ಗುರುವಾರ , ಆಗಸ್ಟ್ 13, 2020
26 °C

‘ರಫೇಲ್‌ ಮಾತು ಕಡಿಮೆ ಮಾಡಿ’

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ರಫೇಲ್‌ ವಿಮಾನ ಖರೀದಿ ವಿಚಾರದಲ್ಲಿ ಹೆಚ್ಚು ಮಾತನಾಡಬೇಡಿ. ಅನಗತ್ಯ ಹೇಳಿಕೆಗಳಿಂದ ಸಮಸ್ಯೆ ಹೆಚ್ಚಾಗಬಹುದು’ ಎಂದು ಎನ್‌ಡಿಎ ಅಂಗ ಪಕ್ಷವಾಗಿರುವ ಶಿವಸೇನಾ ಶುಕ್ರವಾರ ಬಿಜೆಪಿಗೆ ಸಲಹೆ ನೀಡಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬಿಜೆಪಿಗೆ ಈ ಸಲಹೆ ನೀಡಿರುವ ಪಕ್ಷವು, ‘ಮೋದಿ ಅವರ ಪ್ರಚಾರ ರ್‍ಯಾಲಿಗಳಿಗೆ ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಸಿಗುತ್ತಿರುವ ಪ್ರಚಾರದಿಂದ ಬಿಜೆಪಿ ಸಮಾಧಾನಪಟ್ಟಿದ್ದಿದ್ದರೆ ‘ನಮೋ ಟಿ.ವಿ.’ ನಿಷೇಧಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿತ್ತು’ ಎಂದೂ ಹೇಳಿದೆ.

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಈಚೆಗೆ ನಡೆದ ರ್‍ಯಾಲಿಯಲ್ಲಿ ಮಹಾರಾಷ್ಟ್ರದ ಸಚಿವ ಗಿರೀಶ್‌ ಮಹಾಜನ್‌ ಅವರ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತರು ಶಿವಸೇನಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಉಲ್ಲೇಖಿಸಿರುವ ಪತ್ರಿಕೆ, ‘ಈ ಹಲ್ಲೆಯನ್ನು ಯಾವ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾಗದು’ ಎಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು