ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬ ಭಾರತೀಯನಿಗೆ ಕೊರೊನಾ ಸೋಂಕು ತಗುಲಿದರೆ ಅದು ನಾಲ್ವರಿಗೆ ಹರಡುತ್ತದೆ:ಐಸಿಎಂಆರ್

Last Updated 24 ಮಾರ್ಚ್ 2020, 10:47 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯನೊಬ್ಬನಿಗೆ ಹೊಸ ಕೊರೊನಾ ವೈರಾಣು (Sars-Cov-2) ಸೋಂಕು ತಗುಲಿದರೆ ಕೆಲವು ಸಂದರ್ಭಗಳಲ್ಲಿ ಇದು ಸರಾಸರಿ 1.5 ವ್ಯಕ್ತಿಗಳಿಗೆ ಹರಡುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿಇದು ನಾಲ್ಕು ಮಂದಿಗೆ ಹರಡುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್)ಅಧ್ಯಯನ ವರದಿಯಲ್ಲಿ ಗಣಿತದ ಮಾದರಿ ಮೂಲಕವಿವರಿಸಲಾಗಿದೆ.

ಆರ್‌ಒ ಅಥವಾ ಆರ್ ನಾಟ್ (ರಿಪ್ರೊಡಕ್ಷನ್ ನಂಬರ್) ಗುಣಲಕ್ಷಣದ ಆಧಾರದ ಮೇಲೆ ಈ ಲೆಕ್ಕಾಚಾರ ಮಾಡಲಾಗಿದೆ.ಅಂದರೆ ಈ ಸಾಂಕ್ರಾಮಿಕ ಪಿಡುಗು ಜನರಿಂದ ಜನರಿಗೆ ಎಷ್ಟು ಬೇಗ ಹರಡುತ್ತದೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಆರ್‌ಒ ಮೌಲ್ಯವು 1ಕ್ಕಿಂತ ಕಡಿಮೆ ಇದ್ದರೆ, ಆ ವೈರಾಣು ಸಾಯಲಿದೆ ಎಂದರ್ಥ. ಅದೇ ವೇಳೆ ಮೌಲ್ಯ 2ಕ್ಕಿಂತ ಜಾಸ್ತಿ ಇದ್ದರೆ ಅದನ್ನು ಹಿಡಿದು ನಿಲ್ಲಿಸುವುದು ಕಷ್ಟ. ಭಾರತದಲ್ಲಿ ಕೋವಿಡ್ 19 ಸೋಂಕುಹರಡದಂತೆ ತಡೆಯುವ ತಂತ್ರಗಾರಿಕೆ ಬಗ್ಗೆ ಗಣಿತದ ಮಾದರಿಯಲ್ಲಿ ವಿವರಿಸುವಾಗ ಫೆಬ್ರುವರಿ ಕೊನೆ ವಾರದವರೆಗಿರುವ ಮಾಹಿತಿ ಬಳಸಿಕೊಳ್ಳಲಾಗಿದೆ.

ಶೇ.50ರಷ್ಟು ಸೋಂಕು ತಗುಲಿದೆ ಎಂದು ಶಂಕೆ ಇರುವವರನ್ನು 3 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಿದರೆ ಒಟ್ಟು ಪ್ರಕರಣಗಳ ಸಂಖ್ಯೆಯನ್ನು ಶೇ.62-ಶೇ.89ರಷ್ಟು ಕಡಿಮೆ ಮಾಡಬಹುದು.

ಫೆಬ್ರುವರಿಯಲ್ಲಿ ಈ ಅಧ್ಯಯನ ನಡೆಸುವಾಗ ಪ್ರಕರಣಗಳ ಸಂಖ್ಯೆ ಇಷ್ಟೊಂದು ಏರಿಕೆ ಆಗಿರಲಿಲ್ಲ. ಎಷ್ಟು ಪ್ರಕರಣಗಳು ತಲೆದೋರುತ್ತವೆ ಎಂಬುದನ್ನು ನೋಡುವುದಲ್ಲ, ಯಾವ ವಿಧಾನದಿಂದ ಇದನ್ನು ತಡೆಯಬಹುದು ಎಂಬುದೇ ನಮ್ಮ ಗುರಿ. ಲಾಕ್‌ಡೌನ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಇದಕ್ಕೆ ಸಹಕಾರಿ ಎಂಬುದು ನಮ್ಮ ಅಧ್ಯಯನ ತೋರಿಸುತ್ತದೆ ಎಂದಿದ್ದಾರೆ ಐಸಿಎಂಆರ್ ಎಪಿಡೆಮಿಯಾಲಜಿ ಮುಖ್ಯಸ್ಥ ಡಾ.ರಮಣ್ ಆರ್ ಗಂಗಾಖೇಡ್ಕರ್.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಸೋಂಕು ಹರಡುವಿಕೆ ಕಡಿಮೆಯಾಗಿರುವುದು ಅಧ್ಯಯನವ ವರದಿ ತೋರಿಸಿದೆ.ಸೋಂಕು ಶಂಕಿತ ಪ್ರಯಾಣಿಕರನ್ನು ಸ್ಕ್ರೀನಿಂಗ್‌ಗೆ ಒಳಪಡಿಸುವುದರಿಂದ ಈ ವೈರಾಣು ಸಮಾಜದಲ್ಲಿನ ಇತರ ಜನರಿಗೆ ಹರಡುವುದು 1-3 ವಾರಗಳ ವಿಳಂಬವಾಗುವಂತೆ ಮಾಡುತ್ತದೆ.

ಸೋಂಕು ಶಂಕಿತರು, ಸೋಂಕು ಲಕ್ಷಣ ಇರುವವರು ಸಾಮಾಜಿಕ ಅಂತರ ಕಾಯ್ದುಕೊಂಡರೆ ಮತ್ತು ಕಟ್ಟು ನಿಟ್ಟಾಗಿ ಮನೆಯೊಳಗೆ ಕುಳಿತರೆ ಶೇ 62-ಶೇ.89ರಷ್ಟು ಪ್ರಕರಣಗಳು ಕಡಿಮೆಯಾಗುತ್ತವೆ. ಪ್ರಕರಣಗಳು ಕಡಿಮೆಯಾಗುವುದರಿಂದ ವೈದ್ಯಕೀಯ ಮಧ್ಯಪ್ರವೇಶಕ್ಕೂ ಹೆಚ್ಚು ಅವಕಾಶ ಸಿಗುತ್ತದೆ.

ವಿಷಮ ಪರಿಸ್ಥಿತಿಯಲ್ಲಿ ಸೋಂಕು ನಾಲ್ವರಿಗೆ ಹರಡುವ ಸಾಧ್ಯತೆ ಇದೆ. ಸೋಂಕು ಹರಡುವುದನ್ನು ತಡೆಯಲು ಕೈಗಳ ಸ್ವಚ್ಛತೆ, ಕೆಮ್ಮುವಾಗ ಟಿಶ್ಯೂ ಪೇಪರ್‌ನಿಂದ ಬಾಯಿ ಮುಚ್ಚಿಕೊಳ್ಳುವುದು. ಕ್ವಾರೆಂಟೈನ್ ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಸೋಂಕು ಹರಡುವಿಕೆಯನ್ನು ತಡೆಯುವುದು ಮುಖ್ಯ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT