ಭಾನುವಾರ, ಜೂಲೈ 12, 2020
29 °C

ವಂಚನೆ-ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿಯಿಂದ ಅಹ್ಮದ್ ಪಟೇಲ್‍ ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಂದೇಸರ ಬ್ರದರ್ಸ್‍ ಬ್ಯಾಂಕ್ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್‍ ಅವರನ್ನು 2ನೇ ಬಾರಿಗೆ ವಿಚಾರಣೆಗೆ ಒಳಪಡಿಸಿತು.

ಇ.ಡಿಯ ಮೂವರು ಸದಸ್ಯರ ತಂಡ ಹಾಗೂ ಇತರೆ ಅಧಿಕಾರಿಗಳು ಕೇಂದ್ರ ದೆಹಲಿಯಲ್ಲಿರುವ ಪಟೇಲ್ ಅವರ ನಿವಾಸಕ್ಕೆ ಬೆಳಿಗ್ಗೆ ಬಂದಿದ್ದರು. ಕೋವಿಡ್‍ ಹಿನ್ನೆಲೆಯಲ್ಲಿ ಮಾಸ್ಕ್ ಮತ್ತು ಕೈಗವುಸುಗಳನ್ನು ತೊಟ್ಟಿದ್ದರು. 

ಜೂನ್‍ 27ರಂದು ಅಹ್ಮದ್‌ ಪಟೇಲ್‌ ಅವರನ್ನು ಮೊದಲ ಬಾರಿಗೆ ವಿಚಾರಣೆಗೆ ಒಳಪಡಿಸಲಾಗಿತ್ತು. ರಾಜ್ಯಸಭೆ ಸದಸ್ಯರಾದ 79 ವರ್ಷದ ಅಹ್ಮದ್ ಪಟೇಲ್‍ ಅವರು, ಕೋವಿಡ್‍ ಹಿನ್ನೆಲೆಯಲ್ಲಿ ಇ.ಡಿ ಕಚೇರಿಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ವಿಚಾರಣೆ ನಡೆಸಲು ಒಪ್ಪಲಾಗಿತ್ತು.

ಪ್ರಕರಣದ ಸಂಬಂಧ ಪಟೇಲ್‍ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು