ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಪನ್‌ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಹಾನಿ ಅಂದಾಜು ₹1 ಲಕ್ಷ ಕೋಟಿ

Last Updated 23 ಮೇ 2020, 12:38 IST
ಅಕ್ಷರ ಗಾತ್ರ

ಕೋಲ್ಕತ್ತ: ಅಪಂನ್‌ ಚಂಡಮಾರುತ ದೇಶದ ಪೂರ್ವ ಭಾಗದಲ್ಲಿ ತೀವ್ರ ಪ್ರಭಾವ ಬೀರಿದ್ದು, ಪಶ್ಚಿಮ ಬಂಗಾಳದಲ್ಲಿ ₹1 ಲಕ್ಷ ಕೋಟಿಯಷ್ಟು (13 ಬಿಲಿಯನ್‌ ಡಾಲರ್‌) ಮೂಲಸೌಕರ್ಯಗಳು ಹಾಗೂ ಬೆಳೆಗೆ ಹಾನಿಯಾಗಿರುವುದಾಗಿ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಪಕ್ಕದ ಬಾಂಗ್ಲಾದೇಶದಲ್ಲೂ ಆರಂಭದಲ್ಲಿ ಅಂಪಾನ್‌ನಿಂದ 130 ಮಿಲಿಯನ್‌ ಡಾಲರ್‌ನಷ್ಟು ಹಾನಿಯಾಗಿದೆ. ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಭಾರತ ಮತ್ತು ಬಾಂಗ್ಲಾದ ಕನಿಷ್ಠ 102 ಜನರು ಚಂಡಮಾರುತದ ಪರಿಣಾಮದಿಂದ ಸಾವಿಗೀಡಾಗಿದ್ದಾರೆ. ಅಂಪನ್ ಅಪ್ಪಳಿಸುವುದಕ್ಕೂ ಮುನ್ನ 30 ಲಕ್ಷಕ್ಕೂಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಇದರಿಂದಾಗಿ ಸಾಕಷ್ಟು ಪ್ರಾಣ ಹಾನಿ ತಪ್ಪಿದೆ.

ಚಂಡಮಾರುತದಿಂದ 1.3 ಕೋಟಿಗೂ ಹೆಚ್ಚು ಜನರು ಮನೆ, ಬೆಳೆ ಹಾಗೂ ಭೂಮಿ ಕಳೆದುಕೊಂಡಿದ್ದಾರೆ. ಸುಮಾರು 15 ಲಕ್ಷ ಮನೆಗಳಿಗೆ ಹಾನಿಯಾಗಿರುವುದಾಗಿ ಪಶ್ಚಿಮ ಬಂಗಾಳ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ 24 ಪರಗಣದಲ್ಲಿ 700 ಗ್ರಾಮಗಳಲ್ಲಿ ಹಾನಿ ಉಂಟಾಗಿದ್ದು, 80,000 ಜನರು ಮನೆಗಳನ್ನು ಕಳೆದುಕೊಂಡಿರುವುದಾಗಿ ವರದಿಯಾಗಿದೆ.

ಚಂಡಮಾರುತ ಗಂಟೆಗೆ 133 ಕಿ.ಮೀ ವೇಗದಲ್ಲಿ ಬೀಸಿರುವ ಪರಿಣಾಮ ರಸ್ತೆಯಲ್ಲಿ ಉರುಳಿರುವ ಮರಗಳು, ತುಂಬಿರುವ ಮಣ್ಣು ಹಾಗೂ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಕೋಲ್ಕತ್ತದಲ್ಲಿ ಆಡಳಿತವು ಕಷ್ಟಪಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT