್ರಕರಣಗಳಿವೆ. ತಬ್ಲಿಗಿ ಜಮಾತ್‌ನಲ್ಲಿ  ಭಾಗವಹಿಸಿದ್ದ 77 ಮಂದಿಗೆ ಸೋಂಕು ಇರುವುದಾಗಿ ಪತ್ತೆಯಾಗಿದ್ದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ 259ಮಂದಿಗೆ ಸೋಂಕು ಇದೆ. 369 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ.
 
ಮಹಾರಾಷ್ಟ್ರದಲ್ಲಿ 67 ಹೊಸ ಪ್ರಕರಣ
ಮಹಾರಾಷ್ಟ್ರದಲ್ಲಿ ಇಂದು 67 ಹೊಸ  ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು 490 ಪ್ರಕರಣಗಳು ವರದಿಯಾಗಿವೆ. 6 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 26ಕ್ಕೇರಿದೆ.

ಭೋಪಾಲದ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಕೋವಿಡ್ 
 ಭೋಪಾಲ್ ಆರೋಗ್ಯ ಇಲಾಖೆಯ ನಿರ್ದೇಶಕ ಜೆ.ವಿಜಯ್ ಕುಮಾರ್  ಅವರಿಗೆ ಕೋವಿಡ್  ರೋಗ ಇರುವುದು  ದೃಢಪಟ್ಟಿದೆ.

ಒಡಿಶಾದಲ್ಲಿ ಮೂವರಿಗೆ ಕೋವಿಡ್  ರೋಗ ಇರುವುದಾಗಿ ದೃಢಪಟ್ಟಿದೆ. ಒಟ್ಟು 9 ಪ್ರಕರಣಗಳು ಇಲ್ಲಿ ವರದಿಯಾಗಿದ್ದು ಇಬ್ಬರು ಗುಣಮುಖರಾಗಿದ್ದಾರೆ.

ಗುಜರಾತಿನಲ್ಲಿ 67ರ ಹರೆಯದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು  ಸಾವಿನ ಸಂಖ್ಯೆ 9ಕ್ಕೇರಿದೆ.

ಕೇರಳದಲ್ಲಿ ಕೋವಿಡ್ ರೋಗದಿಂದ ಗುಣ ಮುಖರಾದ ಹಿರಿಯ ದಂಪತಿ ಇಂದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಕೇರಳ ಸರ್ಕಾರ  ಹೇಳಿದೆ. ಕೇರಳದಲ್ಲಿ 9 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ  295ಕ್ಕೇರಿದೆ.

ಮಹಾರಾಷ್ಟ್ರದ ಮುಂಬೈ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿದ್ದ 11 ಸಿಐಎಸ್‌ಎಫ್ ಸಿಬ್ಬಂದಿಗೆ ಕೋವಿಡ್ ರೋಗ ತಗುಲಿದೆ. ಕಳೆದ  ಕೆಲವು ವಾರಗಳಲ್ಲಿ  142 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಈ ಪೈಕಿ 4ಮಂದಿಗೆ ರೋಗ ಇರುವುದಾಗಿ ನಿನ್ನೆ ದೃಢಪಟ್ಟಿತ್ತು. ಬಾರಿ ಉಳಿದ 7 ಮಂದಿಗೆ ಇವತ್ತು ರೋಗ ದೃಢಪಟ್ಟಿದೆ. 

ತಮಿಳುನಾಡಿನಲ್ಲಿ 102 ಹೊಸ ಪ್ರಕರಣಗಳು ದಾಖಲಾಗಿದ್ದ  ಒಟ್ಟು  ಪ್ರಕರಣಗಳ ಸಂಖ್ಯೆ 411ಕ್ಕೆ ತಲುಪಿದೆ.

ಕಳೆದ ಎರಡು ದಿನಗಳಲ್ಲಿ ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿದ್ದ 647 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ರಾಜಸ್ಥಾನದಲ್ಲಿ  25 ಮಂದಿಗೆ ಸೋಂಕು ದೃಢಪಟ್ಟಿದ್ದು ಪ್ರಕರಣಗಳ ಸಂಖ್ಯೆ 161ಕ್ಕೇರಿದೆ.

ಹರ್ಯಾಣದಲ್ಲಿ 8 ಪ್ರಕರಣಗಳು ವರದಿಯಾಗಿದ್ದು ಒಟ್ಟು 43 ಪ್ರಕರಣಗಳಿವೆ. ಇದರಲ್ಲಿ 13 ಮಂದಿ ಗುಣಮುಖರಾಗಿದ್ದಾರೆ ಎಂದು ಹರ್ಯಾಣ  ಸರ್ಕಾರ ಹೇಳಿದೆ.

ವಿದೇಶದಲ್ಲಿ ಕೋವಿಡ್ -19 

ಬ್ರಿಟನ್‌ನಲ್ಲಿ ಸಾವಿಗೀಡಾದವರ ಸಂಖ್ಯೆ 3,605ಕ್ಕೇರಿದೆ.

ಫಿಲಿಪ್ಪೈನ್ಸ್‌ನಲ್ಲಿ ಒಂದೇ ದಿನ  29 ರೋಗಿಗಳು ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ  136 ಮಂದಿ ಸಾವಿಗೀಡಾಗಿದ್ದು 385 ಹೊಸ ಪ್ರಕರಣಗಳು ವರದಿಯಾಗಿವೆ.

ಫ್ರಾನ್ಸ್‌ನಲ್ಲಿ  588 ಮಂದಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು