ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದಾದ್ಯಂತ ಹೆಚ್ಚುತ್ತಿರುವ ಸೈಬರ್‌ ದಾಳಿ’

ಎಟಿಎಂ ಗುರಿಯಾಗಿಸಿ 11,816 ಪ್ರಕರಣ: ಕೇಂದ್ರ ಸಚಿವ ಸಂಜಯ್‌ ಧೋತ್ರೆ ಮಾಹಿತಿ
Last Updated 8 ಫೆಬ್ರುವರಿ 2020, 19:29 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ವರ್ಷದಿಂದ ವರ್ಷಕ್ಕೆ ಸೈಬರ್‌ ದಾಳಿಯ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಕಳೆದ ವರ್ಷದ ಅಕ್ಟೋಬರ್‌ ಅಂತ್ಯದವರೆಗೆ ಇಂತಹ ಒಟ್ಟು 3.13 ಲಕ್ಷ ಪ್ರಕರಣಗಳು ದಾಖಲಾಗಿವೆ.

ಸೈಬರ್ ಭದ್ರತೆಗಾಗಿನ ಸರ್ಕಾರಿ ಸಂಸ್ಥೆಯಾದ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿಐಎನ್‌) ಸಲ್ಲಿಸಿರುವ ವರದಿಯ ಪ್ರಕಾರ, ಐದು ವರ್ಷಗಳಲ್ಲಿ ಸೈಬರ್‌ ದಾಳಿ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿವೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಸಂಜಯ್‌ ಧೋತ್ರೆ ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ.

2017ರ ಏಪ್ರಿಲ್‌ನಿಂದ 2019ರ ಮಾರ್ಚ್‌ ಅಂತ್ಯದವರೆಗೆ ಎಟಿಎಂಗಳನ್ನು ಗುರಿಯಾಗಿಸಿಕೊಂಡ 11,816 ಪ್ರಕರಣಗಳು ನಡೆದಿವೆ ಎಂದು ತಿಳಿಸಿದ್ದಾರೆ.

ವಂಚನೆಯು ಸೈಬರ್‌ ದಾಳಿಕೋರರ ಪ್ರಮುಖ ಉದ್ದೇಶವಾಗಿದೆ. ವೈರಸ್‌, ಸ್ಪೈವೇರ್ ಹರಡುವಿಕೆ, ಸರ್ವರ್‌, ನಿರ್ಣಾಯಕ ಮೂಲ ಸೌಕರ್ಯದ ಮಾಹಿತಿ, ಮೇಲ್ವಿಚಾರಣೆ ನಿಯಂತ್ರಣ, ದತ್ತಾಂಶ ಸಂಗ್ರಹ ವ್ಯವಸ್ಥೆ ಹಾಗೂ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನೂ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಮುಖ್ಯವಾಗಿ ಇ–ಆಡಳಿತ, ಇ–ಕಾಮರ್ಸ್‌ ಅಪ್ಲಿಕೇಶನ್‌ಗಳ ಮೇಲೂ ದಾಳಿಗಳು ನಡೆದಿವೆ ಎಂದು ಅವರು ವಿವರಿಸಿದ್ದಾರೆ.

ಸಂಭಾವ್ಯ ಸೈಬರ್ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರ (ಎನ್‌ಸಿಸಿಸಿ) ಸ್ಥಾಪಿಸಲಾಗಿದೆ. ಸಮಯೋಚಿತ ಜಾಗೃತಿ ಮೂಡಿಸಿ ರಕ್ಷಣಾತ್ಮಕ ಕ್ರಮ ಕೈಗೊಳ್ಳಲು ಈ ಕೇಂದ್ರವು ನೆರವು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸಿಇಆರ್‌ಟಿಐಎನ್‌ಗೆ ಲಭ್ಯವಾದ ದಾಖಲೆಗಳ ಪ್ರಕಾರ, ಕಂಪ್ಯೂಟರ್‌ಗಳ ಇಂಟರ್‌ನೆಟ್‌ ಪ್ರೊಟೊಕಾಲ್ (ಐಪಿ) ವಿಳಾಸಗಳ ಮೇಲೆ ಅಲ್ಜೀರಿಯಾ, ಬ್ರೆಜಿಲ್‌, ಚೀನಾ, ಫ್ರಾನ್ಸ್‌, ನೆದರ್‌ಲೆಂಡ್ಸ್, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಸರ್ಬಿಯಾ, ದಕ್ಷಿಣ ಕೊರಿಯಾ, ತೈವಾನ್‌, ಟುನಿಷ್ಯಾ, ಅಮೆರಿಕ, ವಿಯೆಟ್ನಾಂ ಮತ್ತಿತರ ದೇಶಗಳಿಂದ ಈ ದಾಳಿಗಳನ್ನು ನಡೆಸಿರುವುದು ಖಚಿತವಾಗಿದೆ.

ಮತ್ತೆ ಮತ್ತೆ ನಡೆಯುವ ಸೈಬರ್‌ ದಾಳಿಯ ಪರಿಶೀಲನೆ ಹಾಗೂ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ
ಗಳ ಪ್ರಮುಖ ಸಚಿವಾಲಯಗಳು ಹಾಗೂ ಇಲಾಖೆಗಳ ಅಡಿಯಲ್ಲಿ ಬಿಕ್ಕಟ್ಟು ನಿರ್ವಹಣಾ ಯೋಜನೆಯನ್ನು ಅನು
ಷ್ಠಾನಕ್ಕೆ ತರಲಾಗಿದೆ. ಸೈಬರ್ ಭದ್ರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಣಕು ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸೈಬರ್‌ ದಾಳಿಯ ವಿವರ
49,455 (2015)
50,362 (2016)
53,117 (2017)
2,08,456 (2018)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT