ನವದೆಹಲಿ: ಭಾರತ ತಂಡವು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಎಎಫ್ಸಿ ಮಹಿಳಾ ಏಷ್ಯಾಕಪ್ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಪ್ರಬಲ ಜಪಾನ್, ಮಾಜಿ ಚಾಂಪಿಯನ್ನರಾದ ಚೀನಾ ತೈಪೆ ಮತ್ತು ವಿಯಟ್ನಾಂ ಜೊತೆ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಈ ಚಾಂಪಿಯನ್ಷಿಪ್ಗೆ ಡ್ರಾ ಸಮಾರಂಭ ಮಂಗಳವಾರ ಸಿಡ್ನಿಯ ಟೌನ್ಹಾಲ್ನಲ್ಲಿ ನಡೆಯಿತು. 12 ತಂಡಗಳು ಆಡುವ ಈ ಚಾಂಪಿಯನ್ಷಿಪ್ ಮಾರ್ಚ್ 1 ರಿಂದ 21ರವರೆಗೆ ನಡೆಯಲಿದೆ. ಭಾರತ ತಂಡದ ಮಿಡ್ಫೀಲ್ಡರ್ ಸಂಗೀತಾ ಬಾಸ್ಫೊರೆ ಅವರು ಡ್ರಾ ಸಮಾರಂಭದಲ್ಲಿ ಹಾಜರಿದ್ದರು.

ತಂಡಗಳನ್ನು ತಲಾ ನಾಲ್ಕರಂತೆ ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ‘ಬ್ಲೂ ಟೈಗ್ರೆಸ್’ ತಂಡ ಮಾ. 4ರಂದು ಪರ್ತ್ನಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ವಿಯೆಟ್ನಾಂ ತಂಡವನ್ನು ಎದುರಿಸಲಿದೆ. ನಂತರ 7ರಂದು ಅಲ್ಲಿಯೇ ಜಪಾನ್ ತಂಡವನ್ನು, 10ರಂದು ಸಿಡ್ನಿ ಕ್ರೀಡಾಂಗಣದಲ್ಲಿ ಚೀನಾ ತೈಪೆ ತಂಡವನ್ನು ಎದುರಿಸಲಿದೆ.

ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ಫೈನಲ್ಗೆ ಮುನ್ನಡೆಯುತ್ತವೆ. ಸೆಮಿಫೈನಲ್ ತಲುಪುವ ನಾಲ್ಕು ತಂಡಗಳು ಬ್ರೆಜಿಲ್ನಲ್ಲಿ 2027ರಲ್ಲಿ ನಡೆಯಲಿರುವ ಫಿಫಾ ಮಹಿಳಾ ವಿಶ್ವಕಪ್ನಲ್ಲಿ ಆಡುವ ಅರ್ಹತೆ ಪಡೆಯುತ್ತವೆ.

ಜಪಾನ್ ಈಗ ಫಿಫಾ ರ್ಯಾಂಕಿಂಗ್ನಲ್ಲಿ ಏಳನೇ ಸ್ಥಾನ ಪಡೆದು ಏಷ್ಯಾದ ತಂಡಗಳಲ್ಲಿ ಪ್ರಬಲ ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.